/newsfirstlive-kannada/media/media_files/2025/08/26/dharmasthala-sujata-bhat-2025-08-26-16-07-38.jpg)
ಸುಜಾತಾ ಭಟ್
ಸುಜಾತಾ ಭಟ್ ಮಂಗಳೂರಿನ ಬೆಳ್ತಂಗಡಿಯ SIT ಕಚೇರಿಗೆ ಆಗಮಿಸಿದ್ದಾರೆ. ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತಾ ಭಟ್ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.
ಈ ಹಿನ್ನಲೆ ಸುಜಾತಾ ಭಟ್ ಬೆಂಗಳೂರಿನಿಂದ ಕಾರಿನಲ್ಲಿ ಎಸ್ಐಟಿ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿದ್ದಾರೆ. ಸತತ 6 ಗಂಟೆಗಳ ಕಾಲ ವಿಚಾರಣೆಗಾಗಿ ಕಾದ ಸುಜಾತಾ ಅವರ ವಿಚಾರಣೆ ಆರಂಭವಾಗಿದೆ. SIT ಮುಖ್ಯಸ್ಥ ಪ್ರಣಬ್ ಮೊಹಾಂತಿ ನಿರ್ದೇಶನ ದಂತೆ ತನಿಖಾಧಿಕಾರಿ ಗುಣಪಾಲ ಜೆ ವಿಚಾರಣೆ ನಡೆಸ್ತಿದ್ದಾರೆ.
ಇದನ್ನೂ ಓದಿ:ಅನನ್ಯಾ ಭಟ್ ಕಥೆ ಹೇಳಿದ್ದ ಸುಜಾತಾ ಭಟ್ಗೆ ಈಗ ಟ್ರಬಲ್..!
ಮಧ್ಯಾಹ್ನದ ಊಟವನ್ನೂ ಸಹ ಠಾಣೆಯಲ್ಲೇ ಸುಜಾತಾ ಭಟ್ ಮಾಡಿದ್ದಾರೆ. ಈಗಾಗಲೇ ಊಟ ಮುಗಿಸಿದ್ದು ಕೆಲವೇ ಕ್ಷಣಗಳಲ್ಲಿ ಮತ್ತೆ ವಿಚಾರಣೆ ಆರಂಭವಾಗಲಿದೆ. ಅನನ್ಯಾ ಭಟ್ ಅಸ್ತಿತ್ವ ಸೇರಿದಂತೆ ಹಲವು ಮಾಹಿತಿಗಳನ್ನ ಕಲೆ ಹಾಕಲಿದ್ದಾರೆ. ತಮ್ಮ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಲು ಸೂಚನೆ ನೀಡಲಾಗಿದೆ.
ನನ್ನ ಮಗಳು 20 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು ಎಂದು ಸುಜಾತಾ ಭಟ್ ದೂರು ನೀಡಿದ್ದು, ಎಸ್ಐಟಿ ಅಧಿಕಾರಿಗಳು ಸುಜಾತಾ ಭಟ್ರ ಪ್ರಾಥಮಿಕ ಹೇಳಿಕೆಯನ್ನಷ್ಟೇ ದಾಖಲಿಸಿಕೊಂಡಿದ್ದಾರೆ. ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:KL ರಾಹುಲ್, ಪ್ರಸಿದ್ಧ್ ಕೃಷ್ಣ, ಸಿರಾಜ್ಗೆ 2 ತಿಂಗಳು ಸುದೀರ್ಘ ವಿಶ್ರಾಂತಿ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ