/newsfirstlive-kannada/media/media_files/2025/08/22/sujata-bhatt-2025-08-22-21-21-47.jpg)
ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ಕಣ್ಣು ಈಗ ಸುಜಾತಾ ಭಟ್ ಮೇಲೆ ಬಿದ್ದಿದೆ. ಸುಜಾತಾ ಭಟ್ ಮಾಡಿರುವ ಆರೋಪದ ಹಿಂದೆ ಬಿದ್ದಿರುವ ಎಸ್ಐಟಿ ಅಧಿಕಾರಿಗಳು ‘ಅನನ್ಯ’ವಾದ ಪ್ರಕರಣದ ಜಾಡು ಹಿಡಿದಿದ್ದಾರೆ.
ನನ್ನ ಮಗಳು 20 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು ಅಂತ ಸುಜಾತಾ ಭಟ್ ದೂರು ನೀಡಿದ್ದು, ಎಸ್ಐಟಿ ಅಧಿಕಾರಿಗಳು ಸುಜಾತಾ ಭಟ್ರ ಪ್ರಾಥಮಿಕ ಹೇಳಿಕೆಯನ್ನಷ್ಟೇ ದಾಖಲಿಸಿಕೊಂಡಿದ್ದಾರೆ. ಅತ್ತ ಬುರುಡೆ ಬಿಟ್ಟಿದ್ದ ಮಾಸ್ಕ್ಮ್ಯಾನ್ ಚೆನ್ನಯ್ಯ ಅರೆಸ್ಟ್ ಆಗಿದ್ದು ಇತ್ತ ಸುಜಾತಾ ಭಟ್ಗೂ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ
ಸುಜಾತಾ ಭಟ್ ಉಡುಪಿ, ಬೆಂಗಳೂರು, ಶಿವಮೊಗ್ಗದಲ್ಲಿದ್ದ ಟ್ರಾವೆಲ್ ಹಿಸ್ಟರಿ ಟ್ರ್ಯಾಕ್ ಮಾಡಿರೋ ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಸುಜಾತಾ ಭಟ್ಗೆ 70 ವಯಸ್ಸು ದಾಟಿರೋ ಕಾರಣ, ಬೆಂಗಳೂರಿನ ಮನೆಗೆ ಬಂದು ವಿಚಾರಣೆ ನಡೆಸಲು ಎಸ್ಐಟಿ ತಂಡ ಸಜ್ಜಾಗಿದೆ. ಸದ್ಯ ಅನಾರೋಗ್ಯ ಹಿನ್ನೆಲೆಯಲ್ಲಿ ಸುಜಾತಾ ಭಟ್ ಆಗಸ್ಟ್ 29ರವರೆಗೆ ಸಮಯ ಕೇಳಿದ್ದಾರೆ ಎನ್ನಲಾಗಿದೆ.
ಸುಜಾತಾ ಭಟ್ಗೆ ಸಂಕಷ್ಟ!
SIT ಅಧಿಕಾರಿಗಳಿಗೂ ಸುಜಾತಾ ಭಟ್ ಹೇಳಿಕೆಗಳು ಗೊಂದಲ ಮೂಡಿಸಿವೆ. ಸುಜಾತ ಭಟ್ ನೀಡಿರುವ ದೂರಿಗೂ ಕೊಡ್ತಿರುವ ಹೇಳಿಕೆಗಳಿಗೂ ಭಾರಿ ವ್ಯತ್ಯಾಸ ಕಂಡುಬಂದಿದೆ. ಕೆಲ ದಿನದ ಹಿಂದೆ ಸುಜಾತಾ ನಿವಾಸಕ್ಕೆ SIT ತಂಡ ಬಂದು ಹೋಗಿತ್ತು. ದೂರು ಸಂಬಂಧ ಇದುವರೆಗೆ ಯಾವುದೇ ದಾಖಲೆ ನೀಡದ ಸುಜಾತಾ ಭಟ್, ಒಂದೊಂದು ಮಾಧ್ಯಮಗಳಿಗೆ ಒಂದೊಂದು ಗೊಂದಲದ ಹೇಳಿಕೆ ನೀಡಿದ್ದಾರೆ. ಅನನ್ಯಾ ಎಂಬ ಪಾತ್ರವೇ ಸುಳ್ಳು ಅಜ್ಜಿ ಸುಜಾತಾ ಭಟ್ ಹೇಳಿದ್ದು ಹೀಗಾಗಿ ಸುಜಾತಾ ವಿರುದ್ಧ ಕೇಸ್ ದಾಖಲಿಸಿಕೊಳ್ಳಲು SIT ಚಿಂತನೆ ನಡೆಸಿದೆ ಎನ್ನಲಾಗಿದೆ. ಸುಜಾತಾ ಭಟ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳನ್ನು ನೋಟ್ ಮಾಡಿಕೊಂಡಿರೋ SIT ಅಧಿಕಾರಿಗಳು ಈ ಹೇಳಿಕೆಗಳ ಅನ್ವಯ ವಿಚಾರಣೆ ನಡೆಸಲು ತಯಾರಿ ನಡೆಸಿದೆ.
ಇದನ್ನೂ ಓದಿ: 6,500 ರೂಪಾಯಿ ಸಾಲ ಕಟ್ಟದೇ ಓಡಿ ಹೋಗಿದ್ದ ಸುಜಾತ ಭಟ್..
ಮಗಳು ಅನನ್ಯ ಭಟ್ ಕಾಣೆಯಾಗಿದ್ದಾಳೆ ಅಂತ ಸುಜಾತ್ ಭಟ್ ಹೇಳಿದ್ದು ಕಟ್ಟು ಕಥೆಯಾ, ಇಲ್ಲಿಯೂ ಸುಳ್ಳಿನ ಸುರಿಮಳೆ ಇದ್ಯಾ ಎಂಬ ಅನುಮೂನ ಮೂಡಿದೆ. ಹೀಗಾಗಿ ತನಿಖೆ ನಡೆಸಲು ಸುಜಾತ ಭಟ್ ಅವರನ್ನೂ ಎಸ್ಐಟಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಈ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಅಸಲಿಗೆ ಅನನ್ಯ ಭಟ್ ಸುಜಾತ ಮಗಳಲ್ಲ, ಇದೊಂದು ಫೇಕ್ ಕೇಸ್ ಅನ್ನೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇದನ್ನು ಕ್ಲಾರಿಫೈ ಮಾಡಿಕೊಳ್ಳಲು ಎಸ್ಐಟಿ ಸಜ್ಜಾಗಿದೆ. ಇತ್ತ ಎಸ್ಐಟಿ ಬುಲಾವ್ ನೀಡುವ ಸಾಧ್ಯತೆ ಇದ್ದು ಅಜ್ಜಿ ಸುಜಾತಾ ಭಟ್ಗೆ ನಡುಕ ಶುರುವಾಗಿದೆ.
ಇದನ್ನೂ ಓದಿ: ಕಾರಲ್ಲಿ ಬಲವಂತವಾಗಿ ಹೇಳಿಸಿದ್ರು, ಅನನ್ಯ ಭಟ್ ಇರುವುದು ಸತ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ