Advertisment

ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ; ಸಹೋದರ ವಿಜಯ್ ಸ್ಫೋಟಕ ಆರೋಪ

ಮಗಳು ಅನನ್ಯ ಭಟ್ ನಾಪತ್ತೆ ಆಗಿದ್ದಾಳೆ ಎಂದು ಹೇಳುತ್ತಿದ್ದ ಸುಜಾತ ಭಟ್ ದಿನವೊಂದು ಹೇಳಿಕೆ ನೀಡಿ ಇಡೀ ರಾಜ್ಯಕ್ಕೆ ಮಂಕುಬೂದಿ ಎರಚುತ್ತಿದ್ದಾಳೆ. ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ ಇದೆ ಎಂದು ವಾಸಂತಿ ಸಹೋದರ ವಿಜಯ್ ಅವರು ಸ್ಫೋಟಕ ಆರೋಪ ಮಾಡಿದ್ದಾರೆ.

author-image
Bhimappa
Updated On
VASANTI_BROTHER_VIJAY
Advertisment

ಕೊಡಗು: ಮಗಳು ಅನನ್ಯ ಭಟ್ ನಾಪತ್ತೆ ಆಗಿದ್ದಾಳೆ ಎಂದು ಹೇಳುತ್ತಿದ್ದ ಸುಜಾತ ಭಟ್ ದಿನವೊಂದು ಹೇಳಿಕೆ ನೀಡಿ ಇಡೀ ರಾಜ್ಯಕ್ಕೆ ಮಂಕುಬೂದಿ ಎರಚುತ್ತಿದ್ದಾಳೆ. ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ ಇದೆ ಎಂದು ವಾಸಂತಿ ಸಹೋದರ ವಿಜಯ್ ಅವರು ಸ್ಫೋಟಕ ಆರೋಪ ಮಾಡಿದ್ದಾರೆ. 

Advertisment

ನ್ಯೂಸ್ ಫಸ್ಟ್​ ಜೊತೆ ಮಾತನಾಡಿದ ವಾಸಂತಿ ಸಹೋದರ ವಿಜಯ್ ಅವರು, ಸುಜಾತ ಭಟ್ ರಾತ್ರಿ ಆದರೆ ಅನನ್ಯ ಭಟ್ ನನ್ನ ಮಗಳು ಅಲ್ಲ ಅಂತಾಳೆ. ಬೆಳಗ್ಗೆ ಆದರೆ ಅನನ್ಯ ನನ್ನ ಮಗಳು ಅಂತಾಳೆ. ಇಲ್ಲಿ ತುಂಬಾ ಸಂಶಯ ಇದೆ. ಒಂದೊಂದು ದಿನ ಒಂದೊಂದು ಹೇಳಿಕೆ ಕೊಡುತ್ತಿದ್ದಾಳೆ. ಇವಳು ನಾಟಕ ಆಡುತ್ತಿದ್ದಾಳೆ. ಆದರೆ ಸುಜಾತ ಭಟ್ ಹೋದ ಕಡೆಗೆಲ್ಲ ಸಾವೇ ಆಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​; ಆರೆಸ್ಟ್​ ಆದ ಮಾಸ್ಕ್​ಮ್ಯಾನ್ ಚಿನ್ನಯ್ಯ ಎಲ್ಲಿ ಕೆಲಸ ಮಾಡುತ್ತಿದ್ದ..? ನಿಜವಾದ ಮುಖ ರಿವೀಲ್

VASANTI_SUJATHA_BHAT

ಸೇಟು ಅಂತಾ ಇದರೆ ಅವ್ರು ಸತ್ತು ಹೋಗಿದ್ದಾರೆ. ರಂಗ ಪ್ರಸಾದ್, ರಂಗ ಪ್ರಸಾದ್ ಮಗ, ನನ್ನ ತಂಗಿ ವಾಸಂತಿ ಎಲ್ಲರೂ ಜೀವ ಬಿಟ್ಟಿದ್ದಾರೆ. ಇದರಿಂದ ಸುಜಾತ್ ಭಟ್ ಮೇಲೆ ನಮಗೆ ಸಂಶಯ ಇದೆ. ಸುಜಾತ ಬಗ್ಗೆ ಸೂಕ್ತ ತನಿಖೆ ಆಗಬೇಕು. ವೀರಾಜಪೇಟೆಯಿಂದ ಬೆಂಗಳೂರಿಗೆ ಆಗಾಗ ಓಡಾಡುತ್ತಿರುತ್ತಾರೆ. ನಮ್ಮ ವಾಸಂತಿಯ ಡೆತ್ ಸರ್ಟಿಫಿಕೆಟ್​ ತಗಳೋಕೆ ಬಂದಿದ್ದಳಂತೆ ಹೇಳಿದ್ದಾರೆ. 

Advertisment

ಹೀಗಾಗಿ ಸುಜಾತ್ ಭಟ್ ಬಗ್ಗೆ ಸರ್ಕಾರ ಸೂಕ್ತ ತನಿಖೆ ಮಾಡಬೇಕು. ವಾಸಂತಿ ಸಾವಿನ ಹಿಂದೆಯೂ ಯಾರಿದ್ದಾರೆ ಎನ್ನುವುದನ್ನ ತನಿಖೆಯಿಂದ ಹೊರ ಬರಬೇಕು. ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ ಇದೆ ಅಂತ ತನಿಖೆ ಮಾಡಬೇಕು ಎಂದು ವಿಜಯ್ ಅವರು ಆಗ್ರಹಿಸಿದ್ದಾರೆ.        
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sujata bhat Dharmasthala case dharmasthala
Advertisment
Advertisment
Advertisment