/newsfirstlive-kannada/media/media_files/2025/08/23/smg_sujatha_bhat-2025-08-23-13-03-05.jpg)
ಶಿವಮೊಗ್ಗ: ಮಗಳು ಅನನ್ಯ ಭಟ್ ನಾಪತ್ತೆ ಆಗಿದ್ದಾಳೆ ಎಂದು ಹೇಳುತ್ತಿರುವ ಸುಜಾತ ಭಟ್ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ರಿಪ್ಪನ್ ಪೇಟೆಯಲ್ಲಿ ವಾಸವಿದ್ದಾಗ ಸಾಲ ಮಾಡಿ ಓಡಿ ಹೋಗಿದ್ದಾಳೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಕೇಂದ್ರಿಯ ಸಹಕಾರಿ ಬ್ಯಾಂಕಿನ ನಿರ್ದೇಶಕರು ಎಂ.ಎಂ ಪರಮೇಶ್ವರ್ ಅವರು ಆರೋಪಿಸಿದ್ದಾರೆ.
ವಿಡಿಯೋವೊಂದರಲ್ಲಿ ಮಾತನಾಡಿರುವ ಶಿವಮೊಗ್ಗ ಜಿಲ್ಲಾ ಕೇಂದ್ರಿಯ ಸಹಕಾರಿ ಬ್ಯಾಂಕಿನ ನಿರ್ದೇಶಕರು ಎಂ.ಎಂ ಪರಮೇಶ್ವರ್ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಸುಜಾತ ಭಟ್ ಎಂದು ಏನು ಹೆಸರು ಕೇಳಿ ಬರುತ್ತಿದೆ ಆಕೆ 1999 ರಿಂದ 2007ರವರೆಗೆ ರಿಪ್ಪನ್ ಪೇಟೆಯಲ್ಲಿದ್ದರು. ಆಗ ತನ್ನ ಸುತ್ತಮುತ್ತಲಿನ ಜನರನ್ನು ಸೇರಿಸಿಕೊಂಡು ತೇಜಶ್ವಿನಿ ಸ್ವಸಹಾಯ ಸಂಘ ಎಂದು ಸ್ಥಾಪನೆ ಮಾಡಿಕೊಂಡಿದ್ದರು. ಈ ಸಂಘದ ಬ್ಯಾಂಕ್ನ ಅಕೌಂಟ್ ಅನ್ನು ರಿಪ್ಪನ್ ಪೇಟೆಯ ಪ್ರಾಥಮಿಕ ಕೃಷಿ ಬ್ಯಾಂಕಿನಲ್ಲಿ ತೆರೆದಿದ್ದರು ಎಂದು ಹೇಳಿದ್ದಾರೆ.
ಬ್ಯಾಂಕ್ ಅಕೌಂಟ್ ಓಪನ್ ಮಾಡಿದ ನಂತರ ಸಂಘದಿಂದ ಸಾಲವನ್ನ ಪಡೆದುಕೊಂಡಿದ್ದರು. 2005ರಲ್ಲಿ 6,500 ರೂಪಾಯಿ ಸಾಲ ಪಡೆದಿದ್ದರು. ಇದನ್ನು ಒಂದು ವರ್ಷದ ಒಳಗೆ ತೀರಿಸಬೇಕಿತ್ತು. ಆದರೆ ಆವಾಗ ಊರು ಬಿಟ್ಟು ಬೆಂಗಳೂರಿಗೆ ಹೋದರು ಎಂದು ಇಲ್ಲಿ ಸುದ್ದಿಯಾಗಿತ್ತು. ಇದರಿಂದ ಸಂಘದಲ್ಲಿದ್ದ ಇತರೆ ಸದಸ್ಯರು ತಮ್ಮ ಕೈಯಿಂದ ಸಾಲ ತೀರಿಸಿದ್ದರು. ಸುಜಾತ ಅವರು ಇಲ್ಲಿ ಪ್ರಭಾಕರ್ ಬಾಳಿಗರ ಮನೆಯಲ್ಲಿ ಸಂಸಾರ ಮಾಡಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ; ಸಹೋದರ ವಿಜಯ್ ಸ್ಫೋಟಕ ಆರೋಪ
ಪ್ರಭಾಕರ್ ಬಾಳಿಗರ ನಮ್ಮ ಅಂಗಡಿ ಪಕ್ಕದಲ್ಲೇ ಬೀಡಾ ಅಂಗಡಿ ಓಪನ್ ಮಾಡಿದ್ದರು. ಆವಾಗ ನಾನು ಅವರನ್ನು ಹತ್ತಿರದಿಂದ ನೋಡಿದ್ದೆ. ಅವರು ನಾಯಿಯನ್ನು ಸಾಕಿದ್ದಾಗ ಅವರ ಮನೆಗೆ ಹೋಗಿದ್ವಿ. ಅವರ ಮನೆಯಲ್ಲಿ ಕಾಲಿಲ್ಲದ ನಾಯಿ, ಕಣ್ಣಿಲ್ಲದ ನಾಯಿಗಳನ್ನು ಸಾಕಿದ್ದರು. ಅವಾಗ ಈ ಬಗ್ಗೆ ಪ್ರಶ್ನೆ ಮಾಡಿದ್ದಾಗ, ನಮಗೆ ಮಕ್ಕಳು ಇಲ್ಲದ ಕಾರಣ ನಾಯಿಯಲ್ಲೇ ಮಕ್ಕಳನ್ನು ಕಾಣುತ್ತೇವೆ ಎಂದಿದ್ದರು.
ನಮ್ಮಲ್ಲಿ ಒಂದು ಕಡೆ ಸುಜಾತ ಪಿ. ಬಾಳಿಗ ಎಂದು ಸೈನ್ ಮಾಡಿದ್ದಾರೆ. ಇನ್ನೊಂದು ಕಡೆ ಸುಜಾತ ಪ್ರಭಾಕರ್ ಎಂದು ಸೈನ್ ಮಾಡಿದ್ದಾರೆ. ಆದರೆ ಎಲ್ಲಿಯೂ ಸುಜಾತ ಭಟ್ ಎಂದು ಸೈನ್ ಮಾಡಿರುವುದು ಇಲ್ಲ ಎಂದು ಶಿವಮೊಗ್ಗ ಜಿಲ್ಲಾ ಕೇಂದ್ರಿಯ ಸಹಕಾರಿ ಬ್ಯಾಂಕಿನ ನಿರ್ದೇಶಕರು ಎಂ.ಎಂ ಪರಮೇಶ್ವರ್ ಅವರು ಹೇಳಿದ್ದಾರೆ. ಜೊತೆಗೆ ಅವರು ಸಹಿ ಮಾಡಿರುವ ದಾಖಲೆಗಳನ್ನ ಬಿಡುಗಡೆ ಮಾಡಿದ್ದಾರೆ. ಫೋಟೋ ಕೂಡ ಇದರಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ