ಕಾರಲ್ಲಿ ಬಲವಂತವಾಗಿ ಹೇಳಿಸಿದ್ರು, ಅನನ್ಯ ಭಟ್ ಇರುವುದು ಸತ್ಯ; ಮತ್ತೆ ಉಲ್ಟಾ ಹೊಡೆದ ಸುಜಾತ ಭಟ್

ಯೂಟ್ಯೂಬ್​ ಸಂದರ್ಶನದಲ್ಲಿ ಅನನ್ಯ ಭಟ್​ ಕಾಲ್ಪನಿಕ ಪಾತ್ರ ಎಂದಿದ್ದ ಸುಜಾತ ಭಟ್​ ಮತ್ತೆ ಉಲ್ಟಾ ಹೊಡೆದಿದ್ದಾರೆ. ನನ್ನನ್ನು ಕಾರಿನಲ್ಲಿ ಕರೆದೊಯ್ದು ಬಲವಂತದಿಂದ ಆ ರೀತಿ ಹೇಳಿಕೆ ಕೊಡಿಸಿದ್ದಾರೆ ಎಂದಿದ್ದಾರೆ.

author-image
Bhimappa
SUJATHA_BHAT (1)
Advertisment

ಯೂಟ್ಯೂಬ್​ ಸಂದರ್ಶನದಲ್ಲಿ ಅನನ್ಯ ಭಟ್​ ಕಾಲ್ಪನಿಕ ಪಾತ್ರ ಎಂದಿದ್ದ ಸುಜಾತ ಭಟ್​ ಮತ್ತೆ ಉಲ್ಟಾ ಹೊಡೆದಿದ್ದಾರೆ. ನನ್ನನ್ನು ಕಾರಿನಲ್ಲಿ ಕರೆದೊಯ್ದು ಬಲವಂತದಿಂದ ಆ ರೀತಿ ಹೇಳಿಕೆ ಕೊಡಿಸಿದ್ದಾರೆ. ಎಲ್ಲ ಸತ್ಯವನ್ನು ಎಸ್​ಐಟಿ ಮುಂದೆ ಹೇಳ್ತೀನಿ ಎಂದು ಹೈಡ್ರಾಮಾ ಸೃಷ್ಟಿಸಿದ್ದಾರೆ.

ಊಸರವಳ್ಳಿ ಕ್ಷಣಕ್ಕೊಂದು, ಹೇಗೆ ನಂಬ್ಲಿ ನಾನು ನಿನ್ನ ಅನ್ನೋ ಮಾತಿದೆ. ಆದ್ರೀಗ ಸುಜಾತ ಭಟ್​ ಮಾತುಗಳನ್ನು ಕೇಳ್ತಿದ್ರೆ, ಈ ಮಾತು ನೆನಪಾಗುತ್ತೆ. ಊರಸವಳ್ಳಿ ಬಣ್ಣ ಬದಲಿಸಿದಂತೆ. ಸುಜಾತ ಭಟ್​  ಕೂಡ ಗಂಟೆಗೊಂದು ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲದ ಜೊತೆ ಹೈಡ್ರಾಮಾವನ್ನೇ ಸೃಷ್ಟಿಸ್ತಿದ್ದಾಳೆ. 

ANANYA BHAT ALIAS VASANTHI (1)

ಬಲವಂತದಿಂದ ನನ್ನ ಬಳಿ ಹೇಳಿಕೆ.. ಉಲ್ಟಾ ಹೊಡೆದ ಸುಜಾತ ಭಟ್​

ಅನನ್ಯಾ ಭಟ್​ ಕೇವಲ ಕಾಲ್ಪನಿಕ ಪಾತ್ರ. ಮಗಳೇ ಇಲ್ಲ. ಜಮೀನಿಗೋಸ್ಕರ ಕೆಲವು ಈ ರೀತಿ ಹೇಳಿಸಿದ್ರು ಅಂತ ಯೂಟ್ಯೂಬ್​ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದರು. ಈ ಸಂದರ್ಶನ ಮಾಧ್ಯಮಗಳ ಪ್ರಸಾರವಾಗ್ತಿದ್ದಂತೆ, ಬಣ್ಣವನ್ನೇ ಬದಲಿಸಿದ್ದು, ಮಾಧ್ಯಮಗಳ ಮುಂದೆ ಮತ್ತೆ ಹೈಡ್ರಾಮಾ ಮಾಡಿದ್ದಾರೆ. ಖಾಸಗಿ ಚಾನೆಲ್​​ನವರು ಕಾರಿನಲ್ಲಿ ಕೂರಿಸಿಕೊಂಡು ಬಲವಂತಾಗಿ ಹೇಳಿಸಿದ್ದಾರೆಂದು ಉಲ್ಟಾ ಹೊಡೆದಿದ್ದಾರೆ.

ಖಾಸಗಿ ಚಾನೆಲ್​ ಅವರು ಬಂದು ನನ್ನ ಹೆದರಿಸಿ ಬಿಟ್ಟು ಕಾರು ಒಳಗೆ ಕೂರಿಸಿ ಈ ರೀತಿ ಮಾಡಿದ್ದಾರೆ. ನಾನಾಗೇ ಅವರ ಮುಂದೆ ಏನು ಹೇಳಿಲ್ಲ.  

ಸುಜಾತ ಭಟ್, ದೂರುದಾರೆ

ಯೂಟ್ಯೂಬ್​ ಚಾನೆಲ್​ಗೆ ಸಂದರ್ಶ ನೀಡುವಾಗ, ಗಿರೀಶ್​​ ಮಟ್ಟಣ್ಣ, ಜಯಂತ್​ ಎಂಬುವರು ನನ್ನಿಂದ ಅನನ್ಯ ಭಟ್​ ಕಾಲ್ಪನಿಕ ಪಾತ್ರದ ಬಗ್ಗೆ ಹೇಳಿಸಿದ್ರು ಎಂದು ಬಾಂಬ್​ ನೀಡಿದರು. ಈ ಬಗ್ಗೆ ನ್ಯೂಸ್​ಫಸ್ಟ್​ ಪ್ರಶ್ನೆಗೆ ಉತ್ತರಿಸುವಾಗ ತಮ್ಮ ಹೇಳಿಕೆಯನ್ನೇ ಬದಲಿಸಿದ್ದಾರೆ.

ಇನ್ನು ಅನನ್ಯ ಭಟ್​ ಇಲ್ಲ, ಫೋಟೋಗಳೆಲ್ಲ ಫೇಕ್​ ಎಂದು ಯೂಟ್ಯೂಬ್​ ಚಾನೆಲ್​ಗೆ ಮಾಹಿತಿ ನೀಡಿದ್ರು. ಆದ್ರೆ, ನ್ಯೂಸ್​​ಫಸ್ಟ್​ ಬಳಿ ಅನನ್ಯ ಭಟ್​ ಇದ್ದಳು, ಸತ್ತು ಹೋಗಿದ್ದಾಳೆ ಎಲ್ಲವನ್ನೂ ಎಸ್​ಐಟಿ ಮುಂದೆ ಹೇಳ್ತೇವೆ ಅಂತ ಮತ್ತೆ ವರಸೆ ಬದಲಿಸಿದ್ದಾರೆ.

ನಾನು ಎಸ್​ಐಟಿ ಬಳಿಗೆ ಹೋಗುತ್ತೇನೆ. ಅಲ್ಲಿ ಹೋಗು ಏನು ಮಾಡಬೇಕು ಅದನ್ನು ಮಾಡುತ್ತೇನೆ. ದಯವಿಟ್ಟು ಇದು ಇಲ್ಲಿಗೆ ಸ್ಟಾಪ್ ಮಾಡಿ. ದಯವಿಟ್ಟು ನನ್ನ ಕ್ಷಮೆ ಇರಲಿ. ಅನನ್ಯ ಭಟ್ ಜೀವಂತವಾಗಿಲ್ಲ. ಇದು ಸತ್ಯ. ಫೋಟೋ ಅನನ್ಯದ್ದು. 

ಸುಜಾತ ಭಟ್, ದೂರುದಾರೆ

ಇದನ್ನೂ ಓದಿ: ಸ್ಯಾಂಡಲ್​ವುಡ್ ಆ್ಯಂಕರ್ ಅನುಶ್ರೀ ಮದುವೆ.. ಬೆಂಗಳೂರಿನ ಯಾವ ಸ್ಥಳದಲ್ಲಿ ವಿವಾಹ ಸಂಭ್ರಮ?

SUJATHA_BHAT

ಇಂದು ಎಸ್​ಐಟಿ ವಿಚಾರಣೆಗೆ ಸುಜಾತ ಹಾಜರು ಡೌಟ್​

ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿ, ದಿನದಿಂದ ದಿನ್ಕೂ ಸ್ಫೋಟಕ ತಿರುವ ಪಡೀತಿದ್ದ, ಅನನ್ಯ ಭಟ್​ ಕೇಸ್​ ಅನ್ನು ಎಸ್​ಐಟಿಗೆ ವರ್ಗಾಹಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಬಗ್ಗೆ ಇವತ್ತು ಸುಜಾತ ಭಟ್​ಗೆ ವಿಚಾರಣೆಗೆ ಹಾಜರಾಗಲು ಎಸ್​ಐಟಿ ನೋಟಿಸ್​ ನೀಡಿತ್ತು. ಆದ್ರೀಗ ಅನಾರೋಗ್ಯದ ನೆಪವೊಡ್ಡಿ ಆಗಸ್ಟ್​ 29ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ತನಿಖಾಧಿಕಾರಿಗೆ ಸುಜಾತ ಭಟ್​ ಪತ್ರ ಬರೆದು, ಪ್ಲಾನ್​ ಬದಲಾವಣೆ ಮಾಡಿರೋದು ಮತ್ತಷ್ಟು ಅನುಮಾನಕ್ಕೆ ನಾಂದಿಯಾಡಿದೆ.

ಅದೇನೆ ಇರಲಿ, ಅನನ್ಯ ಭಟ್​ ಇದ್ದಳೋ ಇಲ್ವೋ, ಬದುಕಿದ್ದಾಳೋ ಸತ್ತಿದ್ದಾಳೋ, ಕಾಲ್ಪನಿಕ ಪಾತ್ರವೋ, ಅಸಲಿಯೋ ಅನ್ನೋದನ್ನು ಎಸ್​ಐಟಿ ಸೂಕ್ತ ತನಿಖೆ ಮೂಲಕ, ಅನನ್ಯ ಕೇಸ್​ನ ಅಸಲಿಯತ್ತನ್ನು ಬಹಿರಂಗ ಪಡಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SUJATHA BHAT AND ANANYA BHAT CASE
Advertisment