/newsfirstlive-kannada/media/media_files/2025/11/23/green-heartfulness-run-1-2025-11-23-10-44-11.jpg)
ಬೆಂಗಳೂರು: ನಗರದ ಕಬ್ಬನ್ ಪಾರ್ಕ್​​ನಲ್ಲಿ ನಿನ್ನೆ ಗ್ರೀನ್ ಹಾರ್ಟ್‌ಫುಲ್‌ನೆಸ್ ರನ್ (Green Heartfulness Run 2025) ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ‘ರನ್ ವಿತ್ ಹಾರ್ಟ್​, ರನ್ ವಿತ್ ಅರ್ಥ್​’ ಎಂಬ ಶೀರ್ಷಿಕೆಯಡಿ ನಡೆದ ಇವೆಂಟ್​ನಲ್ಲಿ ನೂರಾರು ಮಂದಿ ಭಾಗವಹಿದ್ದರು.
ಹಾರ್ಟ್‌ಫುಲ್‌ನೆಸ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇದರಲ್ಲಿ ಭಾಗವಹಿಸಿ ಮಾತನ್ನಾಡಿರುವ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ‘ಇಂಥ ಕಾರ್ಯಕ್ರಮಗಳು​ ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಪರಿಸರದ ಅರಿವನ್ನು ನೀಡುತ್ತವೆ. ‘ರನ್ ವಿತ್ ಹಾರ್ಟ್​, ರನ್ ವಿತ್ ಅರ್ಥ್’ ಎಂಬ ವಿಷಯವು ತುಂಬಾ ಅದ್ಭುತವಾಗಿದೆ. ಮನುಷ್ಯರು, ಪ್ರಕೃತಿ ಮತ್ತು ನಾವು ವಾಸಿಸುವ ಭೂಮಿಯ ನಡುವಿನ ಸಾಮರಸ್ಯ ಇದರಲ್ಲಿ ಅಡಗಿದೆ ಎಂದರು.
/filters:format(webp)/newsfirstlive-kannada/media/media_files/2025/11/23/green-heartfulness-run-3-2025-11-23-10-50-19.jpg)
ಈ ನಗರದ ನಾಗರಿಕರಾಗಿ ಅರಣ್ಯಗಳನ್ನ, ಉದ್ಯಾನವನಗಳಮ್ಮ, ಮರಗಳನ್ನ ಮತ್ತು ಗಾಳಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಒಂದು ಸಸಿಯನ್ನು ನೆಡುವುದು, ಪ್ಲಾಸ್ಟಿಕ್ ಕಡಿಮೆ ಮಾಡುವುದು ಅಥವಾ ಸುಸ್ಥಿರ ಜೀವನಶೈಲಿಯನ್ನು ಆರಿಸುವಂತಹ ಸಣ್ಣ, ಸಣ್ಣ ಕಾರ್ಯಗಳು ದೊಡ್ಡ ಬದಲಾವಣೆಯ ಅಲೆಗಳನ್ನು ಸೃಷ್ಟಿಸುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅದಮ್ಯ ಚೇತನ ಫೌಂಡೇಷನ್​​ನ ಸಹ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, Run with Heart, Run for Earth ಎಂಬ ವಿಷಯ ನನ್ನಲ್ಲಿ ಗಾಢವಾಗಿ ಪ್ರತಿಧ್ವನಿಸುತ್ತಿದೆ. ಅದಮ್ಯ ಚೇತನದಲ್ಲಿ ಇರುವ ನಾವು ಜಗತ್ತಿನ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಸಮಾಜ ಸೇವೆಯು ಪ್ರಾರಂಭವಾಗುತ್ತದೆ ಎಂದು ನಂಬಿದ್ದೇವೆ. ಅದು ಹಸಿರಿಗಾಗಿ ನಾವು ತೆಗೆದುಕೊಳ್ಳುವ ಕ್ರಮಗಳು, ಶೂನ್ಯ-ತ್ಯಾಜ್ಯ ಅಡುಗೆಮನೆಗಳು ಅಥವಾ ಸಸಿ ನೆಡುವ ಅಭಿಯಾನಗಳ ಮೂಲಕ ಇರಲಿ. ಇಂಥ ಸಾಮೂಹಿಕ ಕಾರ್ಯಕ್ರಮಗಳು ನಿಜವಾಗಿಯೂ ಶಾಶ್ವತವಾಗಿ ಪರಿಣಾಮ ಬೀರುತ್ತವೆ ಎಂದರು.
ಇದನ್ನೂ ಓದಿ:‘ಆದಷ್ಟು ಬೇಗ..’ ಖರ್ಗೆಗೆ ಸಿದ್ದರಾಮಯ್ಯ ಮಾಡಿದ ಮನವಿ ಏನು?
/filters:format(webp)/newsfirstlive-kannada/media/media_files/2025/11/23/green-heartfulness-run-2025-11-23-10-44-58.jpg)
ಇಲ್ಲಿ ‘ಗ್ರೀನ್ ಹಾರ್ಟ್‌ಫುಲ್‌ನೆಸ್ ರನ್’ ಎಂದರೆ ಪರಿಸರ ಮತ್ತು ಆಂತರಿಕ ಪ್ರಜ್ಞೆ ಎರಡನ್ನೂ ಜಾಗೃತಗೊಳಿಸುವುದಾಗಿದೆ ಎಂದು ಹಾರ್ಟ್‌ಫುಲ್‌ನೆಸ್ ಸಂಸ್ಥೆಯ ಬೆಂಗಳೂರಿನ ಕಾರ್ಯಕ್ರಮ ಸಂಯೋಜಕ ಗಣೇಶ್ ಮತ್ತು ಶಕ್ತಿಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ಲೋಕಾಯುಕ್ತ ಶಿವಪ್ರಕಾಶ್ ದೇವರಾಜು, ನಟ ನಿರಂಜನ್ ಶೆಟ್ಟಿ ಮತ್ತು ಹಾರ್ಟ್‌ಫುಲ್‌ನೆಸ್ ಇನ್‌ಸ್ಟಿಟ್ಯುಟ್ ವಲಯ ಸಂಯೋಜಕರಾದ ಗಿರೀಶ ಟೋಟ್ಲೂರ್ ಸೇರಿ ಮೊದಲಾದ ಗಣ್ಯರು ಭಾಗಿಯಾಗಿದ್ದರು.
/filters:format(webp)/newsfirstlive-kannada/media/media_files/2025/11/23/green-heartfulness-run-2-2025-11-23-10-49-23.jpg)
3K ಮತ್ತು 5K ವಿಭಾಗದಲ್ಲಿ ರನ್ನಿಂಗ್..!
ಈ ಕಾರ್ಯಕ್ರಮವು ಪರಿಸರ ಕುರಿತ ಅರಿವು, ಸ್ವಾಸ್ಥ್ಯ ಮತ್ತು ಮೈಂಡ್‌ಫುಲ್ ಲೈಫ್ ಬಗ್ಗೆ ಅರಿವು ಮೂಡಿಸುವುದಾಗಿದೆ. ವಿಶೇಷ ಅಂದರೆ ನಿನ್ನೆಯ ಕಾರ್ಯಕ್ರಮದಲ್ಲಿ ಎಲ್ಲಾ ವಯೋಮಾನದವರು ಭಾಗಿಯಾಗಿದ್ದರು. ವಿಶ್ರಾಂತಿ ವಿಧಾನ, ಧ್ಯಾನಕ್ಕೆ ಸಂಬಂಧಿಸಿ ತರಬೇತಿ ನಡೆಯಿತು. ನಂತರ 3K ಮತ್ತು 5K ವಿಭಾಗದಲ್ಲಿ ರನ್ನಿಂಗ್ ನಡೆಯಿತು. ಕಾರ್ಯಕ್ರಮದ ಮುಂದುವರಿದ ಭಾಗವಾಗಿ ನವೆಂಬರ್ 29, 2025 ರಂದು ಬೂತನಹಳ್ಳಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಇದೆ. ಯೋಜನೆಯ ಮೊದಲನೇ ಹಂತದಲ್ಲಿ 3000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us