/newsfirstlive-kannada/media/media_files/2025/12/19/bengaluru-4-2025-12-19-14-07-38.jpg)
ಬೆಂಗಳೂರು: ಆಟವಾಡುತ್ತಿದ್ದ ಬಾಲಕನಿಗೆ ಕಾಲಿನಿಂದ ಒದ್ದು ದುರುಳನೊಬ್ಬ ಕ್ರೌರ್ಯ ಮರೆದಿರುವ ಘಟನೆ ಬನಶಂಕರಿ ಠಾಣಾ ವ್ಯಾಪ್ತಿಯ ತ್ಯಾಗರಾಜನಗರದಲ್ಲಿ ನಡೆದಿದೆ.
ತನ್ನ ಪಾಡಿಗೆ ತಾನು ಆಟವಾಡ್ತಿದ್ದ ಬಾಲಕನನ್ನ ರಂಜನ್​ ಎಂಬಾತ ಫುಟ್​ಬಾಲ್​ನಂತೆ ಒದ್ದು ದರ್ಪ ಮೆರೆದಿದ್ದಾನೆ. ರಂಜನ್ ಹಲ್ಲೆಯಿಂದ ಬಾಲಕನ ಮೈ-ಕೈಗೆ ಗಾಯವಾಗಿದ್ದು, ಬಾಲಕನ ತಾಯಿ ದೂರು ಆಧರಿಸಿ ಬನಶಂಕರಿ ಪೊಲೀಸರು ಆರೋಪಿ ರಂಜನ್​ನನ್ನ ಬಂಧಿಸಿದ್ದಾರೆ.
ಈ ಜಿಮ್​ ಟ್ರೈನರ್​ ರಂಜನ್​ ಹಿಂದೆಯೂ ಏರಿಯಾದಲ್ಲಿ ಆಟವಾಡ್ತಿದ್ದ ಹಲವು ಮಕ್ಕಳ ಮೇಲೆ ಹಲ್ಲೆ ನಡೆಸಿರೋ ಸಿಸಿಟಿವಿ ದೃಶ್ಯಾವಳಿ ಸಹ ನ್ಯೂಸ್ ಫಸ್ಟ್​ಗೆ ಲಭ್ಯವಾಗಿದೆ. ಇನ್ನು ಪೊಲೀಸರು ಆರೋಪಿಯನ್ನ ಸ್ಟೇಷನ್ ಬೇಲ್ ಮೇಲೆ ಬಿಟ್ಟು ಕಳಿಸಿದ್ದಾರೆ. BNA 115/2 (ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು) ಸೆಕ್ಷನ್ ಹಾಕಿ ಸ್ಟೇಷನ್ ಬೇಲ್ ನೀಡಿ ಬಿಟ್ಟು ಕಳುಹಿಸಿದ್ದಾರೆ. ಸಿಸಿಟಿವಿಯಲ್ಲಿ ಉದ್ದೇಶಪೂರ್ವಕವಾಗಿ ಗಾಯಗೊಳಿಸಿರೋದು ಗೊತ್ತಾಗಿದೆ.
ಮಕ್ಕಳ ಆಯೋಗ ಪ್ರತಿಕ್ರಿಯೆ
ಘಟನೆ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೊಸಂಬೆ ಪ್ರತಿಕ್ರಿಯಿಸಿ.. ಮಕ್ಕಳಿಗೆ 18 ವರ್ಷ ಪೂರ್ಣ ಗೊಳ್ಳುವವರೆಗೆ ಗೌರವಯುತವಾಗಿ ಬದುಕಲು ಅವಕಾಶ ಕೊಡಬೇಕು. ಪದೇ ಪದೇ ಈ ತರಹದ ಘಟನೆ ನಡೆಯುವುದು ಒಳ್ಳೆ ಬೆಳೆವಣಿಗೆ ಅಲ್ಲ. ಮಕ್ಕಳ ಆಯೋಗದಿಂದ ಕೂಡ ದೂರು ದಾಖಲು ಮಾಡ್ತೇವೆ ಎಂದಿದ್ದಾರೆ.
ಪ್ರಕರಣ ಸಂಬಂಧ ಮಕ್ಕಳ ಆಯೋಗದಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಮಕ್ಕಳ ಆಯೋಗ ದಕ್ಷಿಣ ವಿಭಾಗದ ಡಿಸಿಪಿಗೆ ವರದಿ ಕೇಳಿದೆ. ಘಟನೆಯ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ವರದಿ ಕೇಳಿದೆ.
ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್: ಕೆ.ಆರ್.ಪುರದ ಬಿಜೆಪಿ ಶಾಸಕ ಭೈರತಿ ಬಸವರಾಜುಗೆ ಬಂಧನ ಭೀತಿ : ಸಿಗದ ನಿರೀಕ್ಷಣಾ ಜಾಮೀನು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us