/newsfirstlive-kannada/media/media_files/2025/09/18/bengalore-rain-2-2025-09-18-06-47-03.jpg)
ಬೆಂಗಳೂರು: ನಿನ್ನೆ ತಡರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆರಾಯ ರುದ್ರನರ್ತನ ತೋರಿದ್ದಾನೆ. ನಗರದಾದ್ಯಂತ ಭಾರೀ ಮಳೆಯಾಗಿದ್ದು, ಲಾಲ್ ಬಾಗ್ ಮುಖ್ಯ ರಸ್ತೆಯಲ್ಲಿ ಬೃಹತ್ ಮರವೊಂದು ಧರೆಗುರುಳಿದೆ.
ಮರ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸವಾರರು ಹೈರಾಣಾಗಿದ್ದರು. ಮರ ಬಿದ್ದು ಗಂಟೆಗಳೇ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸರಿಲಿಲ್ಲ. ಮರಬಿದ್ದ ರಭಸಕ್ಕೆ ವಿದ್ಯುತ್ ಕೇಬಲ್ ಕೂಡ ತುಂಡಾಗಿ ಕರೆಂಟ್ ಕೂಡ ಸ್ಥಗಿತಗೊಳಿಸಿರ್ಲಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.
ಎಲ್ಲೆಲ್ಲಿ ಭಾರೀ ಮಳೆ..?
ಲಾಲ್ ಬಾಗ್ ರಸ್ತೆ, ಕಾರ್ಪೊರೇಷನ್, ಟೌನ್ ಹಾಲ್, ಜಯನಗರ, ಶಾಂತಿನಗರ, ಡಬ್ಬಲ್ ರೋಡ್, ಮೆಜೆಸ್ಟಿಕ್, ಕತ್ರಿಗುಪ್ಪೆ, ಶ್ರೀನಿವಾಸನಗರ, ವಿಜಯನಗರ, ಹನುಮಂತ ನಗರ, ಗಿರಿನಗರ, ಆಶ್ರಮ, ಶಯವಂತಪುರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ.
ಜನ ಜೀವನಕ್ಕೆ ತೊಂದರೆ
ಇದನ್ನೂ ಓದಿ:ತೆಲಂಗಾಣದ ಇಂಜಿನಿಯರ್ ಬಳಿ 2 ಕೋಟಿ ಕ್ಯಾಶ್ ಜಫ್ತಿ, ಬರೋಬ್ಬರಿ 6.5 ಕೋಟಿ ಆಕ್ರಮ ಆಸ್ತಿ ಪತ್ತೆ!!
ಮಳೆಯಿಂದಾಗಿ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗ್ತಿದ್ದವರು ತೊಂದರೆಗೆ ಸಿಲುಕಿದರು. ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಮಾತ್ರವಲ್ಲ, ನಗರದ ಪ್ರಮುಖ ಭಾಗಳಲ್ಲಿ ಟ್ರಾಫಿಕ್ ಬಿಸಿ ತಟ್ಟಿದೆ. ಬೆಳಗ್ಗೆ ಕೂಡ ಮಳೆ ಸುರಿಯುತ್ತಿದ್ದು, ದಿನ ನಿತ್ಯದ ಚಟುವಟಿಕೆಗಳಿಗೆ ತೊಂದರೆ ಆಗಿದೆ.
ಎಚ್ಚರಿಕೆ ನೀಡಿದ್ದ ಹವಾಮಾನ ಇಲಾಖೆ
ಬೆಂಗಳೂರಿನಲ್ಲಿ ಭಾರಿ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ನಿನ್ನೆಯೇ ಎಚ್ಚರಿಕೆ ನೀಡಿತ್ತು. ಅಂತೆಯೇ ನಿನ್ನೆ ಸಂಜೆ ಭಯಂಕರ ಮಳೆಯಾಗಿದೆ. ಇನ್ನು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ಗಾಳಿಯ ವೇಗ ಗಂಟೆಗೆ 30-40ಕಿ.ಮೀ ವೇಗದಲ್ಲಿರಲ್ಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಕಿರುತೆರೆಗೆ ಎಂಟ್ರಿ ಕೊಟ್ಟ ಅವಿನಾಶ್ಗೆ ಅದ್ದೂರಿ ವೆಲ್ಕಮ್.. ವಸುದೇವ ಕುಟುಂಬದ ಕತೆ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ