/newsfirstlive-kannada/media/media_files/2025/09/17/vasudev-kutumba-avinash-1-2025-09-17-15-53-14.jpg)
ಅಂಜಲಿ-ಅವಿನಾಶ್​ ಮುಖ್ಯಭೂಮಿಕೆಯಲ್ಲಿರೋ ಧಾರಾವಾಹಿ ವಸುದೇವ ಕುಟುಂಬ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೆಪ್ಟೆಂಬರ್​ 15 ರಿಂದ ಪ್ರಸಾರವಾಗ್ತಿದೆ. ನಟ ಅವಿನಾಶ್​ ಬಹಳ ವರ್ಷಗಳ ನಂತರ ಸೀರಿಯಲ್​ಗೆ ಬಣ್ಣ ಹಚ್ಚಿರೋದು ಧಾರಾವಾಹಿಯ ಸ್ಪೆಷಾಲಿಟಿಗಳಲೊಂದು.
ತಾರಾಗಣಕ್ಕೆ ಬರೋದಾದರೆ ತರುಣ್​ ಸುಧೀರ್​ ಅವರ ತಾಯಿ ಮಾಲತಿ ಸುಧೀರ್​ ಅಜ್ಜಿ ಪಾತ್ರ ಮಾಡ್ತಿದ್ದಾರೆ. ನೆಗೆಟೀವ್​ ಶೇಡ್​ನಲ್ಲಿ ಹಂಸ ಖಡಕ್​ ಪಾತ್ರ ಮಾಡಿದ್ದಾರೆ. ನಾಯಕಿ ಪಾತ್ರಕ್ಕೆ ಹೊಸ ಪ್ರತಿಭೆ ಭಾವನಾ ಪಾಟೀಲ್​ ಬಣ್ಣ ಹಚ್ಚಿದ್ದಾರೆ. ನಾಯಕ ಪಾತ್ರದಲ್ಲಿ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರೋ ಭಗತ್​ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚೈತ್ರಾ ತೋಟದ್​, ಬೃಂದಾ ಕಶ್ಯಪ್​, ಆರಾಧ್ಯ ಹಾಗೂ ಆರ್​ಜೆ ಅನೂಪ್​ ಸೇರಿದಂತೆ ದೊಡ್ಡ ಕಲಾವಿದರ ಬಳಗವಿದೆ.
ಇದನ್ನೂ ಓದಿ:‘ಆನೆ ಮೇಲಿನ ಅಂಬಾರಿ..’ ನಟಿ ಮಯೂರಿ ಈಗ ಏನ್ಮಾಡ್ತಿದ್ದಾರೆ..? Photos
ಕಥೆ ಓಪನಿಂಗ್ ಪಡೆದುಕೊಳ್ಳೋದೇ ಅಂಜಲಿ ಅವರ ಪಾತ್ರದ ಮೂಲಕ. ದುಬೈನಲ್ಲಿದ್ದ ಪತಿ ವಸುದೇವ ಬಹಳ ವರ್ಷಗಳ ನಂತರ ತವರೂರಿಗೆ ಮರಳ್ತಿದ್ದಾನೆ ಎಂಬ ಸಡಗರ ಇಡೀ ಮನೆಯನ್ನ ಆವರಿಸಿರುತ್ತೆ. 4 ಹೆಣ್ಮಕ್ಕಳ ಪರಿಚಯದ ದೃಶ್ಯ ಲವಲವಿಕೆಯಿಂದ ಕೂಡಿದೆ.
ನಾಯಕಿ ಸ್ವಾತಿ ಧೈರ್ಯವಂತೆ. ಅಪ್ಪ ಅಂದರೆ ಜೀವ. ಅಮ್ಮನಿಂದ ಬೈಗುಳ ತಿನ್ನದೇ ಆವತ್ತಿನ ದಿನ ಪೂರ್ಣನೇ ಆಗಲ್ಲ. ಮನೆಗೆ ಮಗನ ಸ್ಥಾನ ತುಂಬಿರೋ ಸಕಲ ಕಲಾ ವಲ್ಲಭೆ. ಆಗತಾನೆ ಹಳ್ಳಿ ಕಡೆ ಮುಖ ಮಾಡಿದ ನಾಯಕನಿಗೆ ಮೊದಲ ನೋಟದಲ್ಲೇ ಸ್ವಾತಿ ಮೇಲೆ ಫೀಲಿಂಗಸ್​ ಶುರುವಾಗಿದೆ.
ಎಂದಿನಂತೆ ಹಂಸ ಖಡಕ್​ ಆಗಿಯೇ ಕಾಣಿಸಿಕೊಂಡಿದ್ದಾರೆ. ನಾಯಕನ ತಾಯಿ ರಾಧಾ ಪಾತ್ರ ಇವ್ರದ್ದು. ಸೊಕ್ಕು ದಿಮಾಕಿನ ಹೆಂಗಸು. ತನಗೆ ಕ್ರಷ್ ಆಗಿರೋ ಹುಡುಗಿ ಜೊತೆಗೆ ಅಮ್ಮ ಕಿರಿಕ್​ ಮಾಡಿಕೊಳ್ತಿದ್ದಾಳಲ್ಲ ಅಂತ ಒದ್ದಾಡೋ ನಾಯಕ. ಇದಿಷ್ಟು ನಾಯಕನ ಕುಟುಂಬದ ಪರಿಚಯದ ಇಂಟ್ರಡಕ್ಷನ್.
ಇದನ್ನೂ ಓದಿ:ಸುಬ್ಬು ಮನ ಗೆದ್ದ ಶ್ರಾವಣಿ.. ಮದುವೆ ಸಂಭ್ರಮದ ಮೇಕಿಂಗ್ ಝಲಕ್ -Photos
/filters:format(webp)/newsfirstlive-kannada/media/media_files/2025/09/17/vasudev-kutumba-avinash-2025-09-17-15-55-04.jpg)
ರಾಧಾ ಅಣ್ಣ ಪಶುಪತಿ ಹಾಗೂ ವಸುದೇವ ಪ್ರಾಣ ಸ್ನೇಹಿತರು. ಗೆಳೆಯರಿಬ್ಬರೂ ಪರಸ್ಪರ ಕುಶಲೋಪರಿ. ಕದ್ದುಮುಚ್ಚಿ ಪ್ರೀತಿ ಮಾಡ್ತಿರೋ ಮಕ್ಕಳ ಕಲವರ ಕಚಗುಳಿ ಇಡುತ್ತೆ. ಈ ನಡುವೆ ಆ ಕಿರಿಕ್​ ಹೆಂಗಸು ಪಶುಪತಿಯ ತಂಗಿ ಎಂಬ ಸತ್ಯ ಬಯಲಾಗುತ್ತೆ. ಅಲ್ಲಿಗೆ ಮೊದಲ ಸಂಚಿಕೆ ಮುಕ್ತಾಯವಾಗುತ್ತೆ.
ಒಟ್ನಲ್ಲಿ ಸ್ಟೋರಿ ಹಳೆದಾದ್ರೂ ವೇಗ ಇದೆ. ಹೊಸ ರೀತಿ ಪ್ರಸ್ತುತ ಪಡೆಸಲಾಗಿದೆ. ಕಳಸ ಸುತ್ತ ಮುತ್ತ ಶೂಟಿಂಗ್​ ಮಾಡಲಾಗಿದ್ದು, ಮಳೆಯ ಸಿಂಚನದ ನಡುವೆ ಧಾರಾವಾಹಿ ಮುದ ಕೊಡುತ್ತೆ. ರಾತ್ರಿ 8.30ಕ್ಕೆ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ವಸುದೇವ ಕುಟುಂಬ ನೋಡ್ಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us