ಡಾ.ಸಿ.ಜೆ.ರಾಯ್ ಕೇಸ್​ನ ತನಿಖೆ ಹೇಗಿರುತ್ತದೆ..? ಪೊಲೀಸರ ಕೈ ಸೇರಲಿರುವ 7 ಸಾಕ್ಷ್ಯಗಳು ಇಲ್ಲಿವೆ..

ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಡಾ.ಸಿ.ಜೆ.ರಾಯ್ ಪ್ರಕರಣ ಇಡೀ ಉದ್ಯಮ ಲೋಕವನ್ನು ಬೆಚ್ಚಿಬೀಳಿಸಿದೆ. ಮೇಲ್ನೋಟಕ್ಕೆ ಇದು ಆತ್ಮ*ತ್ಯೆ ಎಂದು ತಿಳಿದುಬಂದಿದ್ದರೂ, ದುರಂತ ಅಂತ್ಯಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

author-image
Ganesh Kerekuli
cj roy (4)
Advertisment

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಡಾ.ಸಿ.ಜೆ.ರಾಯ್ ಪ್ರಕರಣ ಇಡೀ ಉದ್ಯಮ ಲೋಕವನ್ನು ಬೆಚ್ಚಿಬೀಳಿಸಿದೆ. ಮೇಲ್ನೋಟಕ್ಕೆ ಇದು ಆತ್ಮ*ತ್ಯೆ ಎಂದು ತಿಳಿದುಬಂದಿದ್ದರೂ, ದುರಂತ ಅಂತ್ಯಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಮುಂದಿನ ತನಿಖೆಯ ಹಾದಿಯ ವಿವರ ಹೀಗಿದೆ.. 

ಅನುಮಾನಾಸ್ಪದ ಸಾ*ವು ಪ್ರಕರಣ ದಾಖಲು: ಸದ್ಯಕ್ಕೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಪೊಲೀಸರು ಇದನ್ನು 'ಅನುಮಾನಾಸ್ಪದ ಸಾ*ವು' ಎಂದು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಎಫ್‌ಎಸ್‌ಎಲ್ (FSL) ತಂಡ ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಐಟಿ ಅಧಿಕಾರಿಗಳಿಗೆ ನೋಟಿಸ್: ಸಿ.ಜೆ. ರಾಯ್ ದುಡುಕಿನ ನಿರ್ಧಾರದ ಸಮಯದಲ್ಲಿ ಆದಾಯ ತೆರಿಗೆ (IT) ಅಧಿಕಾರಿಗಳು ಕಚೇರಿಯಲ್ಲೇ ಇದ್ದರು. ಹೀಗಾಗಿ, ಅಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ವಿಚಾರಣೆ ವೇಳೆ ನಡೆದ ಸಂಭಾಷಣೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಸಿಬ್ಬಂದಿ ವಿಚಾರಣೆ:ಘಟನೆ ನಡೆದ ಸಂದರ್ಭದಲ್ಲಿ ಕಾನ್ಫಿಡೆಂಟ್ ಸಂಸ್ಥೆಯ ಕಚೇರಿಯಲ್ಲಿದ್ದ ಸಿಬ್ಬಂದಿ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ. ರಾಯ್ ವರ್ತನೆಯಲ್ಲಿ ಕಳೆದ ಕೆಲವು ದಿನಗಳಿಂದ ಏನಾದರೂ ಬದಲಾವಣೆ ಇತ್ತೇ? ಎಂಬ ಬಗ್ಗೆಯೂ ವಿಚಾರಣೆ ನಡೆಸಲಿದ್ದಾರೆ.

ಮೊಬೈಲ್ ಡೇಟಾ ಮತ್ತು ಸಿಡಿಆರ್ ಅನಾಲಿಸಿಸ್: ಸಿ.ಜೆ. ರಾಯ್ ಅವರ ಮೊಬೈಲ್ ಈಗ ಪೊಲೀಸರ ವಶದಲ್ಲಿದೆ. ಅವರ ಕಾಲ್ ಡೀಟೇಲ್ ರೆಕಾರ್ಡ್ಸ್ (CDR), ವಾಟ್ಸಾಪ್ ಮೆಸೇಜ್‌ಗಳು ಮತ್ತು ಇಮೇಲ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಇದು ಸಾವಿನ ಹಿಂದಿನ ಅಸಲಿ ಕಾರಣವನ್ನು ಹೊರಹಾಕುವ ಸಾಧ್ಯತೆಯಿದೆ.

ಬ್ಯಾಂಕ್ ವಹಿವಾಟುಗಳ ಪರಿಶೀಲನೆ: ಉದ್ಯಮದಲ್ಲಿನ ಆರ್ಥಿಕ ಸ್ಥಿತಿಗತಿ ತಿಳಿಯಲು ಅವರ ಬ್ಯಾಂಕ್ ವಹಿವಾಟುಗಳನ್ನು (Bank Transactions) ಪೊಲೀಸರು ಪರಿಶೀಲಿಸಲಿದ್ದಾರೆ. ಸಾಲದ ಬಾಧೆ ಅಥವಾ ಹಣಕಾಸಿನ ವಿಚಾರದಲ್ಲಿ ಯಾರಾದರೂ ಒತ್ತಡ ಹೇರಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ.

ವಿಧಿವಿಜ್ಞಾನ ವರದಿಗಳ ವಿಶ್ಲೇಷಣೆ: ಸ್ಥಳದಲ್ಲಿ ದೊರೆತ ಬೆರಳಚ್ಚುಗಳು (Fingerprints), ಪ್ರತ್ಯಕ್ಷದರ್ಶಿಗಳ ಹೇಳಿಕೆ (Eye Witness Statements), ಮರಣೋತ್ತರ ಪರೀಕ್ಷೆಯ ವರದಿ (Post-mortem Report) ಹಾಗೂ ಸೋಕೋ (SOCO) ವರದಿಗಳನ್ನು ಒಟ್ಟುಗೂಡಿಸಿ ಪೊಲೀಸರು ಕ್ರೋಢೀಕರಿಸಲಿದ್ದಾರೆ.

FSL ವರದಿಯೇ ಅಂತಿಮ:ಬಳಸಲಾದ ಪಿಸ್ತೂಲ್ ಮತ್ತು ಗುಂಡಿನ ಬಗ್ಗೆ ಎಫ್‌ಎಸ್‌ಎಲ್ ತಜ್ಞರು ನೀಡುವ ತಾಂತ್ರಿಕ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.

ಒಟ್ಟಾರೆಯಾಗಿ ಸಿ.ಜೆ. ರಾಯ್ ಅವರ ಈ ಹಠಾತ್ ನಿರ್ಧಾರದ ಹಿಂದೆ ಐಟಿ ದಾಳಿಯ ಭೀತಿ ಇತ್ತೇ? ಅಥವಾ ಇನ್ಯಾವುದಾದರೂ ಅಗೋಚರ ಶಕ್ತಿಗಳ ಒತ್ತಡವಿತ್ತೇ? ಎಂಬುದು ಈ ಎಲ್ಲಾ ವರದಿಗಳು ಬಂದ ನಂತರವಷ್ಟೇ ಸ್ಪಷ್ಟವಾಗಲಿದೆ.

ಇದನ್ನೂ ಓದಿ: ಮೊಬೈಲ್‌ನಲ್ಲಿ ಅಡಗಿದ್ಯಾ ಭಯಾನಕ ಸತ್ಯ? ಪೊಲೀಸರ ಕಾಡಿದ ಆರು ಅನುಮಾನಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

income tax department Confident group CJ Roy
Advertisment