ಮೊಬೈಲ್‌ನಲ್ಲಿ ಅಡಗಿದ್ಯಾ ಭಯಾನಕ ಸತ್ಯ? ಪೊಲೀಸರ ಕಾಡಿದ ಆರು ಅನುಮಾನಗಳು..!

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮ*ತ್ಯೆ ಎಂಬುದು ದೃಢಪಟ್ಟಿದ್ದರೂ, ಸಾವಿನ ಹಿಂದಿರುವ ಕಾರಣಗಳು ಮಾತ್ರ ಇನ್ನೂ ನಿಗೂಢವಾಗಿಯೇ ಇವೆ.

author-image
Ganesh Kerekuli
cj roy (2)
Advertisment
  • ಮೊಬೈಲ್ ತನಿಖೆ: ವಾಟ್ಸಾಪ್ ಚಾಟ್ಸ್ ಮತ್ತು ಕಾಲ್ ಲಿಸ್ಟ್ ಪರಿಶೀಲನೆ
  • ವಿಚಾರಣೆ ವೇಳೆ ಮೌನವಾಗಿದ್ದ ರಾಯ್; ಸೀಜ್ ಆಗಿದ್ದ ಕಡತಗಳದ್ದೇ ಆತಂಕ?
  • ಐಟಿ ಅಧಿಕಾರಿಗಳ ಮುಂದೆಯೇ ಪಿಸ್ತೂಲ್ ಬಂದಿದ್ದು ಹೇಗೆ?

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮ*ತ್ಯೆ ಎಂಬುದು ದೃಢಪಟ್ಟಿದ್ದರೂ, ಸಾವಿನ ಹಿಂದಿರುವ ಕಾರಣಗಳು ಮಾತ್ರ ಇನ್ನೂ ನಿಗೂಢವಾಗಿಯೇ ಇವೆ. ಈ ಬೆನ್ನಲ್ಲೇ ಪೊಲೀಸರು ರಾಯ್ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಸಾವಿನ ರಹಸ್ಯ ಭೇದಿಸಲು ಮುಂದಾಗಿದ್ದಾರೆ.

ಮೊಬೈಲ್‌ನಲ್ಲಿದೆಯಾ ರಹಸ್ಯ..?

ಸಾವಿಗೂ ಮುನ್ನ ಸಿ.ಜೆ. ರಾಯ್ ಯಾರಿಗೆಲ್ಲಾ ಕರೆ ಮಾಡಿದ್ದರು? ಕೊನೆಯದಾಗಿ ಯಾರೊಂದಿಗೆ ಮಾತನಾಡಿದ್ದರು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೊಬೈಲ್‌ನಲ್ಲಿರುವ ಮೆಸೇಜ್‌ಗಳು, ವಾಟ್ಸಾಪ್ ಚಾಟ್ಸ್ ಹಾಗೂ ಕಾಲ್ ರೆಕಾರ್ಡ್‌ಗಳನ್ನು ಜಾಲಾಡಲಾಗುತ್ತಿದೆ. ಯಾರಿಗಾದರೂ ದುಡುಕಿನ ನಿರ್ಧಾರದ ಬಗ್ಗೆ ಮೆಸೇಜ್ ಕಳುಹಿಸಿದ್ದಾರೆಯೇ ಎಂಬುದು ತನಿಖೆಯ ಪ್ರಮುಖ ಭಾಗವಾಗಿದೆ.

ಐಟಿ ಅಧಿಕಾರಿಗಳಿಂದ ಮಾನಸಿಕ ಹಿಂಸೆ ಆರೋಪ?

ಸಿ.ಜೆ. ರಾಯ್ ಅವರಿಗೆ ಐಟಿ (Income Tax) ದಾಳಿ ಹೊಸತೇನಲ್ಲ. ಆದರೆ, ನಿನ್ನೆಯ ವಿಚಾರಣೆ ವೇಳೆ ಐಟಿ ಅಧಿಕಾರಿಗಳು ನೀಡಿದ ಮಾನಸಿಕ ಹಿಂಸೆ ಅವರನ್ನು ಕೆಟ್ಟ ನಿರ್ಧಾರಕ್ಕೆ ತಳ್ಳಿತಾ ಎಂಬ ಪ್ರಶ್ನೆಯೂ ಮೂಡಿದೆ. ಕಾನ್ಫಿಡೆಂಟ್ ಗ್ರೂಪ್‌ನ ಹೆಡ್ ಆಫೀಸ್‌ನ ಮೂರನೇ ಮಹಡಿಯಲ್ಲಿದ್ದ ಕೆಲವು ಪ್ರಮುಖ ದಾಖಲೆಗಳನ್ನು ಈ ಹಿಂದೆ ಐಟಿ ಅಧಿಕಾರಿಗಳು ಸೀಜ್ ಮಾಡಿದ್ದರು. ಆ ಕಡತಗಳನ್ನು ಮುಟ್ಟದಂತೆ ರಾಯ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ, ಆ ಸೀಜ್ ಮಾಡಿದ್ದ ಕಡತಗಳನ್ನು ಮುಟ್ಟಿದ್ದೇ ರಾಯ್ ಪಾಲಿಗೆ ಕಂಟಕವಾಯ್ತಾ? ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.

ಇದನ್ನೂ ಓದಿ: ಕಾರುಗಳಂದ್ರೆ ಪ್ರೀತಿ, 10 ರೋಲ್ಸ್ ರಾಯ್ಸ್ ಒಡೆಯ.. ‘ಕಾನ್ಫಿಡೆಂಟ್ ಗ್ರೂಪ್’ ಸಂಸ್ಥಾಪಕ ಡಾ. ಸಿ.ಜೆ. ರಾಯ್ ಯಾರು? ಇಲ್ಲಿದೆ ಸಂಪೂರ್ಣ ವಿವರ

cj roy (3)

ವಿಚಾರಣೆ ವೇಳೆ ನಡೆದಿದ್ದೇನು?

ಮೂಲಗಳ ಪ್ರಕಾರ, ಐಟಿ ಅಧಿಕಾರಿಗಳು ಒಂದೂವರೆ ತಾಸು ರಾಯ್ ಅವರನ್ನು ವಿಚಾರಣೆ ನಡೆಸಿದ್ದರು. ವಿಚಾರಣೆಯ ಉದ್ದಕ್ಕೂ ಸಿ.ಜೆ. ರಾಯ್ ಸಂಪೂರ್ಣ ಮೌನಕ್ಕೆ ಶರಣಾಗಿದ್ದರು. ಅಧಿಕಾರಿಗಳು ಕೆಲವು ದಾಖಲೆಗಳನ್ನು ಮುಂದಿಟ್ಟು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಂತರ ವಾಶ್ ರೂಂಗೆ ಹೋಗಬೇಕೆಂದು ಹೇಳಿ ಅಲ್ಲಿಂದ ಗನ್ ತಂದ ರಾಯ್, ಏಕಾಏಕಿ ತಮ್ಮ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ.

ಪೊಲೀಸರಿಗೆ ಕಾಡುತ್ತಿರುವ ಹತ್ತು ಹಲವು ಅನುಮಾನಗಳು

  • ಒಂದೂವರೆ ತಾಸು ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳ ಗಮನಕ್ಕೆ ರಾಯ್ ಬಳಿ ಪಿಸ್ತೂಲ್ ಇದ್ದದ್ದು ಬರಲಿಲ್ವಾ?
  • ಐಟಿ ಅಧಿಕಾರಿಗಳ ಕಣ್ಣೆದುರೇ ಪಿಸ್ತೂಲ್ ತಂದು ಗುಂಡು ಹಾರಿಸಿಕೊಳ್ಳುವಷ್ಟು ಒತ್ತಡಕ್ಕೆ ರಾಯ್ ಒಳಗಾಗಿದ್ದರೇ?
  • ಕೋಟಿ ಕೋಟಿ ಹಣ ಗಳಿಸಿದ್ದ ಉದ್ಯಮಿಗೆ ಇದ್ದಕ್ಕಿದ್ದಂತೆ ಉಂಟಾದ ಆ ದೊಡ್ಡ ಭಯವಾದರೂ ಏನು?

ಸದ್ಯ ಪೊಲೀಸರು ಸಿ.ಜೆ. ರಾಯ್ ಅವರ ಮೊಬೈಲ್ ಹಾಗೂ ಪಿಸ್ತೂಲ್ ಅನ್ನು ಸೀಜ್ ಮಾಡಿದ್ದು, ತಾಂತ್ರಿಕ ಸಾಕ್ಷ್ಯಗಳಿಗಾಗಿ ಕಾಯುತ್ತಿದ್ದಾರೆ. ಎಫ್‌ಎಸ್‌ಎಲ್ ವರದಿ ಹಾಗೂ ಮೊಬೈಲ್ ಚಾಟ್ ವಿವರಗಳು ಹೊರಬಂದ ನಂತರವೇ ಈ ನಿಗೂಢ ಸಾವಿನ ಅಸಲಿ ಸತ್ಯ ಹೊರಬರಬೇಕಿದೆ.

ಇದನ್ನೂ ಓದಿ:ಪದ್ಮಶ್ರೀ ಅಂಕೇಗೌಡರ ನೆರವಿಗೆ ಬಂದ ದಿನೇಶ್ ಗೂಳಿಗೌಡ.. 5 ಎಕರೆ ಜಮೀನು, 5 ಕೋಟಿ ಅನುದಾನಕ್ಕೆ ಪತ್ರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Confident group CJ Roy
Advertisment