/newsfirstlive-kannada/media/media_files/2026/01/31/cj-roy-3-2026-01-31-10-25-31.jpg)
ಬೆಂಗಳೂರು: ರಿಯಲ್ ಎಸ್ಟೇಟ್ ಲೋಕದ ದಿಗ್ಗಜ, ಕಾನ್ಫಿಡೆಂಟ್ ಗ್ರೂಪ್‌ನ (Confident Group) ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದ ಡಾ. ಸಿ.ಜೆ. ರಾಯ್ ಅವರದ್ದು ಬಹುಮುಖ ವ್ಯಕ್ತಿತ್ವ. ಕೇವಲ ಒಬ್ಬ ಉದ್ಯಮಿಯಾಗಿರದೆ, ಶಿಕ್ಷಣ ತಜ್ಞರಾಗಿ ಮತ್ತು ಸಿನಿಮಾ ನಿರ್ಮಾಪಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಶೂನ್ಯದಿಂದ ಬೃಹತ್ ಸಾಮ್ರಾಜ್ಯ ಕಟ್ಟಿದ್ದ ಈ ಯಶಸ್ವಿ ಉದ್ಯಮಿಯ ಹಿನ್ನೆಲೆ ಇಲ್ಲಿದೆ.
ಪೂರ್ಣ ಹೆಸರು..
ಡಾ. ಸಿ.ಜೆ. ರಾಯ್ ಅವರ ಪೂರ್ಣ ಹೆಸರು ರಾಯ್ ಚಿರಿಯನ್ ಕಂದತ್ ಜೋಸೆಫ್ (Roy Cherian Kandath Joseph). ಮೂಲತಃ ಕೇರಳದವರಾದ ಅವರು ಬೆಳೆದದ್ದು ಮತ್ತು ಉನ್ನತ ಶಿಕ್ಷಣ ಪಡೆದದ್ದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ.
ಉದ್ಯಮಿಯಾಗುವ ಮುನ್ನ ಎಂಎನ್ಸಿ ಕಂಪನಿಯಲ್ಲಿ ಕೆಲಸ
ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ, ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ಎಸ್.ಬಿ.ಎಸ್ (SBS) ಬಿಸಿನೆಸ್ ಸ್ಕೂಲ್‌ನಿಂದ 'ಡಾಕ್ಟರೇಟ್ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್' (DBA) ಪದವಿ ಪಡೆದಿದ್ದರು. ಉದ್ಯಮಿಯಾಗುವ ಮೊದಲು ಅವರು ಹೆವ್ಲೆಟ್ ಪ್ಯಾಕರ್ಡ್ (HP) ನಂತಹ ಬಹುರಾಷ್ಟ್ರೀಯ ಕಂಪನಿಯಲ್ಲಿ (MNC) ಉದ್ಯೋಗಿಯಾಗಿದ್ದರು.
ಇದನ್ನೂ ಓದಿ: ಸಿ.ಜೆ.ರಾಯ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ವಶಕ್ಕೆ ಸಿಕ್ಕ ಡೈರಿಯಲ್ಲಿ ನಟಿಯರು, ರಾಜಕಾರಣಿಗಳ ಹೆಸರು ಪತ್ತೆ!
/filters:format(webp)/newsfirstlive-kannada/media/media_files/2026/01/31/cj-roy-1-2026-01-31-09-26-52.jpg)
ಕಾನ್ಫಿಡೆಂಟ್ ಗ್ರೂಪ್ ಆರಂಭ
ಎಂಎನ್ಸಿ ಕಂಪನಿಯ ಉದ್ಯೋಗ ತೊರೆದು 2006 ರಲ್ಲಿ 'ಕಾನ್ಫಿಡೆಂಟ್ ಗ್ರೂಪ್' ಪ್ರಾರಂಭಿಸಿದರು. ಆರಂಭದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟ ಅವರು, ನಂತರ ಶಿಕ್ಷಣ ಮತ್ತು ಮನರಂಜನಾ ಕ್ಷೇತ್ರಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸಿ ಯಶಸ್ವಿಯಾದರು.
ಸಿನಿಮಾ ನಿರ್ಮಾಣ ಮತ್ತು ಐಷಾರಾಮಿ ಜೀವನ
ಸಿ.ಜೆ. ರಾಯ್ ಅವರಿಗೆ ಸಿನಿಮಾ ಮೇಲೆ ಅಪಾರ ಆಸಕ್ತಿ ಇತ್ತು. ಹೀಗಾಗಿಯೇ ಚಲನಚಿತ್ರಗಳ ನಿರ್ಮಾಣ ಕಾರ್ಯದಲ್ಲಿಯೂ ಅವರು ತೊಡಗಿಸಿಕೊಂಡಿದ್ದರು. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ 'ಕ್ಯಾಸನೋವಾ' (Casanovva) ಸೇರಿದಂತೆ ಹಲವು ಬೃಹತ್ ಬಜೆಟ್ ಚಿತ್ರಗಳಿಗೆ ಅವರು ನಿರ್ಮಾಪಕರಾಗಿದ್ದರು.
ರೋಲ್ಸ್ ರಾಯ್ಸ್ ಕಾರುಗಳ ಒಡೆಯ
ಡಾ. ಸಿ.ಜೆ. ರಾಯ್ ಅವರು ಐಷಾರಾಮಿ ಕಾರುಗಳ ಅಪ್ಪಟ ಪ್ರೇಮಿಯಾಗಿದ್ದರು. ಇವರ ಬಳಿ ಬರೋಬ್ಬರಿ ಹತ್ತಕ್ಕೂ ಹೆಚ್ಚು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ (Rolls Royce) ಕಾರುಗಳಿದ್ದವು. ಅವರ ಐಷಾರಾಮಿ ಜೀವನಶೈಲಿ ಉದ್ಯಮ ವಲಯದಲ್ಲಿ ಸದಾ ಚರ್ಚೆಯಲ್ಲಿರುತ್ತಿತ್ತು.
ಇದನ್ನೂ ಓದಿ: ಎದೆ ಸೀಳಿ ಬೆನ್ನಿನಲ್ಲಿ ಸಿಲುಕಿದ ಗುಂಡು.. ತನಿಖೆಯ ಸ್ಫೋಟಕ ಮಾಹಿತಿ ಇಲ್ಲಿದೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us