/newsfirstlive-kannada/media/media_files/2025/12/18/pigeon-1-2025-12-18-09-20-36.jpg)
‘ಪಾರಿವಾಳ’ ಅಂದ್ರೆ ಯಾರಿಗ್ ತಾನೆ ಇಷ್ಟವಿಲ್ಲ ಹೇಳಿ.. ಮುಂಜಾನೆಯ ಸಮಯ.. ಬೆಂಗಳೂರಿನ ಕೆಲ ಜಾಗಗಳಲ್ಲಿ ಪಾರಿವಾಳಗಳ ಕಲರವ.. ಅದಕ್ಕೆ ಕಾಳು ಹಾಕೋ ಜನ.. ಬೆಳ್ಳಂಬೆಳಗ್ಗೆ ಈ ದೃಶ್ಯಗಳನ್ನ ಕಣ್ತುಂಬಿಕೊಳ್ಳೋದೇ ಸೊಬಗು.. ಆದ್ರೆ ಇನ್ಮುಂದೆ ಈ ರೀತಿ ಕಾಳು ಹಾಕೋ ಮುನ್ನ ಎಚ್ಚರ. ಪಬ್ಲಿಕ್​​ ಪ್ಲೇಸ್​​ನಲ್ಲಿ ಪಾರಿವಾಳಗಳಿಗೆ ಊಟ ಹಾಕಿದ್ರೆ ದಂಡ ಬೀಳೋದು ಗ್ಯಾರಂಟಿ..
ಕಾಳು ಹಾಕಿದ್ರೆ ದಂಡ!
- ಪಾರಿವಾಳದ ಹಿಕ್ಕೆ, ದುರ್ವಾಸನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ
- ಪಾರಿವಾಳಗಳ ಹಿಕ್ಕೆ, ಗರಿಗಳಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಭೀತಿ
- ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಹೊಂದಿದವ್ರಿಗೆ ಡೇಂಜರ್
- ನಿಷೇಧಕ್ಕೆ ಆರೋಗ್ಯ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಗೆ ಸೂಚನೆ
- ಜಿಬಿಎ ಪಾರಿವಾಳಗಳ ಫೀಡಿಂಗ್​​ಗೆ ತಾನೇ ಒಂದು ಸ್ಥಳ ನಿಗದಿ ಮಾಡಬೇಕು
- ನಿಯಮ ಉಲ್ಲಂಘಿಸಿದ್ರೆ BNS 270, 271, 272 ಅಡಿ ಪ್ರಕರಣಕ್ಕೆ ಸೂಚನೆ
- ದಂಡದ ಜೊತೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ
ಆದ್ರೆ ಆರೋಗ್ಯ ಇಲಾಖೆಯ ಈ ಸೂಚನೆಗೆ ಪ್ರಾಣಿ ಪ್ರಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಚಾರವಾಗಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪ್ರತಿಕ್ರಿಯಿಸಿದ್ದು, ನಗರಾಭಿವೃದ್ಧಿ ಇಲಾಖೆ ಆದೇಶಕ್ಕೆ ಕಾಯ್ತಿದ್ದೇವೆ, ಮಾರ್ಗಸೂಚಿ ರಚನೆ ಮಾಡಿ, ನಿಗದಿತ ಸ್ಥಳ ಗುರುತಿಸ್ತೇವೆ ಅಂತ ತಿಳಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಆದೇಶ ಕೈ ಸೇರ್ತಿದ್ದಂತೆ ಜಿಬಿಎ ವ್ಯಾಪ್ತಿಯಲ್ಲಿ ಈ ನಿಯಮ ಜಾರಿಗೆ ಬರಲಿದೆ. ಎನಿ ವೇ, ಇನ್ಮುಂದೆ ಪಾರಿವಾಳ ಇಷ್ಟ ಅಂತ ಸಿಕ್ಕ ಸಿಕ್ಕಲ್ಲಿ ಕಾಳು ಹಾಕೋಕೆ ಹೋಗ್ಬೇಡಿ. ಕಾಳು ಹಾಕಿ ಕೇಸ್ ಹಾಕಿಸಿಕೊಳ್ಳಬೇಕಾಗುತ್ತೆ ಎಚ್ಚರ.
ಇದನ್ನೂ ಓದಿ:ಒಂದೇ ಒಂದು ವಿಭಾಗದಲ್ಲಿ ಎಡವಿದ RCB.. ಹರಾಜಿನಲ್ಲಿ ತಪ್ಪು ಮಾಡಿತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us