ಬೇಕಿದ್ದಿದ್ದು O+ ಬ್ಲಡ್, ಕೊಟ್ಟಿದ್ದು ಎ ಪ್ಲಸ್​; ಆಸ್ಪತ್ರೆ ಯಡವಟ್ಟಿಗೆ ರೋಗಿ ಗಂಭೀರ

ಜೀವ ಉಳಿಸಿ ಅಂತ ಆಸ್ಪತ್ರೆ ಕದ ತಟ್ಟಿದ ವ್ಯಕ್ತಿಯೋರ್ವನ ಜೀವಕ್ಕೆ ಸಂಚಕಾರ ತಂದುಬಿಟ್ಟಿದ್ದಾನೆ. ಆಸ್ಪತ್ರೆ ಸಿಬ್ಬಂದಿ. ವೈದ್ಯರು ರಕ್ತಕೊಡಿ ಅಂತ ಹೇಳಿದ್ದೇ ತಡ ಯಾವ ಬ್ಲಡ್​ ಗ್ರೂಪ್​ ಏನು ಎತ್ತ ಅಂತಲೂ ಚೆಕ್​ ಮಾಡದೇ ಮಹಾಯಡವಟ್ಟು ಮಾಡಿರುವ ಆರೋಪ ಕೇಳಿಬಂದಿದೆ.

author-image
Ganesh Kerekuli
bengaluru doctor
Advertisment
  • ತಲೆ ನೋವು ಅಂತ ಯುವಕ ಪುನೀತ್ ಆಸ್ಪತ್ರೆಗೆ ದಾಖಲು
  • ಈ ವೇಳೆ ರಕ್ತಹೀನತೆ ಆಗಿದೆ, ರಕ್ತ ಕೊಡಬೇಕು ಎಂದಿದ್ದ ವೈದ್ಯರು
  • ಜಯನಗರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಉಮೇಶ್ ಯಡವಟ್ಟು

ಜೀವ ಉಳಿಸಿ ಅಂತ ಆಸ್ಪತ್ರೆ ಕದ ತಟ್ಟಿದ ವ್ಯಕ್ತಿಯೋರ್ವನ ಜೀವಕ್ಕೆ ಸಂಚಕಾರ ತಂದುಬಿಟ್ಟಿದ್ದಾನೆ. ಆಸ್ಪತ್ರೆ ಸಿಬ್ಬಂದಿ. ವೈದ್ಯರು ರಕ್ತಕೊಡಿ ಅಂತ ಹೇಳಿದ್ದೇ ತಡ ಯಾವ ಬ್ಲಡ್​ ಗ್ರೂಪ್​ ಏನು ಎತ್ತ ಅಂತಲೂ ಚೆಕ್​ ಮಾಡದೇ ಮಹಾಯಡವಟ್ಟು ಮಾಡಿರುವ ಆರೋಪ ಕೇಳಿಬಂದಿದೆ. ಆಸ್ಪತ್ರೆ ಸಿಬ್ಬಂದಿಯ ಈ ಯಡವಟ್ಟಿಗೆ ಪಾಪಾ ವ್ಯಕ್ತಿಯೋರ್ವ ಐಸಿಯುನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿದೆ. 

ಇದು ರಕ್ತಹೀನತೆ ಅಂತ ಚಿಕಿತ್ಸೆಗೆ ಬಂದ ಪುನೀತ್​ ಸೂರ್ಯ ಡಿಟೇಲ್ಸ್​. ​ ಪುನೀತ್​ನ ಚೆಕ್​ ಮಾಡಿದ ಆಸ್ಪತ್ರೆಯ ವೈದ್ಯರು ಬ್ಲಡ್​ ಕೋಡೋದಕ್ಕೆ ಹೇಳಿದ್ದಾರೆ. ಲ್ಯಾಬ್ ಟೆಕ್ನಿಷಿಯನ್ O+ ರಕ್ತದ ಗುಂಪಿನ ಪುನೀತ್​ಗೆ A+ ರಕ್ತವನ್ನು ಕೊಟ್ಟು ಯಡವಟ್ಟು ಮಾಡಿರುವ ಆರೋಪ ಕೇಳಿಬಂದಿದೆ. ಪರಿಣಾಮ ಪುನೀತ್ ಸೂರ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. 

ಜೀವದ ಜೊತೆ ಸಿಬ್ಬಂದಿ ಚೆಲ್ಲಾಟ

ತಲೆ ನೋವು ಅಂತ ಪುನೀತ್ ಎಂಬ ಯುವಕ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ಚೆಕ್​ ಮಾಡಿದ ವೈದ್ಯರು ರಕ್ತಹೀನತೆ ಆಗಿದೆ, ರಕ್ತ ಕೊಡಬೇಕು ಎಂದಿದ್ದಾರೆ. ಪುನೀತ್‌ಗೆ ಬೇಕಾಗಿದ್ದು O ಪಾಸಿಟಿವ್ ಬ್ಲಡ್.. ಆದ್ರೆ ಆಸ್ಪತ್ರೆ ಸಿಬ್ಬಂದಿ ಕೊಟ್ಟಿದ್ದು A ಪಾಸಿಟಿವ್ ಬ್ಲಡ್​. ಜಯನಗರ ಸಾರ್ವಜನಿಕರ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಉಮೇಶ್ ಇಂತದ್ದೊಂದು ಮಹಾ ಯಡವಟ್ಟು ಮಾಡಿದ್ದಾನೆ. 

ಪುನೀತ್ ದೇಹದೊಳಕ್ಕೆ ಎ ಪಾಸಿಟಿವ್ ಬ್ಲಡ್ ಹೋಗ್ತಿದ್ದಂತೆ ಆರೋಗ್ಯದಲ್ಲಿ ಭಾರೀ ಏರುಪೇರು ಉಂಟಾಗಿದೆ. ಉಮೇಶ್​ಗೆ ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಹೇಳೋದು ಬೇಜವಾಬ್ದಾರಿ ಉತ್ತರ. ನನಗೆ ರಜೆ ಕೊಟ್ಟಿರಲಿಲ್ಲ. ಅದಕ್ಕೆ ಹೀಗೆ ಆಗೋಯ್ತು. ಪ್ರಾಣ ಹೋಗಿಲ್ವಲ್ಲ ಬಿಡಿ ಅಂತ ಉಡಾಫೆ ಉತ್ತರ ಕೊಟ್ಟದ್ದಾನೆ. ಸದ್ಯ ಆಸ್ಪತ್ರೆಯ ಮುಖ್ಯಸ್ಥರ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪೋಷಕರು ಈ ಸಂಬಂಧ ದೂರು ಕೂಡ ದಾಖಲಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಂತರ ಶೀಘ್ರದಲ್ಲೇ ಲ್ಯಾಬ್ ಟೆಕ್ನೀಷಿಯನ್ ಉಮೇಶ್ ಅಮಾನತು ಮಾಡುವುದಾಗಿ ಆಡಳಿತ ಮಂಡಳಿ ಹೇಳಿದೆ.

ಇದನ್ನೂ ಓದಿ: 35 ಇನ್ನಿಂಗ್ಸ್.. 11 ಶತಕ.. 12 ಅರ್ಧಶತಕ.. ಆದರೂ ಕನ್ನಡಿಗನಿಗೆ BCCI ಅನ್ಯಾಯ..!

 ಅದೃಷ್ಟವಶಾತ್ ಸದ್ಯ  ಪುನೀತ್ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಆದ್ರೆ, ಆಸ್ಪತ್ರೆಯಲ್ಲಿ ಮೈಮರೆತು ಕೆಲಸ ಮಾಡೋ ಇಂತಹ ಸಿಬ್ಬಂದಿಗೆ ಸರಿಯಾದ ಪಾಠ ಕಲಿಸಬೇಕಿದೆ. ಇಲ್ಲ ಅಂದ್ರೆ ಇಂತಹ ಬೇಜಾವಬ್ದಾರಿ ಸಿಬ್ಬಂದಿಗೆ ಆಟ ಬಡ ರೋಗಿಗಳಿಗೆ ಪ್ರಾಣ ಸಂಕಟ ಆಗೋದು ಮಾತ್ರ ನಿಶ್ಚಿತ. 

ವಿಶೇಷ ವರದಿ: ಚಂದನಾ ಶೆಟ್ಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bengaluru News
Advertisment