ಬೆಂಗಳೂರಿನ ಕಳ್ಳತನ ಕೇಸ್‌ಗೆ ಅಮೆರಿಕಾ ಎಂಟ್ರಿ! ರಾಯಭಾರ ಕಚೇರಿಯಿಂದ ಡಿಜಿಗೆ ಕರೆ..!

ಸಿಲಿಕಾನ್ ಸಿಟಿಯಲ್ಲಿ ನಡೆದ ಒಂದು ಕಳ್ಳತನ ಪ್ರಕರಣದ ತನಿಖೆಗಾಗಿ ನೇರವಾಗಿ ಅಮೆರಿಕಾ ರಾಯಭಾರ ಕಚೇರಿಯಿಂದ (US Embassy) ಕರ್ನಾಟಕದ ಡಿಜಿ-ಐಜಿಪಿ ಅವರಿಗೆ ದೂರು ಬಂದಿರುವ ಅಪರೂಪದ ಘಟನೆ ನಡೆದಿದೆ.

author-image
Ganesh Kerekuli
US call
Advertisment

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ ಒಂದು ಕಳ್ಳತನ ಪ್ರಕರಣದ ತನಿಖೆಗಾಗಿ ನೇರವಾಗಿ ಅಮೆರಿಕಾ ರಾಯಭಾರ ಕಚೇರಿಯಿಂದ (US Embassy) ಕರ್ನಾಟಕದ ಡಿಜಿ-ಐಜಿಪಿ ಅವರಿಗೆ ದೂರು ಬಂದಿರುವ ಅಪರೂಪದ ಘಟನೆ ನಡೆದಿದೆ. ಅಮೆರಿಕಾ ಮೂಲದ ದಂಪತಿಯ ಮನೆಯಲ್ಲಿ ನಡೆದಿದ್ದ ಈ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಜೀವನ್ ಭೀಮಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆಯ ಹಿನ್ನೆಲೆ

ಅಮೆರಿಕಾದ ಟೆಕ್ಸಾಸ್ ಮೂಲದ ದಂಪತಿಗಳಾದ ಪತ್ನಿ ಮೆರಿಯಲ್ ಮೊರೆನೋ ಮತ್ತು ಪತಿ ಟೊಮ್ಮೋ ಕನ್ಕನಿಯನ್ ಅವರು ಕಳೆದ ಕೆಲ ಸಮಯದಿಂದ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದರು. ಇವರು ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಇವರ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಪಶ್ಚಿಮ ಬಂಗಾಳ ಮೂಲದ ಚಂದನ್ ರೌಲ್ ಎಂಬಾತ ಕೆಲಸಕ್ಕೆ ಸೇರಿಕೊಂಡಿದ್ದ.

ನಂಬಿಕಸ್ತನಿಂದಲೇ ಕೈಚಳಕ

ಜನವರಿ 21 ರಂದು ಪತಿ ಟೊಮ್ಮೋ ಅವರು ಅಮೆರಿಕಾಗೆ ತೆರಳಿದ್ದರು ಮತ್ತು ಪತ್ನಿ ಮೆರಿಯಲ್ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಆರೋಪಿ ಚಂದನ್ ರೌಲ್, ಮನೆಯಲ್ಲಿದ್ದ ಬೆಲೆಬಾಳುವ ವಜ್ರದ ಹಾರ, ಚಿನ್ನಾಭರಣಗಳು ಹಾಗೂ 600 ಅಮೆರಿಕನ್ ಡಾಲರ್ ಹಣವನ್ನು ಕದ್ದು ಪರಾರಿಯಾಗಿದ್ದ. ಸಂಜೆ ಮೆರಿಯಲ್ ಅವರು ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಅಮೆರಿಕಾದಿಂದ ಡಿಜಿಗೆ ದೂರು!

ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಮೆರಿಯಲ್ ಅವರು ಅಮೆರಿಕಾದಲ್ಲಿದ್ದ ಪತಿಗೆ ವಿಷಯ ತಿಳಿಸಿದ್ದರು. ಪತಿ ಟೊಮ್ಮೋ ತಕ್ಷಣವೇ ಅಮೆರಿಕಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ದೂರು ನೀಡಿದ್ದರು. ಪ್ರಕರಣದ ಗಾಂಭೀರ್ಯ ಅರಿತ ರಾಯಭಾರ ಕಚೇರಿಯ ಅಧಿಕಾರಿಗಳು ನೇರವಾಗಿ ಕರ್ನಾಟಕದ ಡಿಜಿ ಮತ್ತು ಐಜಿಪಿ ಅವರಿಗೆ ದೂರು ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಿದ್ದರು.

ಪೊಲೀಸರ ಕ್ಷೀಪ್ರ ಕಾರ್ಯಾಚರಣೆ

ಮೇಲಿನಿಂದ ಆದೇಶ ಬರುತ್ತಿದ್ದಂತೆ ಎಚ್ಚೆತ್ತ ಜೀವನ್ ಭೀಮಾನಗರ ಪೊಲೀಸರು ಕೂಡಲೇ ಕಾರ್ಯಾಚರಣೆ ಆರಂಭಿಸಿದರು. ಅಮೆರಿಕನ್ ಡಾಲರ್‌ಗಳನ್ನು ಭಾರತೀಯ ರೂಪಾಯಿಗೆ ಬದಲಾಯಿಸಿ ಎಸ್ಕೇಪ್ ಆಗಲು ಸಂಚು ರೂಪಿಸುತ್ತಿದ್ದ ಆರೋಪಿ ಚಂದನ್ ರೌಲ್‌ನನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ.

ಬಂಧಿತನಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ವಜ್ರದ ಆಭರಣಗಳು, ಚಿನ್ನ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಮೆರಿಕಾ ಎಬಂಸ್ಸಿಯ ಹಸ್ತಕ್ಷೇಪದಿಂದಾಗಿ ಈ ಪ್ರಕರಣವು ಅತ್ಯಂತ ವೇಗವಾಗಿ ಸುಖಾಂತ್ಯ ಕಂಡಿದೆ.

ಇದನ್ನೂ ಓದಿ:ಮನೆಗೆ ಬಂದಾಯ್ತು ‘ಪವಿತ್ರ ಬಂಧನ’.. ಹೇಗಿದೆ ಸೂರಜ್ ಅಭಿನಯದ ಧಾರಾವಾಹಿ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

US Embassy
Advertisment