ಜೈಲಲ್ಲಿ 4ನೇ ದಿನ ಕಳೆದ ದರ್ಶನ್​​ಗೆ ಹೊಸ ಟೆನ್ಷನ್..!

ಸೆರೆವಾಸ ಎಂದಿಗೂ ನರಕವೇ. ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರೋ ದರ್ಶನ್​ಗೆ ಕೂಡ ಪರಪ್ಪನ ಅಗ್ರಹಾರದ ಜೈಲು ನರಕವಾಗಿ ಪರಿಣಮಿಸಿದೆ. ಆದ್ರೆ ಬಳ್ಳಾರಿ ಜೈಲು ನೆನೆಸಿಕೊಂಡ್ರೆ ದರ್ಶನ್ ಪಾಲಿ​ಗೆ ಪರಮ ನರಕ.. ದರ್ಶನ್ ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್​ ಆಗ್ತಾರೋ? ಇಲ್ವಾ ಅನ್ನೋ ಭವಿಷ್ಯ ಇಂದು ನಿರ್ಧಾರವಾಗಲಿದೆ.

author-image
Ganesh Kerekuli
Darshan in jail
Advertisment

ಹೊರಗಡೆ ಇದ್ದಾಗ ಇದ್ರೆ ನೆಮ್ದಿಯಾಗಿರಬೇಕು ಅಂತಿದ್ದ ದರ್ಶನ್ ಜೈಲಿನೊಳಗೆ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. 4 ಗೋಡೆಯೊಳಗಿನ ಜೀವನ ಬೆರಳಣಿಕೆ ದಿನಕ್ಕೆ ಸಾಕಪ್ಪ ಸಾಕು ಅನ್ನುವಂತೆ ಮಾಡಿದೆ. ಅಭಿಮಾನಿಗಳಿಲ್ಲ, ಕುಟುಂಬಸ್ಥರಿಲ್ಲ, ಗೆಳೆಯ, ಗೆಳತಿಯರಿಲ್ಲ.. ಕನಿಷ್ಠ ಒಂದೆರೆಡು ಪದ ಮಾತನಾಡಲೂ ಯಾರೂ ಇಲ್ಲ.. ಹೀಗೆ ಕತ್ತಲ ಗೂಡಿನಲ್ಲಿ ಕಂಬಿಯ ಹಿಂದೆ ಒಬ್ಬಂಟಿಯಾಗಿರೋ ದರ್ಶನ್ ಮತ್ತೊಂದು ರಾತ್ರಿಯನ್ನ ಕಷ್ಟಪಟ್ಟು ಕಳೆದಿದ್ದಾರೆ.  

ಹೊಸ ಟೆನ್ಷನ್

ಅಂತೂ ಇಂತೂ 4 ದಿನ ಕಳೀತು.. ಜೈಲಿನ 4 ಗೋಡೆಯೊಳಗೆ ಬಂಧಿಯಾಗಿರೋ ದರ್ಶನ್ ಬೇಸರದಲ್ಲೇ ಕ್ಷಣ ಕಳೆಯುತ್ತಿದ್ದಾರೆ. ಈ ನಡುವೆ ಸೋಮವಾರದ ಸಂಕಟ ಶುರುವಾಗಿದೆ. ಮತ್ತೆ ಬಳ್ಳಾರಿ ಜೈಲಿನ ಭಯ ಶುರುವಾಗಿದೆ. 

ಇದನ್ನೂ ಓದಿ:ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಪೋಟೋ ತೆಗೆದ ಅಧಿಕಾರಿಗಳು, ಪವಿತ್ರಾಗೌಡ ಮುಖದಲ್ಲಿ ನಗು!

pavitra

‘ದಾಸ’ನ ಬಳ್ಳಾರಿ ಭವಿಷ್ಯ

ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿರೋ ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್  ಆಗೋ ಸಾಧ್ಯತೆ ಇದೆ. ಕಳೆದ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ ರೌಡಿಗಳ ಜೊತೆ ಸಂಪರ್ಕ ಬೆಳಸಿ ರಾಜಾತಿಥ್ಯ ಪಡೆದಿದ್ದಕ್ಕೆ ಸಾಕ್ಷಿ ಸಿಕ್ಕಿತ್ತು. ಸ್ಪೆಷಲ್​ ಟ್ರೀಟ್​ಮೆಂಟ್​ ಕೊಡದಂತೆ ಸುಪ್ರೀಂ ಕೋರ್ಟ್​ ಕೂಡ ಖಡಕ್​ ವಾರ್ನಿಂಗ್​ ನೀಡಿದ್ದು, ಈ ಬಾರಿಯೂ ಮತ್ತೆ ಅದೇ ರೀತಿ ಆಗಬಾರದೆಂದು ಅಧಿಕಾರಿಗಳು ಅಲರ್ಟ್​ ಆಗಿದ್ದಾರೆ. ಈ ಹಿಂದೆ ಆದ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಜೈಲಾಧಿಕಾರಿಗಳಿಗೆ ಸೂಚನೆ ಸಿಕ್ಕಿದೆ. ಇನ್ನೊಂದೆಡೆ ದರ್ಶನ್​ನ ಮತ್ತೆ ಬಳ್ಳಾರಿಗೆ ಶಿಫ್ಟ್​ ಮಾಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ದರ್ಶನ್​ ‘ಬಳ್ಳಾರಿ’ ಭವಿಷ್ಯ

  • ಬೇಲ್‌ ರದ್ದು ಮಾಡ್ತಿದ್ದಂತೆ ಡಿ ಗ್ಯಾಂಗ್‌ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌ 
  • ಮತ್ತೆ ಬಳ್ಳಾರಿ ಜೈಲಿಗೆ ದರ್ಶನ್‌‌ ಶಿಫ್ಟ್‌ ಮಾಡಲು ಕೋರ್ಟ್ ಮೊರೆಗೆ ಸಜ್ಜು
  • ಆರೋಪಿಗಳು ಯಾವ್ಯಾವ ಜೈಲಲ್ಲಿದ್ರೋ ಅದೇ ಜೈಲಿಗೆ ಶಿಫ್ಟ್​ಗೆ ಮನವಿ
  • ಮೊದಲ ಬಾರಿ ಬಂಧಿಸಿದ್ದಾಗ ಆರೋಪಿಗಳಿದ್ದ ಜೈಲಿಗೆ ಮತ್ತೆ  ಕಳಿಸಬೇಕಿದೆ
  • ಭದ್ರತೆ ದೃಷ್ಟಿಯಿಂದ ಆಯಾ ಜೈಲಿಗೆ ಕಳಿಸಬೇಕೆಂದು ಅರ್ಜಿ ಸಲ್ಲಿಸಲು ಸಜ್ಜು
  • ಎ2 ಆರೋಪಿ ದರ್ಶನ್‌ ಪ್ರಭಾವಿ ವ್ಯಕ್ತಿ ಆಗಿರೋದ್ರಿಂದ ಶಿಫ್ಟಿಂಗ್‌ ಮುಖ್ಯ 
  • ಶಿಫ್ಟಿಂಗ್​ಗಾಗಿ ಜೈಲಾಧಿಕಾರಿಗಳು ಕೋರ್ಟ್​​ ಮೊರೆ ಹೋಗೋದಕ್ಕೆ ತಯಾರಿ
  • ಇಂದು 64ನೇ ಸೆಷನ್‌ ಕೋರ್ಟ್‌ಗೆ ಅರ್ಜಿ ಹಾಕಲಿರೋ ಸರ್ಕಾರದ SPP 
  • ಇಂದೇ ಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಆದೇಶ ಹೊರ ಬೀಳೋ ಸಾಧ್ಯತೆ
  • ಬೆಂಗಳೂರಲ್ಲೇ ಇರ್ತಾರಾ? ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ? ಇಂದು ನಿರ್ಧಾರ

ಇದನ್ನೂ ಓದಿ:ದರ್ಶನ್ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ

actor darshan pavithra photos

ಮೊದಲು ದರ್ಶನ್ ಗ್ಯಾಂಗ್​ನ ಮೆಂಬರ್ಸ್​ ಯಾವ್ಯಾವ ಜೈಲಿನಲ್ಲಿದ್ರು ಅನ್ನೋ ವಿವರ ಹೀಗಿದೆ. ಒಂದ್ವೇಳೆ ಇಂದು ಕೋರ್ಟ್‌ ಆಯಾ ಜೈಲಿಗೆ ಕಳಿಸಿ ಅಂತ ಆದೇಶ ಕೊಟ್ಟಿದ್ದೇ ಆದ್ರೆ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಲ್ಲೇ ಇರ್ತಾರೆ. ಯಾಕಂದ್ರೆ ಮೊದಲು ಆಕೆ ಇಲ್ಲೇ ಇದ್ದಿದ್ದು. ಇನ್ನು, ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಬೆನ್ನು ನೋವಿನಿಂದ ಬಳಲಿದ್ದು ಗೊತ್ತೇ ಇದೆ. ಇನ್ನು 6ನೇ ಆರೋಪಿ ಆಗಿರೋ ಜಗದೀಶ್‌ ಶಿವಮೊಗ್ಗ ಕಾರಾಗೃಹದಲ್ಲಿದ್ದರು.. ಈಗ ಮತ್ತೆ ಅಲ್ಲಿಗೆ ಶಿಫ್ಟ್ ಮಾಡಬಹುದು. A 7 ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಲ್ಲೇ ಇರಲಿದ್ದಾನೆ. ಅತ್ತ A 11 ನಾಗರಾಜ್‌ ಕಲಬುರ್ಗಿ ಕಾರಾಗೃಹ, A 12 ಲಕ್ಷ್ಮಣ್‌ ಶಿವಮೊಗ್ಗ ಜೈಲು ಹಾಗೂ A 14     ಪ್ರದೋಷ್‌ ಬೆಳಗಾವಿ ಕಾರಾಗೃಹದಲ್ಲಿ ಈ ಹಿಂದೆ ಇದ್ದರು. ಹೀಗಾಗಿ ಮತ್ತದೇ ಜೈಲಿಗೆ ಕಳಿಸಿ ಅಂತಾ ಕೋರ್ಟ್ ಆದೇಶ ಕೊಟ್ರೆ, ಆರೋಪಿಗಳಿಗೆ ಪ್ರವಾಸ ಭಾಗ್ಯ ಒಲಿಯಲಿದೆ. 

ಇದನ್ನೂ ಓದಿ: ಟಾಪ್ ನ್ಯೂಸ್ ಮತ್ತೆ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿದ ರಮ್ಯಾ.. ಈ ಬಾರಿ ಏನಂದ್ರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Pavitra Gowda Darshan in jail
Advertisment