ರಾಯ್ ಕೇಸ್​ನ ಹಿಂದೆ ಅಂಡರ್‌ವರ್ಲ್ಡ್, ಹನಿಟ್ರ್ಯಾಪ್ ಲಿಂಕ್? ದುಬೈ ನಂಟು ದಿಗಿಲು ಹುಟ್ಟಿಸಿದ ಅನುಮಾನ..!

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಪ್ರಕರಣದ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಕೇಸ್​ನ ಹಿಂದೆ ಅಂಡರ್‌ವರ್ಲ್ಡ್, ಹನಿಟ್ರ್ಯಾಪ್ ಮತ್ತು ಭೂ ಮಾಫಿಯಾದ ಬೃಹತ್ ಜಾಲ ಅಡಗಿದೆಯೇ ಎಂಬ ದಿಗಿಲು ಹುಟ್ಟಿಸುವ ಅನುಮಾನಗಳು ಕಾಡತೊಡಗಿವೆ.

author-image
Ganesh Kerekuli
cj roy (5)
Advertisment

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಪ್ರಕರಣದ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಕೇಸ್​ನ ಹಿಂದೆ ಅಂಡರ್‌ವರ್ಲ್ಡ್, ಹನಿಟ್ರ್ಯಾಪ್ ಮತ್ತು ಭೂ ಮಾಫಿಯಾದ ಬೃಹತ್ ಜಾಲ ಅಡಗಿದೆಯೇ ಎಂಬ ದಿಗಿಲು ಹುಟ್ಟಿಸುವ ಅನುಮಾನಗಳು ಕಾಡತೊಡಗಿವೆ. ಕೇವಲ ಐಟಿ ದಾಳಿ ಮಾತ್ರವಲ್ಲದೆ, ರಾಯ್ ಅವರನ್ನು ಸಾವಿನ ದವಡೆಗೆ ತಳ್ಳಿದ ಬೇರೆ ಶಕ್ತಿಗಳ ಬಗ್ಗೆ ವದಂತಿಗಳು ಹರಿದಾಡುತ್ತಿವೆ. 

ಕೇರಳದ ಭೂ ಮಾಫಿಯಾ ಮತ್ತು ಶತ್ರುಗಳ ಕಾಟ?

ಯಶಸ್ವಿ ಉದ್ಯಮಿಯಾಗಿದ್ದ ಸಿ.ಜೆ. ರಾಯ್ ಅವರು ಕೇರಳದಲ್ಲಿ ತಮ್ಮ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಲು ಮುಂದಾಗಿದ್ದರು. ಪ್ರಸ್ತುತ ಕೇರಳವೊಂದರಲ್ಲೇ ಸುಮಾರು 15ಕ್ಕೂ ಹೆಚ್ಚು ಬೃಹತ್ ಪ್ರಾಜೆಕ್ಟ್‌ಗಳು ನಡೆಯುತ್ತಿದ್ದವು. ಈ ಬೆಳವಣಿಗೆಯಿಂದ ಕೇರಳದ ಸ್ಥಳೀಯ ಭೂ ಮಾಫಿಯಾ ಮತ್ತು ಉದ್ಯಮ ರಂಗದ ಶತ್ರುಗಳು ರಾಯ್ ವಿರುದ್ಧ ತಿರುಗಿಬಿದ್ದಿದ್ದರಾ? ಅವರನ್ನು ಮಟ್ಟ ಹಾಕಲು ಬೆದರಿಕೆ ಕರೆಗಳು ಬರುತ್ತಿದ್ದವಾ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಡಾ.ಸಿ.ಜೆ.ರಾಯ್ ಕೇಸ್​ನ ತನಿಖೆ ಹೇಗಿರುತ್ತದೆ..? ಪೊಲೀಸರ ಕೈ ಸೇರಲಿರುವ 7 ಸಾಕ್ಷ್ಯಗಳು ಇಲ್ಲಿವೆ..

cj roy (4)

ಹೈಪ್ರೊಫೈಲ್ ಪಾರ್ಟಿ, ಮಾಡೆಲ್ಸ್ ಮತ್ತು ‘ಹನಿಟ್ರ್ಯಾಪ್’ ಸಂಚು?

ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ನಡೆಯುತ್ತಿದ್ದ ಹೈಪ್ರೊಫೈಲ್ ಪಾರ್ಟಿಗಳಲ್ಲಿ ಸಿ.ಜೆ. ರಾಯ್ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಮಾಡೆಲ್‌ಗಳ ಜೊತೆ ರಾಯ್ ನಂಟು ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಇದೇ ಸಲುಗೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡ ಯಾವುದಾದರೂ ತಂಡ, ರಾಯ್ ಅವರನ್ನು ಟ್ರ್ಯಾಪ್ ಮಾಡಿತ್ತೇ? ರಾಜಕೀಯ ಪ್ರಭಾವ ಬಳಸಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತೇ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಬ್ಲ್ಯಾಕ್‌ಮೇಲ್ ತಂತ್ರದ ಭಾಗವಾಗಿಯೇ ಐಟಿ ದಾಳಿ ನಡೆಯುವಂತೆ ಸಂಚು ರೂಪಿಸಲಾಗಿತ್ತೇ ಎಂಬುದು ಸದ್ಯದ ದೊಡ್ಡ ಪ್ರಶ್ನೆ.

ದುಬೈ ನಂಟು ಮತ್ತು ಅಂಡರ್‌ವರ್ಲ್ಡ್ ಕನೆಕ್ಷನ್

ಉದ್ಯಮ ವಿಸ್ತರಣೆಯ ಉದ್ದೇಶದಿಂದ ಸಿ.ಜೆ. ರಾಯ್ ಆಗಾಗ ದುಬೈಗೆ ಪ್ರಯಾಣಿಸುತ್ತಿದ್ದರು. ಅಲ್ಲಿ ಅಂಡರ್‌ವರ್ಲ್ಡ್ ಶಕ್ತಿಗಳ ಜೊತೆ ಸಂಪರ್ಕವಿತ್ತೇ ಎಂಬ ಆತಂಕಕಾರಿ ವಿಷಯ ತನಿಖೆಯ ಹಂತದಲ್ಲಿದೆ. ದುಬೈನಲ್ಲಿ ಯಾವುದೋ 'ಪೇಮೆಂಟ್' ವಿಚಾರವಾಗಿ ಅಂಡರ್‌ವರ್ಲ್ಡ್ ಮಂದಿಯೊಂದಿಗೆ ರಾಯ್ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಈ ಕಿರಿಕ್ ಬಳಿಕವಷ್ಟೇ ಅವರು ದುಬೈ ಕಡೆಗೆ ಮುಖ ಮಾಡದೆ ಸಂಪೂರ್ಣವಾಗಿ ಬೆಂಗಳೂರು ಮತ್ತು ಕೇರಳದಲ್ಲಿ ನೆಲೆಯೂರಿದ್ದರು. ಆ ಹಳೆಯ ಹಗೆತನ ಇಲ್ಲಿಯೂ ಮುಂದುವರಿದಿತ್ತೇ? ಎಂಬ ಪ್ರಶ್ನೆಯೂ ಕಾಡಿದೆ. 

ಇದನ್ನೂ ಓದಿ:ಕುಸಿದ ಚಿನ್ನ, ಬೆಳ್ಳಿ! ಚಿನ್ನದ ರೇಟ್ 20 ಸಾವಿರ ಡೌನ್; ಬೆಳ್ಳಿ 1.06 ಲಕ್ಷ ಇಳಿದು 2.93 ಲಕ್ಷ ರೂ ತಲುಪಿದೆ..

cj roy (1)

ಬೆದರಿಕೆ ಕರೆಗಳು ಮತ್ತು ಮಾನಸಿಕ ಹಿಂಸೆ

ಸಿ.ಜೆ. ರಾಯ್ ಅವರಿಗೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಅತ್ತ ಅಂಡರ್‌ವರ್ಲ್ಡ್ ಹಿಂಸೆ, ಇತ್ತ ಹನಿಟ್ರ್ಯಾಪ್ ಭೀತಿ ಮತ್ತು ಭೂ ಮಾಫಿಯಾದ ಒತ್ತಡ—ಈ ಎಲ್ಲಾ ಸಂಕಷ್ಟಗಳನ್ನು ಏಕಾಂಗಿಯಾಗಿ ಎದುರಿಸಲಾಗದೆ ಕೆಟ್ಟ ನಿರ್ಧಾರ ತೆಗೆದುಕೊಂಡಿರೋ ಶಂಕೆ ಪೊಲೀಸರನ್ನ ಕಾಡಿದೆ. 

ಕುಟುಂಬಸ್ಥರಿಂದ ಮಾಹಿತಿ ಸಂಗ್ರಹ

ಸದ್ಯ ಪೊಲೀಸರು ಸಿ.ಜೆ. ರಾಯ್ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದ್ದು, ರಾಯ್ ಅವರಿಗೆ ಬರುತ್ತಿದ್ದ ಬೆದರಿಕೆ ಕರೆಗಳು ಮತ್ತು ಅವರ ಮಾನಸಿಕ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ದುಬೈ ವ್ಯವಹಾರ ಮತ್ತು ಕೇರಳದ ಪ್ರಾಜೆಕ್ಟ್‌ಗಳ ಬಗ್ಗೆ ಪೊಲೀಸರು ಹೆಚ್ಚಿನ ಗಮನ ಹರಿಸಿದ್ದಾರೆ.

ಐಟಿ ದಾಳಿ ಒಂದು ನೆಪ ಮಾತ್ರವೇ? ರಾಯ್ ಸಾವಿನ ಹಿಂದೆ ಅಡಗಿರುವ ಆ 'ಅಗೋಚರ ಹಸ್ತ' ಯಾರದ್ದು ಎಂಬುದು ಸದ್ಯ ಇಡೀ ರಾಜ್ಯ ಮತ್ತು ಕೇರಳದ ಉದ್ಯಮ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯವಾಗಿದೆ.

ಇದನ್ನೂ ಓದಿ: ರಾಯ್ ಕೇಸ್‌ಗೆ ಚಂದ್ರಚೂಡ್ ಟ್ವಿಸ್ಟ್: ದೊಡ್ಡ ನಟಿ ಜೊತೆಗಿನ ಲಿಂಕ್, 1000 ಕೋಟಿ ಹಗರಣದ ಬಗ್ಗೆ ಸ್ಫೋಟಕ ಮಾಹಿತಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Confident group CJ Roy
Advertisment