/newsfirstlive-kannada/media/media_files/2026/02/23/electriv-vehicle-2026-02-23-09-15-06.jpg)
ನ್ಯೂಸ್​ಫಸ್ಟ್, ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯದ ಸಹಕಾರದ ಜೊತೆಯಲ್ಲಿ​ ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಎಲೆಕ್ಟ್ರಿಕ್​​ ವಾಹನಗಳ ಎಕ್ಸ್​ಪೋಗೆ ಇವತ್ತು ಮೂರನೇ ದಿನ. ಹಾಗೂ ಕೊನೆಯ ದಿನ.
ಮೊದಲೆರಡು ದಿನವೇ ಎಲೆಕ್ಟ್ರಿಕ್ ವೆಹಿಕಲ್​ಗಳ ಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೂರು ದಿನಗಳ ಎಕ್ಸ್​ಪೋನಲ್ಲಿ ಮೊದಲ 2 ದಿನ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಗೆ ಬಂದಿದ್ದ ಜನರು ತಮಗೆ ಬೇಕಾದ ಮಾಹಿತಿ ಪಡೆದುಕೊಂಡ್ರು. ಹಲವರು ವೆಹಿಕಲ್ ಬುಕ್ ಕೂಡ ಮಾಡಿದ್ರು. ಇವತ್ತು ಕೊನೆಯ ದಿನವಾಗಿದ್ದು ಈ ಅವಕಾಶವನ್ನ ಯರೂ ಮಿಸ್ ಮಾಡಿಕೊಳ್ಳಬೇಡಿ.
ಇದನ್ನೂ ಓದಿ: ಟಾಟಾ ಪಂಚ್ EV vs ಎಂಜಿ ವಿಂಡ್ಸರ್ EV: ಯಾವುದು ಬೆಸ್ಟ್? ಬಜೆಟ್, ಮೈಲೇಜ್, ಬೆಲೆ ಕಂಪ್ಲೀಟ್ ಡೀಟೇಲ್ಸ್!
/filters:format(webp)/newsfirstlive-kannada/media/media_files/2026/02/21/ev-expo-2-2026-02-21-12-34-21.jpg)
ಈ ಎಕ್ಸ್​ಪೋನಲ್ಲಿ, ಎಲೆಕ್ಟ್ರಿಕ್ ಸ್ಕೂಟರ್​​, ಬೈಕ್​​, ಆಟೋ ​​ಕಾರುಗಳು, ಬಸ್, ಟ್ರಕ್, ಟ್ರಾಕ್ಟರ್‌ಗಳವರೆಗೆ ಎಲ್ಲವೂ ಒಂದೇ ವೇದಿಕೆಯಲ್ಲಿ ಲಭ್ಯವಿವೆ.. ಪ್ರತಿಷ್ಠಿತ ಇವಿ ಬ್ರ್ಯಾಂಡ್​​ಗಳಾದ ಟಾಟಾ ಇವಿ, ಟಾಟಾ ಮೋಟಾರ್ಸ್​ ಕಮರ್ಷಿಯಲ್​ ವೆಹಿಕಲ್​ಗಳು, ಮಹೀಂದ್ರಾ ಎಲೆಕ್ಟ್ರಿಕ್​ ಕಾರುಗಳು ಹಾಗೂ ಮಹೀಂದ್ರಾ ಲಾಸ್ಟ್​ ಮೈಲ್​ ಮೊಬಿಲಿಟಿ, ಅಶೋಕ್​ ಲೈಲಾಂಡ್​ ಟ್ರಕ್​​ಗಳು, ಸ್ವಿಚ್​ ಮೊಬಿಲಿಟಿ, ಇಕಾ ಮತ್ತು ವೋಲ್ವೋ ಐಶರ್​ ಕಮರ್ಶಿಯಲ್​ ವೆಹಿಕಲ್​ಗಳು ಭಾಗವಹಿಸಿವೆ. ಇನ್ನೂ ಕಾರುಗಳ ವಿಭಾಗದಲ್ಲಿ ಕಿಯಾ ಎಲೆಕ್ಟ್ರಿಕ್​ ಕಾರುಗಳು, ಎಂಜಿ ಮೋಟಾರ್ಸ್​, ಮರ್ಸಿಡಿಸ್​ ಬೆನ್ಜ್​ ಸೇರಿದಂತೆ ಅನೇಕ ಬ್ರಾಂಡ್​ಗಳು ಭಾಗವಹಿಸಿವೆ.
ಬೈಕ್​​ಗಳ ವಿಭಾಗದಲ್ಲಿ ಏಥರ್, ಟಿವಿಎಸ್​, ವಿಡಾ ಹೀರೋ, ಅಲ್ಟ್ರಾ ವಾಯ್ಲೆಟ್​ ಟೂ ವೀಲರ್​​ಗಳು ಭಾಗವಹಿಸಿವೆ. ಜೊತೆಗೆ ನಿಮಗೆ ಕೇವಲ ಮಾಹಿತಿ ಮಾತ್ರವಲ್ಲದೆ, ಅಲ್ಲೇ ಟೆಸ್ಟ್​ ಡ್ರೈವ್ ಮಾಡೋದಕ್ಕೂ ಅವಕಾಶ ಇದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಎಕ್ಸ್​ಪೋನಲ್ಲಿ ಭಾಗವಹಿಸಲು ಅವಕಾಶವಿದ್ದು, ಕೊನೆ ದಿನವಾಗಿರೋದ್ರಿಂದ ತಪ್ಪದೇ ಭಾಗವಹಿಸಿ. ಗೋ ಗ್ರೀನ್ ಇನಿಷಿಯೇಟಿವ್​ನ ಈ ಎಕ್ಸ್​ಪೋನಲ್ಲಿ ಭಾಗಿಯಾಗಿರುವ 40ಕ್ಕೂ ಹೆಚ್ಚು ಬ್ರಾಂಡ್​ಗಳಿಂದ ನಿಮಗೆ ಬೇಕಿರುವ ಮಾಹಿತಿಯನ್ನ ಪಡೆಯಬಹುದು. ಇವಿ ವಾಹನಗಳ ವಿಚಾರದಲ್ಲಿ ಗೊಂದಲಗಳು ಇದ್ದರೆ, ಇವಿ ಖರೀದಿಸಬೇಕು ಅಂದುಕೊಂಡಿದ್ದರೆ ಮಿಸ್ ಮಾಡ್ಕೋಬೇಡಿ. ಈಗಲೇ ಭೇಟಿ ನೀಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us