/newsfirstlive-kannada/media/media_files/2025/10/19/kruthika-2025-10-19-12-45-53.jpg)
ಬೆಂಗಳೂರು:ವೈದ್ಯೆ ಕೃತಿಕಾ ರೆಡ್ಡಿ ಪ್ರಕರಣದ ಬಗ್ಗೆ ಇನ್ನು ವಿಚಾರಣೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಮಗಳ ಹೆಸರಲ್ಲಿ ಬಡ ಮಕ್ಕಳಿಗೆ ಡಾಕ್ಟರ್​ ಓದಲು ಸಹಾಯ ಮಾಡುತ್ತೇವೆ ಎಂದು ಮೃತ ಕೃತಿಕಾ ಅವರ ತಂದೆ ಮುನಿರೆಡ್ಡಿ, ತಾಯಿ ಸೌಜನ್ಯ ಅವರು ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವೃತ್ತಿಯಲ್ಲಿ ವಕೀಲೆಯಾದ ಸೌಜನ್ಯ ಅವರು, ನನ್ನ ಮಗಳು ಕೃತಿಕಾ ರೆಡ್ಡಿಗೆ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ. ಆಕೆ ಚಿಕ್ಕ ವಯಸ್ಸಿಂದ ತುಂಬಾ ಬ್ರಿಲಿಯೆಂಟ್​ ಅಂತ ಮೃತ ಕೃತಿಕಾ ರೆಡ್ಡಿ ಆರೋಗ್ಯವಾಗಿಯೇ ಇದ್ದಳು. ಎಂಬಿಬಿಎಸ್​ನಲ್ಲೂ ಕೃತಿಕಾ ರೆಡ್ಡಿ ಟಾಪರ್​. ಸಂಬಂಧಿಕರು ನೋಡಿದ ಹುಡುಗನ ಜೊತೆ ಮದುವೆ ಮಾಡಿದ್ದೇವು. ಮದುವೆಯಾಗಿ ಹನ್ನೊಂದು ತಿಂಗಳು ಮಾತ್ರ ಅಳಿಯ ಮಹೇಂದ್ರ ಜೊತೆಗೆ ಇದ್ದ.
ನನ್ನ ಮಗಳಿಗೆ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ:
ಮಗಳನ್ನ ಬಿಟ್ಟು ಇರಲಿಕ್ಕ ಆಗಲಿಲ್ಲ ಆದ್ದರಿಂದ ಆ ಮನೆಯನ್ನ ಅವಳಿಗೆ ಕೊಟ್ಟಿದ್ದೇವು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ರೆ ಪ್ರಾಣ ತೆಗಿತಾರ?. ಪ್ರಾಣ ತೆಗೆಯೋ ಅಧಿಕಾರ ಆತನಿಗೆ ಯಾರು ಕೊಟ್ರು?. ನರರೂಪದ ರಾಕ್ಷಸ ಅವನು. ಪೊಲೀಸರ ತನಿಖೆ ಸಮಾಧಾನ ತಂದಿದೆ. ಮಗಳ ಹೆಸರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಕಾಲರ್​​ಶಿಪ್​ ಕೊಡಲು ತೀರ್ಮಾನಿಸಿದ್ದೇವೆ ಅಂತ ಕೃತಿಕಾ ರೆಡ್ಡಿ ತಾಯಿ ಸೌಜನ್ಯ ಹೇಳಿ ಭಾವುಕರಾದರು.
ಬಡ ಮಕ್ಕಳಿಗೆ ಡಾಕ್ಟರ್ ಓದಲು ಸಹಾಯ ಮಾಡುತ್ತೇನೆ:
ಇತ್ತ ಕೃತಿಕಾ ರೆಡ್ಡಿ ತಂದೆ ಮುನಿರೆಡ್ಡಿ ಮಾತನಾಡಿ, ನಾವು ನಮ್ಮ ಇಬ್ಬರು ಮಕ್ಕಳನ್ನ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಓದಿಸಿದ್ದೇವೆ. ನಮಗೆ ದುಡ್ಡಿನ ಸಮಸ್ಯೆ ಯಾವುದು ಇರಲಿಲ್ಲ. ಫ್ರೀ ಕ್ಯಾಂಪ್ ಮಾಡಬೇಕು ಎನ್ನುವ ಉದ್ದೇಶ ಇತ್ತು. ಸರ್ವಿಸ್ ಕೊಡೋ ಉದ್ದೇಶ ಇತ್ತು ಬಿಟ್ರೆ ಯಾವುದೇ ಹಣ ಮಾಡುವ ಉದ್ದೇಶ ನನಗೆ ಇರಲಿಲ್ಲ. ನಮ್ಮ ಇಬ್ಬರು ಮಕ್ಕಳನ್ನ ಗಂಡು ಮಕ್ಕಳ ರೀತಿ ಸಾಕಿದ್ದೀನಿ. ನಾನು ಬಡ ಮಕ್ಕಳಿಗೆ ಡಾಕ್ಟರ್​ ಓದಲು ಸಹಾಯ ಮಾಡ್ತೀನಿ ಅಂತ ಕೃತಿಕಾ ರೆಡ್ಡಿ ತಂದೆ ಹೇಳಿದ್ದಾರೆ.
ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಸುದ್ದಿಗೋಷ್ಟಿಯಲ್ಲಿ ಕೃತಿಕಾರೆಡ್ಡಿ ತಂದೆ ಮುನಿರೆಡ್ಡಿ, ತಾಯಿ ಸೌಜನ್ಯ, ಸಹೋದರಿ ಡಾಕ್ಟರ್ ನಿಕಿತಾ ರೆಡ್ಡಿ, ಕೃತಿಕಾ ಭಾವ ಮೋಹನ್ ರೆಡ್ಡಿ, ವಕೀಲ ನಾರಾಯಣ ರೆಡ್ಡಿ ಭಾಗಿಯಾಗಿದ್ದರು.