Advertisment

ಪ್ರೀತಿಯ ನೆಪದಲ್ಲಿ ಕಳ್ಳತನ.. ಬೆಂಗಳೂರಲ್ಲಿ ಪೊಲೀಸ್ ಬಲೆಗೆ ಬಿದ್ದ ಜೋಡಿ ಹಕ್ಕಿಗಳು..!

ಪ್ರೀತಿಯ ನೆಪದಲ್ಲಿ ಕಳ್ಳತನ ಮಾಡ್ತಿದ್ದ ಪ್ರೇಮಿಗಳನ್ನ ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯಿಸಿಕೊಂಡು ಈ ಜೋಡಿ ಕಳ್ಳತನ ಮಾಡುತ್ತಿತ್ತು. ಕವಿಪ್ರಿಯಾ, ಹರ್ಷವರ್ಧನ್ ಬಂಧಿತ ಆರೋಪಿಗಳು.

author-image
Ganesh Kerekuli
Lovers cheating case
Advertisment

ಬೆಂಗಳೂರು: ಪ್ರೀತಿಯ ನೆಪದಲ್ಲಿ ಕಳ್ಳತನ ಮಾಡ್ತಿದ್ದ ಪ್ರೇಮಿಗಳನ್ನ ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯಿಸಿಕೊಂಡು ಈ ಜೋಡಿ ಕಳ್ಳತನ ಮಾಡುತ್ತಿತ್ತು. 

Advertisment

ಕವಿಪ್ರಿಯಾ, ಹರ್ಷವರ್ಧನ್ ಬಂಧಿತ ಆರೋಪಿಗಳು. ಪೊಲೀಸ್ ತನಿಖೆ ವೇಳೆ ಕಳ್ಳತನ ಮಾಡುತ್ತಿದ್ದ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಸಾಲ ತೀರಿಸಲು ಕಳ್ಳತನದ ಪ್ಲಾನ್ ಮಾಡ್ತಿದ್ದರು ಅನ್ನೋ ವಿಚಾರ ಬಯಲಾಗಿದೆ. 

ಆ್ಯಪ್​ಗಳ ಮೂಲಕ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದರು. Happen appನಲ್ಲಿ ತನ್ನ ಫೋಟೊ ಹಾಕಿ ಕವಿಪ್ರಿಯಾ ಬಲೆ ಬೀಸಿದ್ದಳು. ಫೋಟೊ ನೋಡಿ ಭೇಟಿಯಾಗಲು ಯುವಕನೊಬ್ಬ ಕರೆದಿದ್ದ. ನವೆಂಬರ್ 1 ರಂದು ಇಬ್ಬರು ಇಂದಿರಾನಗರದ ರೆಸ್ಟೋರೆಂಟ್​ನಲ್ಲಿ ಭೇಟಿಯಾಗಿದ್ದರು. 

ಇಬ್ಬರು ಮದ್ಯ ಸೇವಿಸಿ ಲಾಡ್ಜ್ ಒಂದಕ್ಕೆ ತೆರಳಿದ್ದರು. ಮಧ್ಯರಾತ್ರಿ ಆನ್​ಲೈನ್​ನಲ್ಲಿ ಆಕೆಯೇ ಊಟ ತರಿಸಿದ್ದಳು. ಊಟದ ನಂತರ ಯುವಕನಿಗೆ ಕುಡಿಯಲು ನೀರು ಕೊಟ್ಟಿದ್ದಳು. ನೀರು ಕುಡಿಯುತ್ತಿದ್ದಂತೆಯೇ ಯುವಕ ಪ್ರಜ್ಞೆ ತಪ್ಪಿ ಮಲಗಿದ್ದ. ಈ ವೇಳೆ ನಗದು, ಚಿನ್ನ ದೋಚಿ ಕವಿಪ್ರಿಯಾ ಎಸ್ಕೇಪ್ ಆಗಿದ್ದಳು. ಕಳ್ಳತನ ಸಂಬಂಧ ಪೊಲೀಸರಿಗೆ ಆ ಯುವಕ ದೂರು ನೀಡಿದ್ದ. ಸದ್ಯ ಇಬ್ಬರನ್ನು ಬಂಧಿಸಿ ವಿಚಾರಣೆ ವಿಚಾರಣೆ ನಡೆಸ್ತಿದ್ದಾರೆ. ಸಾಲ ತೀರಿಸಲು ಮಾಡಿದ್ದ ಮೊದಲ ಪ್ಲಾನ್ ಇದಾಗಿತ್ತು ಎಂದು ತಿಳಿದುಬಂದಿದೆ. 

Advertisment

ಇದನ್ನೂ ಓದಿ: ‘ಸುಧಿ ಎಲಿಮಿನೇಟ್ ಆಗಲು ಕಾರಣ ಮಾಳುನಾ..’ ಏನಂದ್ರು ಕಾಕ್ರೋಚ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Love Cheating case Happen app
Advertisment
Advertisment
Advertisment