/newsfirstlive-kannada/media/media_files/2026/01/31/pardeep-eshwar-2026-01-31-16-01-17.jpg)
ರಾಮನಗರ: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಪ್ರಕರಣಕ್ಕೆ ಈಗ ರಾಜಕೀಯ ಬಣ್ಣ ಬಂದಿದೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು, ಪ್ರಕರಣದ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಇದರ ಹಿಂದೆ ಬಿಜೆಪಿ ನಾಯಕರ ಭ್ರಷ್ಟಾಚಾರ ಮತ್ತು ಐಟಿ ಇಲಾಖೆಯ ಕಿರುಕುಳವಿದೆ ಎಂದು ನೇರ ಆರೋಪ ಮಾಡಿದ್ದಾರೆ.
ಕನಕಪುರದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್ ಅವರು ಪ್ರಮುಖವಾಗಿ 5 ಪ್ರಶ್ನೆಗಳನ್ನ ಎತ್ತಿದ್ದಾರೆ.
1. ಆತ್ಮ*ತ್ಯೆಯೋ ಅಥವಾ ಕೊ*ಯೋ?:
ಸಿ.ಜೆ. ರಾಯ್ ಅವರೇ ಗುಂಡು ಹೊಡೆದುಕೊಂಡಿದ್ದಾರಾ ಅಥವಾ ಯಾರಾದರೂ ಅವರಿಗೆ ಗುಂಡು ಹೊಡೆದಿದ್ದಾರಾ? ಎಂಬ ಅನುಮಾನ ನನಗಿದೆ. ಅವರು ಗುಂಡು ಹಾರಿಸಿಕೊಂಡಾಗ ಅಲ್ಲಿ ಸಿಸಿಟಿವಿ ಇರಲಿಲ್ಲ, ಇದ್ದವರು ಕೇವಲ ಐಟಿ ಅಧಿಕಾರಿಗಳು ಮಾತ್ರ. ಒಳಗಡೆ ಅಸಲಿಗೆ ಏನಾಗಿದೆಯೋ ಯಾರಿಗೂ ಗೊತ್ತಿಲ್ಲ ಎಂದು ಸಂಶಯ ವ್ಯಕ್ತಪಡಿಸಿದರು.
2. ಚುನಾವಣೆಗೆ ನೂರಾರು ಕೋಟಿ ಬೇಡಿಕೆ?
ಬಿಜೆಪಿ ವಿರುದ್ಧ ಸ್ಫೋಟಕ ಆರೋಪ ಮಾಡಿದ ಪ್ರದೀಪ್ ಈಶ್ವರ್, ನನಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಬಿಜೆಪಿಯವರು ಮುಂಬರುವ ಚುನಾವಣೆಗಾಗಿ ರಾಯ್ ಬಳಿ ನೂರಾರು ಕೋಟಿ ರೂಪಾಯಿ ಹಣ ಕೇಳಿದ್ದಾರೆ. ಆ ಹಣ ಕೊಡದಿದ್ದಕ್ಕೆ ಅವರನ್ನು ಟಾರ್ಗೆಟ್ ಮಾಡಿ ಕಳೆದ ಒಂದು ತಿಂಗಳಿನಿಂದ ಐಟಿ ಮೂಲಕ ಕಿರುಕುಳ ನೀಡಲಾಗಿದೆ ಎಂದು ಗಂಭೀರವಾಗಿ ದೂಷಿಸಿದರು.
3. ಬಿಜೆಪಿ ನಾಯಕರ ಮೌನಕ್ಕೆ ಪ್ರಶ್ನೆ
ಆರ್ ಅಶೋಕ್, ಸುನೀಲ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮೈಸೂರಿನ ಒಂದು ಕೋತಿ (ಪ್ರತಾಪ್ ಸಿಂಹ) ಪ್ರತಿಯೊಂದಕ್ಕೂ ಬಾಯಿ ಬಡಿದುಕೊಳ್ಳುತ್ತಾರೆ. ಆದರೆ ಒಬ್ಬ ಯಶಸ್ವಿ ಉದ್ಯಮಿಯ ಈ ಸಾವಿನ ಬಗ್ಗೆ ಯಾಕೆ ಯಾರೂ ಬಾಯಿ ಬಿಡುತ್ತಿಲ್ಲ? ಒಬ್ಬ ಕಾಮನ್ ಮ್ಯಾನ್ ಹಣ ಸಂಪಾದನೆ ಮಾಡುವುದನ್ನು ನೋಡಲು ಈ ಬಿಜೆಪಿಯವರಿಗೆ ಆಗುತ್ತಿಲ್ಲ ಎಂದು ಕಿಡಿಕಾರಿದರು.
4. ಆರ್ಥಿಕ ಸಮಸ್ಯೆ ಇರಲಿಲ್ಲ:
ರಾಯ್ ಅವರಿಗೆ ಯಾವುದೇ ಸಾಲದ ಬಾಧೆ ಇರಲಿಲ್ಲ ಅಥವಾ ವೈಯಕ್ತಿಕ ಸಮಸ್ಯೆಗಳೂ ಇರಲಿಲ್ಲ. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಐಟಿ ಅಸ್ತ್ರ ಬಳಸಿ ಅವರಿಗೆ ಮಾನಸಿಕ ಹಿಂಸೆ ನೀಡಲಾಗಿದೆ. ಈ ಕಿರುಕುಳವೇ ಅವರ ಸಾವಿಗೆ ಕಾರಣ ಎಂದು ಪ್ರದೀಪ್ ಈಶ್ವರ್ ಹೇಳಿದರು.
5. ಎಸ್‌ಐಟಿ ತನಿಖೆಗೆ ಆಗ್ರಹ
ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ರಾಜ್ಯ ಸರ್ಕಾರ ಎಸ್‌ಐಟಿ (SIT) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಈ ಪ್ರಕರಣವನ್ನು ಸಿಬಿಐಗೆ ಕೊಟ್ಟರೆ ಅದೂ ಕೂಡ ಅವರ (ಕೇಂದ್ರದ) ಕೈಯಲ್ಲೇ ಇದೆ, ಅಲ್ಲಿ ನ್ಯಾಯ ಸಿಗಲ್ಲ. ಆದ್ದರಿಂದ ರಾಜ್ಯ ಪೊಲೀಸರಿಂದಲೇ ಎಸ್‌ಐಟಿ ರಚನೆಯಾಗಲಿ ಎಂದು ಅವರು ಆಗ್ರಹಿಸಿದರು.
ಪ್ರದೀಪ್ ಈಶ್ವರ್ ಈ ಹೇಳಿಕೆಯು ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದ್ದು, ಬಿಜೆಪಿ ನಾಯಕರು ಇದಕ್ಕೆ ಯಾವ ರೀತಿ ತಿರುಗೇಟು ನೀಡುತ್ತಾರೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: ಸೈಟ್ ಗಲಾಟೆ: GPA ಹೋಲ್ಡರ್-ಯಶ್ ತಾಯಿ ಮಧ್ಯೆ ಜಟಾಪಟಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us