Advertisment

ಅಮ್ಮ, ಮಗಳ ಜೀವ ತೆಗೆದ ಗ್ಯಾಸ್​ ಗೀಸರ್‌.. ಓದಲೇಬೇಕಾದ ಸ್ಟೋರಿ..!

ರಾಣಿಯಂತೆ ನೋಡ್ಕೊಳ್ಳೋ ಗಂಡ.. ಖುಷಿ ರೂಪದಲ್ಲಿದ್ದ ಮಗು.. ಪುಟ್ಟ ಸಂಸಾರ.. ಬಂಗಾರದಂತ ಬದುಕು ಕೊಟ್ಟಿದ್ದ ಆ ಭಗವಂತ.. ಎಲ್ಲವನ್ನ ಕೊಟ್ಟವನು ಆಕೆ, ಆಕೆಯ ಮಗುವಿಗೆ ಆಯಸ್ಸು ಕೊಡೋದು ಮರೆತೆ ಬಿಟ್ಟಿದ್ದ ಅನ್ಸುತ್ತೆ.. ಸ್ಟೋರಿಯ ಕಂಪ್ಲೀಟ್ ವಿವರ ಇಲ್ಲಿದೆ.

author-image
Ganesh Kerekuli
gas geyser
Advertisment

ನೀವು ಮನೆಯಲ್ಲಿ ಗ್ಯಾಸ್​ ಗೀಸರ್‌ ಬಳಸುತ್ತಿದ್ದೀರಾ? ಹಾಗಾದ್ರೆ ನೀವು ಓದಲೇಬೇಕಾದ ಸ್ಟೋರಿ ಇದು. ಸ್ನಾನ ಮಾಡೋದಕ್ಕೆ ಸ್ನಾದ ಕೋಣೆಗೆ ಹೋಗಿದ್ದ ತಾಯಿ, ಮಗು ಗ್ಯಾಸ್‌ ಗೀಸರ್‌ಗೆ ದುರಂತದಲ್ಲಿ ಅಂತ್ಯ ಕಂಡಿದ್ದಾರೆ. ಗ್ಯಾಸ್​ ಗೀಸರ್​ ಹೇಗೆ ತಾಯಿ, ಮಗುವನ್ನ ಬಲಿ ಪಡೀತು ಅನ್ನೋ ಡೀಟೇಲ್ಸ್​ ಇಲ್ಲಿದೆ.

Advertisment

ಗ್ಯಾಸ್‌ ಗೀಸರ್‌ಗೆ ತಾಯಿ, ಮಗು ದುರ್ಮರಣ

ನೆಮ್ಮದಿಯ ಸಂಸಾರದಲ್ಲಿ ಸಾವಿನ ಅಲೆ ಎದ್ದಿದೆ. ಹತ್ತಾರು ವರ್ಷ ಬದುಕಿ ಬಾಳ ಬೇಕಿದ್ದ ತಾಯಿ ಮಗು ಬದುಕಿನ ಯಾನ ಮುಗಿಸಿದ್ದಾರೆ. ಗ್ಯಾಸ್​ ಗೀಸರ್​ ರೂಪದಲ್ಲಿ ಕಾದು ಕುಳಿತಿದ್ದ ಜವರಾಯ, ತಾಯಿ ಮಗಳ ಜೀವ ಕಿತ್ಕೊಂಡು ಹೋಗಿದ್ದಾನೆ. ಗೋವಿಂದರಾಜನಗರದ ಪಂಚಶೀಲನಗರದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಿಂದ 26 ವರ್ಷದ ತಾಯಿ ಚಾಂದಿನಿ, 4 ವರ್ಷದ ಮಗಳು ಯುವಿ ಸಾವನ್ನಪ್ಪಿರೋ ಆಘಾತಕಾರಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಳಗಾವಿ ಜಿಲ್ಲೆ ತ್ರಿಭಜನೆ ಘೋಷಣೆ ನಿರೀಕ್ಷೆ.. ಕನ್ನಡಿಗರಿಗೆ ಎದುರಾದ ಆತಂಕ ಏನು..?

gas geyser (1)

ಜೀವ ತೆಗೆದ ಗ್ಯಾಸ್ ಗೀಸರ್​!

  • ಮಧ್ಯಾಹ್ನದ ವೇಳೆ ಸ್ನಾನಕ್ಕೆ ಹೋಗಿದ್ದ ತಾಯಿ, ಮಗು
  • ಈ ವೇಳೆ ಗ್ಯಾಸ್ ಲೀಕ್ ಆಗಿ ತಾಯಿ, ಮಗು ಅಸ್ವಸ್ಥ
  • ತಕ್ಷಣವೇ ತಾಯಿ, ಮಗು ಇಬ್ಬರೂ ಆಸ್ಪತ್ರೆಗೆ ರವಾನೆ
  • ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು
  • ಪತ್ನಿ, ಮಗು ಕಳೆದುಕೊಂಡು ಪತಿ ಕಿರಣ್ ಕಂಗಾಲು
Advertisment

ಕಾರ್ಪೆಂಟರ್ ಕೆಲಸ ಮಾಡ್ತಿದ್ದ ಚಾಂದಿನಿ ಪತಿ ಕಿರಣ್ ಹೊರಗೆ ಹೋಗಿದ್ರು. ಈ ವೇಳೆ ಮಧ್ಯಾಹ್ನ ತಾಯಿ ಹಾಗೂ ಪುಟ್ಟ ಮಗು ಸ್ನಾನಕ್ಕೆ ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ. ಒಟ್ಟಾರೆ, ಪುಟ್ಟ ಪುಟ್ಟ ಕುಟುಂಬ, ಚೊಕ್ಕ ಬದುಕು ಸವೆಸ್ತಿದ್ದ ಜೀವಗಳು ಗ್ಯಾಸ್​ ಗೀಸರ್​ನಿಂದ ದುರಂತ ಅಂತ್ಯ ಕಂಡಿದ್ದಾರೆ. ಇನ್ನಾದ್ರೂ ಗ್ಯಾಸ್​ ಗೀಸರ್​ ಬಳಸೋರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಿದೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

gas leak death gas geyser
Advertisment
Advertisment
Advertisment