/newsfirstlive-kannada/media/media_files/2025/12/09/siddaramaiah-3-2025-12-09-08-40-07.jpg)
ಬೆಳಗಾವಿ ವಿಭಜನೆ ಭಜನೆ ಶುರುವಾಗಿದೆ.. ಹಲವು ದಶಕಗಳ ಹೋರಾಟ, ಸರ್ಕಾರಗಳ ನಿರಂತರ ಭರವಸೆ, ಸಮಿತಿಗಳ ಶಿಫಾರಸು, ಫೈನಲಿ ರಾಜಕೀಯ ಮೇಲಾಟಗಳ ನಡುವೆ ಬೆಳಗಾವಿ ಹೋಳಾಗುವ ಕಾಲ ಹತ್ತಿರವಾಗ್ತಿದೆ. ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೇ ನೂತನ ಜಿಲ್ಲೆಗಳ ಘೋಷಣೆಗಳ ನಿರೀಕ್ಷೆ ಗರಿಗೆದರಿದೆ.
ಬೆಳಗಾವಿ ಜಿಲ್ಲೆಯ ತ್ರಿಭಜನೆ.. ಶುರುವಾಯ್ತು ಭಜನೆ!
ಬೆಳಗಾವಿ.. ರಾಜ್ಯದ ಅತಿ ದೊಡ್ಡ ಜಿಲ್ಲೆ.. 15 ತಾಲೂಕು ಹಾಗೂ 18 ವಿಧಾನಸಭಾ ಕ್ಷೇತ್ರ, 500ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಿದ್ದು, 55 ಲಕ್ಷಕ್ಕೂ ಅಧಿಕ ಜನ ಸಂಖ್ಯೆಯಿದೆ.. ಸುಮಾರು 300 ಕಿ.ಮೀ ಭೌಗೋಳಿಕ ವಿಸ್ತಾರವಿದೆ.. ಹೀಗಾಗಿ ಬೆಳಗಾವಿ ತ್ರಿಭಜನೆ ಅಗತ್ಯ ಇದೆ ಅನ್ನೋ ಮಾತು ಕೇಳಿ ಬರ್ತಿದೆ..
ಇದನ್ನೂ ಓದಿ:ಸಿಎಂ ಅಭ್ಯರ್ಥಿಯಾಗಲು 500 ಕೋಟಿ ರೂ ಕೊಡಬೇಕು ಎಂದಿದ್ದ ನವಜೋತ್ ಕೌರ್ : ಇಂದು ಕಾಂಗ್ರೆಸ್ ಪಕ್ಷದಿಂದ ಸಸ್ಪೆಂಡ್
/filters:format(webp)/newsfirstlive-kannada/media/media_files/2025/12/09/belagavi-three-district-1-2025-12-09-08-41-40.jpg)
ಗೋಕಾಕ್, ಚಿಕ್ಕೋಡಿ ಜಿಲ್ಲಾ ಕೇಂದ್ರವನ್ನಾಗಿಸಲು ಸಿಎಂಗೆ ಮನವಿ
ನಿನ್ನೆ ರಾತ್ರಿ ಜಿಲ್ಲಾ ಹೋರಾಟ ಸಮಿತಿಗಳು ಸಿಎಂ ಭೇಟಿ ಮಾಡಿವೆ.. ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿಯನ್ನು ಆಡಳಿತಾತ್ಮಕ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ವಿಭಜಿಸಿ ಅಂತ ಮನವಿ ಕೊಟ್ಟಿವೆ.. ಚಿಕ್ಕೋಡಿ ಮತ್ತು ಗೋಕಾಕ್​ ಜಿಲ್ಲೆಗಳನ್ನು ರಚಿಸುವಂತೆ ವಿವಿಧ ಮಠಾಧೀಶರು, ಹೋರಾಟಗಾರರು, ಜನಪ್ರತಿನಿಧಿಗಳು ಭೇಟಿ ಮಾಡಿ ಸಿಎಂಗೆ ಮನವಿ ಸಲ್ಲಿಸಿವೆ..
/filters:format(webp)/newsfirstlive-kannada/media/media_files/2025/12/09/belagavi-three-district-2025-12-09-08-42-01.jpg)
ಜಿಲ್ಲೆಯ 18 ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಸಿಎಂ ತೀರ್ಮಾನ
ಬೆಳಗಾವಿಯ ಸರ್ಕ್ಯೂಟ್ ಹೌಸ್‌ನಲ್ಲಿ ಸಿಎಂ ಭೇಟಿಯಾದ ನಾಯಕರು, ಬೆಳಗಾವಿ ಜಿಲ್ಲೆ ವಿಭಜಿಸಿ, ಚಿಕ್ಕೋಡಿ ಮತ್ತು ಗೋಕಾಕ್​ ಜಿಲ್ಲೆಗಳನ್ನ ರಚಿಸಲು ಈಗಾಗಲೇ ಆಯೋಗಗಳು ಶಿಫಾರಸ್ಸು ಮಾಡಿದ್ದನ್ನ ಸಿಎಂ ಗಮನಕ್ಕೆ ತರಲಾಯ್ತು.. ಈ ಸಂಬಂಧ ಜಿಲ್ಲೆಯ 18 ಶಾಸಕರನ್ನ ಕರೆದು ಅಭಿಪ್ರಾಯ ಪಡೆದು ಶೀಘ್ರ ನಿರ್ಣಯ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಒಟ್ಟಾರೆ, ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಮರಾಠಿ ಭಾಷಿಕರ ಪ್ರಾಬಲ್ಯ ಹೆಚ್ಚಾಗಲಿದೆ ಎಂಬ ಆತಂಕವೂ ಇದೆ.. ಹೀಗಾಗಿ ಬೆಳಗಾವಿ ವಿಭಜಿಸಿ ಹೊಸ ಜಿಲ್ಲೆಗಳ ರಚನೆಯಲ್ಲಿ ಸರ್ಕಾರ, ಆತುರಪಡದೆ ಸೂಕ್ಷ್ಮ ಹೆಜ್ಜೆ ಇರಿಸಬೇಕಿದೆ.
ಇದನ್ನೂ ಓದಿ: ಜೈಲಿನ ಸೆಲ್ ನಲ್ಲಿ ಸಹ ಕೈದಿಗಳಿಗೆ ನಟ ದರ್ಶನ್ ಟಾರ್ಚರ್ : ದರ್ಶನ್ ಸಹವಾಸ ಸಾಕಪ್ಪಾ, ಸಾಕು ಎನ್ನುತ್ತಿರುವ ಸಹಕೈದಿಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us