Advertisment

‘ಖಾಲಿ ಟ್ರಂಕ್’ ಹಿಡಿದು ಪ್ರತಿಭಟಿಸ್ತಿದ್ದ ಸಂಸದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ..!

ಮೆಟ್ರೋ ಪ್ರಯಾಣಿಕರಿಗೆ ಕೊನೆಗೂ ನೆಮ್ಮದಿಯ ಸುದ್ದಿ ಸಿಕ್ಕಿದೆ. ಟಿಕೆಟ್ ದರ ಏರಿಕೆಯಾಗಲಿದೆ ಎಂಬ ಆತಂಕದಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಇತ್ತ ದರ ಏರಿಕೆ ಪ್ರಸ್ತಾಪ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಟೀಕಿಸಿ ಸಂಸದ ತೇಜಸ್ವಿ ಸೂರ್ಯ ಇಂದು ಪ್ರತಿಭಟನೆ ನಡೆಸಿದರು.

author-image
Ganesh Kerekuli
tejaswi surya
Advertisment

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಕೊನೆಗೂ ನೆಮ್ಮದಿಯ ಸುದ್ದಿ ಸಿಕ್ಕಿದೆ. ಟಿಕೆಟ್ ದರ ಏರಿಕೆಯಾಗಲಿದೆ ಎಂಬ ಆತಂಕದಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಇತ್ತ ದರ ಏರಿಕೆ ಪ್ರಸ್ತಾಪ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಟೀಕಿಸಿ ಸಂಸದ ತೇಜಸ್ವಿ ಸೂರ್ಯ ಇಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. 

Advertisment

ಆರ್‌ವಿ ರಸ್ತೆ (RV Road) ಮೆಟ್ರೋ ನಿಲ್ದಾಣಕ್ಕೆ ಕೈಯಲ್ಲಿ 'ಖಾಲಿ ಟ್ರಂಕ್' (Empty Trunk) ಹಿಡಿದುಕೊಂಡು ಬಂದ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಆರ್‌ವಿ ರಸ್ತೆಯಿಂದ ನ್ಯಾಷನಲ್ ಕಾಲೇಜಿಗೆ ಟಿಕೆಟ್ ಪಡೆದು ಟ್ರಂಕ್ ಜೊತೆ ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾದ ಸಂಸದರನ್ನು ಪೊಲೀಸರು ತಡೆದರು. ಮೆಟ್ರೋದಲ್ಲಿ ಪ್ರಯಾಣಿಸುವ ಮುನ್ನವೇ ಸಂಸದರನ್ನು ಹಾಗೂ ಅವರ ಕೈನಲ್ಲಿದ್ದ ಟ್ರಂಕ್ ಅನ್ನು ಪೊಲೀಸರು ವಶಕ್ಕೆ ಪಡೆದರು.

ಇದನ್ನೂ ಓದಿ: 2026ರ ಮೊದಲ ರಕ್ತಚಂದ್ರ ಗ್ರಹಣ: ಭಾರತದಲ್ಲಿ ಗೋಚರಿಸಲಿದೆಯೇ ಈ ಅದ್ಭುತ?

tejaswi surya (2)

ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?

ಪೊಲೀಸರ ಕ್ರಮದ ಬಳಿಕ ಮಾತನಾಡಿದ ತೇಜಸ್ವಿ ಸೂರ್ಯ, ‘ನಾನು ಮುಷ್ಕರ ಮಾಡುತ್ತಿಲ್ಲ, ಪ್ರತಿಭಟನೆಯನ್ನೂ ಮಾಡುತ್ತಿಲ್ಲ. ಟಿಕೆಟ್ ಪಡೆದು ಪ್ರಯಾಣಿಕನಾಗಿ ಮೆಟ್ರೋ ಏರಲು ಬಂದಿದ್ದೇನೆ. ನನ್ನ ಕೈಯಲ್ಲಿರುವುದು ಬರೀ ಖಾಲಿ ಟ್ರಂಕ್ ಅಲ್ಲ, ಇದು ರಾಜ್ಯ ಸರ್ಕಾರದ ಪ್ರತೀಕ. ಸರ್ಕಾರವೇ ಹೇಳಿಕೊಂಡಂತೆ ಅವರ ಬಳಿ 'ಶ್ಯಾಡೋ ಕ್ಯಾಶ್ ಸಪೋರ್ಟ್' ಕೊಡಲು ಹಣವಿಲ್ಲ, ಖಜಾನೆ ಖಾಲಿಯಾಗಿದೆ. ಅದನ್ನೇ ಈ ಟ್ರಂಕ್ ಸೂಚಿಸುತ್ತಿದೆ," ಎಂದು ವ್ಯಂಗ್ಯವಾಡಿದರು.

Advertisment

tejaswi surya (1)

ಶ್ವೇತಪತ್ರ ಹೊರಡಿಸಲು ಆಗ್ರಹ

ಒಂದೆಡೆ ಮೆಟ್ರೋಗೆ ಹಣಕಾಸಿನ ನೆರವು ನೀಡಲು ದುಡ್ಡಿಲ್ಲ ಎನ್ನುತ್ತೀರಿ, ಇನ್ನೊಂದೆಡೆ ಕೋಟಿ ಕೋಟಿ ಖರ್ಚು ಮಾಡಿ ಟನಲ್ ಮಾಡುತ್ತೇವೆ ಎನ್ನುತ್ತೀರಿ. ರಾಜ್ಯದ ನಿಜವಾದ ಆರ್ಥಿಕ ಪರಿಸ್ಥಿತಿ ಏನು ಎಂಬುದು ಜನರಿಗೆ ತಿಳಿಯಬೇಕು. ಈ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ತನ್ನ ಆರ್ಥಿಕ ಸ್ಥಿತಿಗತಿಯ ಬಗ್ಗೆ 'ಶ್ವೇತ ಪತ್ರ' (White Paper) ಹೊರಡಿಸಬೇಕು," ಎಂದು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಇದನ್ನೂ ಓದಿ:ಮೆಟ್ರೋ ದರ ಏರಿಕೆ ಇಲ್ಲ.. ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Namma metro tejaswi surya
Advertisment
Advertisment
Advertisment