Advertisment

ಬೆಂಗಳೂರಲ್ಲಿ ಪಾರ್ಕಿಂಗ್ ತಲೆಬಿಸಿ.. ಶಾಶ್ವತ ಮುಕ್ತಿಗೆ ಒಂದು ಸೂಪರ್ ಐಡಿಯಾ!

ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್​ ಸಿಟಿ ಅನ್ನೋ ಟೈಟಲ್​ಗೆ ಹೆಚ್ಚು ಹೆಚ್ಚು ಮ್ಯಾಚ್​ ಆಗ್ತಿದೆ. ಕಾರಣ ಸಿಟಿಯನ್ನ ಆವರಿಸಿರೋ ಟ್ರಾಫಿಕ್ ಟೆನ್ಷನ್​​. ಈ ಟ್ರಾಫಿಕ್​ ಕಿರಿಕಿರಿಗೆ ಬ್ರೇಕ್​ ಹಾಕಲು ಸಿಟಿ ಜನ ಎಷ್ಟೇ ಕೂಗಾಡಿದ್ರೂ ಸೆಲ್ಯೂಷನ್​​ ಸಿಕ್ತಿಲ್ಲ.

author-image
Ganesh Kerekuli
parking (1)
Advertisment

ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್​ ಸಿಟಿ ಅನ್ನೋ ಟೈಟಲ್​ಗೆ ಹೆಚ್ಚು ಹೆಚ್ಚು ಮ್ಯಾಚ್​ ಆಗ್ತಿದೆ.  ಕಾರಣ ಸಿಟಿಯನ್ನ ಆವರಿಸಿರೋ ಟ್ರಾಫಿಕ್ ಟೆನ್ಷನ್​​. ಈ ಟ್ರಾಫಿಕ್​ ಕಿರಿಕಿರಿಗೆ ಬ್ರೇಕ್​ ಹಾಕಲು ಸಿಟಿ ಜನ ಎಷ್ಟೇ ಕೂಗಾಡಿದ್ರೂ ಸೆಲ್ಯೂಷನ್​​ ಸಿಕ್ತಿಲ್ಲ. ಆದ್ರೀಗ ಜಿಬಿಎ ಟ್ರಾಫಿಕ್​ ಕಂಟ್ರೋಲ್​ಗೆ ಮಲ್ಟಿ ಲೆವೆಲ್​ ಪಾರ್ಕಿಂಗ್​ ಲಾಟ್​​ಗೆ ಪ್ಲ್ಯಾನ್​ ನಡೆಸಿದೆ.

Advertisment

‘ಟ್ರಾಫಿಕ್’​ ‘ಟ್ರಾಫಿಕ್’ ‘ಟ್ರಾಫಿಕ್’.. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ನಿತ್ಯ ಕಂಡು ಬರೋ ದೃಶ್ಯ.. ಒಂದು ಒಂಥರಾ ಸಿಟಿ ಜನರ ತಲೆನೋವು ಹೆಚ್ಚಿಸಿದ್ರೆ, ರಸ್ತೆ ಬದಿಯಲ್ಲಿ ನಿಲ್ಲಿಸೋ ವೆಹಿಕಲ್ಸ್​​ಗಳಿಂದ ಮತ್ತೊಂದು ಬಿಗ್​ ಟ್ರಬಲ್​ ಆಗ್ತಿದೆ.. 

ಇದನ್ನೂ ಓದಿ: ಗಿಣಿ ಶಾಸ್ತ್ರ ಕೇಳಿ ಡಿಕೆಶಿಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ -ಅಸಲಿ ಕತೆ ಏನು?

ಅರ್ಜೆಂಟ್​​ನಲ್ಲಿ ಆಫಿಸ್​ಗೆ ಹೊರಟ್ರೂ ಅಷ್ಟೇ.. ಯಾವುದೋ ಕೆಲಸ ಇದೆ ಬೇಗ ಬಂದು ಸೇರ್ಬೆಕು ಅಂತ ಅಂದುಕೊಂಡ್ರು ಅಷ್ಟೇ.. ಬೆನ್ನಿಗೆ ಹಿಡಿದ ಬೇತಾಳನಂತೆ ನನ್ನ​​ ಜೊತೆ ನೀವು ರೋಡ್​ನಲ್ಲಿ ಕಾಯ್ಬೇಕು ಅನ್ನತ್ತೆ ಈ ‘ಟ್ರಾಫಿಕ್’​. ಪಾಕಿಂಗ್​ಗಳಿಗೆ ಸೂಕ್ತವಾದ ವ್ಯವಸ್ಥೆ ಇಲ್ದೆ ರಸ್ತೆಯಲ್ಲಿ ವೆಹಿಕಲ್ಸ್​ ನಿಲ್ಲಿಸೋದ್ರಿಂದ ರಸ್ತೆಯಲ್ಲಿ ಓಡಾಡೋ ಸವಾರರಿಗೆ ಕಿರಿಕಿರಿ ಉಂಟಾಗ್ತಿದೆ.. ಇದಕ್ಕೊಂದು ಸೆಲ್ಯೂಷನ್​ ಫೈನ್ಡ್​​ಔಟ್​ ಮಾಡ್ರಿ ಸ್ವಾಮಿ ಅಂತ ಸಿಟಿಜನ ಹೇಳಿ ಹೇಳಿ ಸುಸ್ತಾಗ್ತಿದ್ದಾರೆ.. ಕೊನೆಗೂ ಎಚ್ಚೆತ್ತ GBA 66 ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್ ನಿರ್ಮಾಣಕ್ಕೆ ಮುಂದಾಗಿದೆ.. 

Advertisment

ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್

  • 66 ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್​​ ನಿರ್ಮಾಣಕ್ಕೆ GBA ಮುಂದು
  • ಸಿಟಿಯಲ್ಲಿ ಟ್ರಾಫಿಕ್​ ಸಮಸ್ಯೆ ಹೆಚ್ಚಾಗ್ತಿರೋ ಹಿನ್ನೆಲೆ ಪೊಲೀಸರ ಮನವಿ 
  • ವಾಹನ ದಟ್ಟಣೆ ಹೆಚ್ಚಾಗಿರೋ ಪ್ರದೇಶಗಳಲ್ಲಿ ಪಾರ್ಕಿಂಗ್ ಲಾಟ್​ಗೆ ಪ್ಲ್ಯಾನ್​
  • PPP ಮಾಡೆಲ್ ಯೋಜನೆಯಡಿ ಪಾರ್ಕಿಂಗ್ ಲಾಟ್​​ಗಳ ನಿರ್ಮಾಣಕ್ಕೆ ಸಜ್ಜು
  • ಪ್ರತಿ ಪಾರ್ಕಿಂಗ್ ಲಾಟ್​​ನಲ್ಲಿ 485 ಕಾರು ಪಾರ್ಕ್ ಮಾಡುವಂತೆ ಪ್ಲ್ಯಾನಿಂಗ್​
  • ಪ್ರತಿಯೊಂದು ಪಾರ್ಕಿಂಗ್​ ಲಾಟ್​​ನಲ್ಲಿ 9 ಮಹಡಿ ಮತ್ತು 7 ಲಿಫ್ಟ್​​ ಇರಲಿದ್ಯಂತೆ 

ಒಟ್ನಲ್ಲಿ ಬೆಂಗಳೂರಿಗರಿಗೆ ಸೂಕ್ತ ಪಾಕಿಂಗ್​ ವ್ಯವಸ್ಥೆ ಇಲ್ಲದೆ ಇರೋದ್ರಿಂದ ಟ್ರಾಫಿಕ್ ​ದೊಡ್ಡ ತಲೆ ನೋವಾಗಿ ಪರಿಣಮಿಸ್ತಿದೆ.. ಈ ಹಿನ್ನೆಲೆ ಜಿಬಿಎ ಇಟ್ಟಿರೋ ಈ ಹೆಜ್ಜೆ ನಿಜಕ್ಕೂ ಮೆಚ್ಚುವಂತದ್ದೇ.. ಹೀಗಾಗಿ ಆದಷ್ಟು ಬೇಗ ಈ ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್ ನಿರ್ಮಾಣ ಆದ್ರೆ ಟ್ರಾಫಿಕ್​ ಸಮಸ್ಯೆಗೆ ಮುಕ್ತಿ ಸಿಕ್ಕಂತೆ ಆಗಲಿದೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Bengaluru News Traffic bengaluru traffic
Advertisment
Advertisment
Advertisment