/newsfirstlive-kannada/media/media_files/2025/09/12/namma-metro-heart-2025-09-12-09-46-28.jpg)
ನಮ್ಮ ಮೆಟ್ರೋ ಅನೇಕ ಮಾನವೀಯ ಸೇವೆಗಳಿಂದಲೂ ಜನರ ಹೃದಯ ಗೆದ್ದಿದೆ. ಅಂತೆಯೇ ಸೆಪ್ಟೆಂಬರ್ 11 ರಂದು ‘ಜೀವಂತ ಹೃದಯ ಸಾಗಿಸಲಾಗಿದೆ.
ಯಶವಂತಪುರದಿಂದ ಮಂತ್ರಿ ಸ್ಕ್ವೇರ್ ವರೆಗೆ ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಿಸಲಾಗಿದೆ. ಸೆಪ್ಟೆಂಬರ್ 11 ರಾತ್ರಿ 11.01 ರಿಂದ 11.21 ನಡುವೆ ಈ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಸ್ಪರ್ಶ ಆಸ್ಪತ್ರೆಯ ತಂಡಕ್ಕೆ BMRCL ಭದ್ರತಾ ಅಧಿಕಾರಿ ಸಾಥ್ ನೀಡಿದ್ದಾರೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ..
ಇದೇ ಮೊದಲಲ್ಲ..
ನಮ್ಮ ಮೆಟ್ರೋ ಮೂಲಕ ಇಂತಹ ಮಾನವೀಯ ಸೇವೆಗಳು ನಡೆಯುತ್ತಿರೋದು ಇದೇ ಮೊದಲಲ್ಲ. ಕಳೆದ ಆಗಸ್ಟ್ 1, 2025ರ ರಾತ್ರಿ 8:38ಕ್ಕೆ, ಯಕೃತ್ತನ್ನು ವೈದ್ಯರೊಬ್ಬರು ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ವೈದೇಹಿ ಆಸ್ಪತ್ರೆಯಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಆಂಬ್ಯುಲೆನ್ಸ್ ಮೂಲಕ ತರಲಾಗಿತ್ತು.
ಆ ಯಕೃತ್ತನ್ನು ಹೊತ್ತ ಮೆಟ್ರೋ ರೈಲು ರಾತ್ರಿ 8:42ಕ್ಕೆ ವೈಟ್ ಫೀಲ್ಡ್ ನಿಲ್ದಾಣದಿಂದ ಹೊರಟು, ರಾತ್ರಿ 9:48ಕ್ಕೆ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ತಲುಪಿತ್ತು. ಅಲ್ಲಿಂದ ನೇರವಾಗಿ ಆಂಬ್ಯುಲೆನ್ಸ್‌ಗೆ ವರ್ಗಾವಣೆ ಮಾಡಿ ಅಂಗಾಂಗ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸಮಯಕ್ಕೆ ಅಂಗವನ್ನು ಸ್ಪರ್ಶ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಗಿತ್ತು.
ಇದನ್ನೂ ಓದಿ:ಸ್ಮರಣಶಕ್ತಿ, ಮೆದುಳಿನ ಆರೋಗ್ಯಕ್ಕಾಗಿ 8 ಅತ್ಯುತ್ತಮ ಭಾರತೀಯ ಆಹಾರಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ