/newsfirstlive-kannada/media/media_files/2025/11/22/police-commissioner-2025-11-22-13-32-26.jpg)
ನ್ಯೂ ಇಯರ್ ಕಾರ್ಯಕ್ರಮಗಳಲ್ಲಿ ಪಟಾಕಿ ನಿಷೇಧ ಮಾಡಿ ಪೊಲೀಸ್​ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಗೋವಾ ಪಬ್ ದುರ್ಘಟನೆ ಹಿನ್ನೆಲೆ, ನಗರದಲ್ಲಿ ಪಟಾಕಿಗೆ ಬ್ರೇಕ್ ಹಾಕಲಾಗಿದೆ.
ಡಿಸೆಂಬರ್ 31 ರಂದು ನಡೆಯುವ ಕಾರ್ಯಕ್ರಮಗಳಿಗೆ ಗೈಡ್​ಲೈನ್ಸ್ ರಿಲೀಸ್ ಮಾಡಲಾಗಿದೆ. ಹೋಟೆಲ್, ಬಾರ್, ಪಬ್, ರೆಸ್ಟೋ ರೆಂಟ್ ಸೇರಿದಂತೆ ಕಾರ್ಯಕ್ರಮ ನಡೆಯುವ ಜಾಗಗಳಿಗೆ ಮಾರ್ಗಸೂಚಿ ಪ್ರಕಟವಾಗಿದೆ. ಸುಮಾರು 19 ಅಂಶಗಳ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.
ಪೊಲೀಸ್ ಇಲಾಖೆಯ ಗೈಡ್​ಲೈನ್ಸ್..!
- ಕಾರ್ಯಕ್ರಮಗಳಿಗೆ ಸಂಬಂಧ ಪಟ್ಟ ಇಲಾಖೆಗಳಿಂದ ಅನುಮತಿ ಕಡ್ಡಾಯ ಹಾಗೂ ನಿಯಮಗಳನ್ನ ಪಾಲಿಸಬೇಕು.
- ಹೊಸ ವರ್ಷಾಚರಣೆ ಸಂಬಂಧ ನಿಗಧಿತ ಸಮಯವನ್ನ ಪಾಲಿಸಬೇಕು
- ಕಡ್ಡಾಯವಾಗಿ ಧ್ವನಿವರ್ದಕ ಪರವಾನಿಗೆ ಪಡೆದುಕೊಂಡ ನಂತರ ನಿಗಧಿತ ಶಬ್ಧ ಮಿತಿ ಇರಬೇಕು.
- ಸ್ಥಳಾವಕಾಶಕ್ಕೆ ತಕ್ಕಂತೆ ಟಿಕೆಟ್/ಪಾಸ್‌ಗಳನ್ನು ವಿತರಿಸಬೇಕು. ಹಾಗೂ ನೆಲಮಹಡಿ, ಪಾರ್ಕಿಂಗ್ ಸ್ಥಳಗಳು, ಟೆರೆಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.
- ಕಾರ್ಯಕ್ರಮದ ಸ್ಥಳಗಳಲ್ಲಿ ಸ್ಕ್ರೀನ್‌ಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಸ್ಕ್ರೀನಿಂಗ್ ಮಾಡಬಾರದು.
- ಕಾರ್ಯಕ್ರಮಕ್ಕೆ ಬರುವವರ ತಪಾಸಣೆ ನಡೆಸಿ ಸಂಶಯಾಸ್ಪದ ವಸ್ತು/ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು
- ಅಗ್ನಿ ನಂದಿಸುವ ವಸ್ತುಗಳನ್ನ ಅಳವಡಿಸಿಕೊಳ್ಳಬೇಕು, ನಿರ್ಗಮನ ದ್ವಾರಗಳು ದೊಡ್ಡದಾಗಿರಬೇಕು.
- ಕಾರ್ಯಕ್ರಮದ ಪ್ರತಿ ಜಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ 30 ದಿನಗಳವರೆಗೆ ಸ್ಟೋರೆಜ್ ಮಾಡಬೇಕು.
- ಮಾದಕ ವಸ್ತುಗಳ ಬಳಕೆ ಕಂಡು ಬಂದರೆ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರೇ ದಾಳಿ ನಡೆಸಿದಾಗ ಸಿಕ್ಕಿಬಿದ್ದರೆ ಕಾರ್ಯಕ್ರಮದ ಕಟ್ಟಡದ ಮಾಲೀಕರು/ಮ್ಯಾನೇಜರ್ ವಿರುದ್ಧ ಕೇಸ್.
- ಸಾರ್ವಜನಿಕರ ವಾಹನಗಳಿಗೆ ತಮ್ಮ ಪಾರ್ಕಿಂಗ್ ಸ್ಥಳದಲ್ಲಿಯೇ ವ್ಯವಸ್ಥೆ ಮಾಡಿಸಬೇಕು.
- ಹೊಸ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿಗಳು, ಡಿಜೆಗಳು, ನಟ ನಟಿಯರನ್ನ ಆಹ್ವಾನಿಸಿದ್ದಲ್ಲಿ ಅವರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು.
- ಪಾರ್ಕಿಂಗ್ ಸ್ಥಳ ಮತ್ತು ಮಹಿಳೆಯರಿರುವ ಸ್ಥಳಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಖಾಸಗಿ ಭದ್ರತಾ ಸಿಬ್ಬಂದಿಗಳನ್ನ ನೇಮಿಸಬೇಕು.
- ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಬೌನ್ಸರ್‌ಗಳನ್ನು ನಿಯೋಜಿಸಿ ಕೊಳ್ಳುವ ಏಜೆನ್ಸಿಗಳು ‘PSARA’ ದಲ್ಲಿ ನೊಂದಣಿ ಮಾಡಬೇಕು.
- ಪಾರ್ಟಿ ವೇಳೆ ಇರುವ ಕೆಲಸ ಗಾರರ ಮಾಹಿತಿಯನ್ನ ಧೃಢೀಕೃತ ಐ.ಡಿ ಕಾರ್ಡ್‌ನೊಂದಿಗೆ ನೀಡಬೇಕು.
- ಲೈಸೆನ್ಸ್ ಇಲ್ಲದ ಔಟ್ ಡೋರ್ ಸ್ಥಳಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶವಿಲ್ಲ.
- ಹೋಟೆಲ್‌ಗಳ ರೂಮ್‌ಗಳಲ್ಲಿ ಗುಂಪು ಸೇರಿ ನಿಯಮ ಬಾಹಿರವಾಗಿ ಖಾಸಗಿ ಪಾರ್ಟಿ ನಡೆಸಲು ಅವಕಾಶ ನೀಡಬಾರದು.
- ಕಾರ್ಯಕ್ರಮದ ಸ್ಥಳದಲ್ಲಿ ಗಲಾಟೆ ನಡೆದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.
- ಕಾರ್ಯಕ್ರಮದ ವೇಳೆ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ..
- ಯಾವುದೇ ಅಹಿತಕರವಾದ ಘಟನೆಗಳು ನಡೆಯದಂತೆ ಕ್ರಮಗಳನ್ನು ಕೈಗೊಳ್ಳಬೇಕು..
ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ಬೆಂಗಳೂರು ಪೊಲೀಸರು, ಮಾರ್ಗಸೂಚಿ ಉಲ್ಲಂಘನೆಯಾದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ರಜತ್ ಪಾಟಿದಾರ್​ ಆಪ್ತ ಗೆಳೆಯ.. RCB ಖರೀದಿಸಿದ ​ಮಂಗೇಶ್ ಯಾದವ್ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us