/newsfirstlive-kannada/media/media_files/2025/10/04/darshan-1-2025-10-04-12-11-43.jpg)
ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದ ತನಿಖೆಯನ್ನು ಸೈಬರ್ ಕ್ರೈಂ ಪೊಲೀಸರು ತೀವ್ರಗೊಳಿಸಿದ್ದಾರೆ. ಮತ್ತೊಂದು ಕಡೆ ವಿಜಯಲಕ್ಚ್ಮಿ ದೂರು ನೀಡ್ತಿದ್ದಂತೆ ಬಹುತೇಕ ಅಕೌಂಟ್‌ಗಳು ಬ್ಲಾಕ್ ಮಾಡಿ ಡಿಲೀಟ್ ಆಗಿವೆ.
ಎಫ್ ಐಆರ್ ಮಾಹಿತಿ ತಿಳಿದು ಭಯಗೊಂಡು ಅಕೌಂಟ್ ಅವನ್ನು ಕಿಡಿಗೇಡಿಗಳು ಡಿಲೀಟ್ ಮಾಡಿದ್ದಾರೆ. ವಿಜಯಲಕ್ಷ್ಮೀ ಅವರು ದೂರಿನಲ್ಲಿ 18 ಅಕೌಂಟ್‌ಗಳ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಿದ್ದರು. ದೂರಿನಲ್ಲಿ ಉಲ್ಲೇಖ ಮಾಡಿದ್ದ ಅಕೌಂಟ್ ಪರಿಶೀಲನೆ ವೇಳೆ ಬಹುತೇಕ ಅಕೌಂಟ್‌ಗಳು ಡಿಲೀಟ್ ಆಗಿರೋ ಬಗ್ಗೆ ಮಾಹಿತಿ ಸಿಕ್ಕಿದೆ.
ದೂರು ದಾಖಲಾಗಿ ಅರ್ಧ ಗಂಟೆ ಒಳಗಾಗಿ ಅಕೌಂಟ್‌ಗಳು ಡಿಲೀಟ್ ಆಗಿರೋ ಬಗ್ಗೆ ಮಾಹಿತಿ ಇದೆ. ಈ ನಡುವೆಯೂ ಇನ್‌ಸ್ಟಾಗ್ರಾಮ್, ಫೇಸ್ ಬುಕ್, ಎಕ್ಸ್ ಗೆ ಇಮೇಲ್ ಮೂಲಕ ಪೊಲೀಸರು ಪತ್ರ ಬರೆದಿದ್ದಾರೆ. 18 ಖಾತೆಗಳ ಐಪಿ ಅಡ್ರೆಸ್, ಖಾತೆದಾರರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಪ್ರಕಾರ ಸಂಬಳ- ಎಷ್ಟು ಹೈಕ್ ಆಗಬಹುದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us