/newsfirstlive-kannada/media/media_files/2025/11/18/bengaluru-pg-1-2025-11-18-13-00-58.jpg)
ಬೆಂಗಳೂರು: ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಪೂರ್ವ ನಗರ ಪಾಲಿಕೆ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ತನ್ನ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೇ ಎಸ್.ಒ.ಪಿ ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಿಜಿಗಳ ವಿರುದ್ಧ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸುವಂತೆ ಆರೋಗ್ಯ ವಿಭಾಗ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ.. 13 ನಿಮಿಷಗಳ ರೋಚಕ ಕಾರ್ಯಾಚರಣೆ
/filters:format(webp)/newsfirstlive-kannada/media/media_files/2025/11/18/bengaluru-pg-2025-11-18-13-04-14.jpg)
14 ಪಿಜಿಗಳಿಗೆ ಬೀಗ
ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಣಿಜ್ಯ/ವಸತಿಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಜಿ.ಬಿ.ಎ. ಕಾಯ್ದೆ, 2024ರ ಅನ್ವಯ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ 14 ಪೇಯಿಂಗ್ ಗೆಸ್ಟ್ ಗಳನ್ನು ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರ ಮಾರ್ಗದರ್ಶನದಲ್ಲಿ, ಆರೋಗ್ಯಾಧಿಕಾರಿ ಡಾ. ಸವಿತಾ ರವರ ನೇತೃತ್ವದಲ್ಲಿ ಆರೋಗ್ಯ ವೈದ್ಯಾಧಿಕಾರಿಗಳ ತಂಡವು ಪರಿಶೀಲನೆ ನಡೆಸಿ ವಸತಿಗೃಹಗಳ (ಪಿಜಿ) ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬೀಗ ಹಾಕಲಾದ ವಸತಿಗೃಹಗಳ ವಿವರಗಳು
ಮಹದೇವಪುರ ವಿಧಾನಸಭಾ ಕ್ಷೇತ್ರ
- ಎಸ್.ವಿ.ಕೆ. ಪಿ.ಜಿ ಪಟ್ಟಂದೂರು ಅಗ್ರಹಾರ, ಐಟಿಪಿಲ್ ಬ್ಯಾಕ್ ಗೇಟ್
- ವಂಶಿ ಕೃಷ್ಣ ಪಿಜಿ, ಪಟ್ಟಂದೂರು ಅಗ್ರಹಾರ ಐಟಿಪಿಎಲ್ ಹಿಂದಿನ ಗೇಟ್
- ಡ್ವೆಲ್ ಕೋ-ಲಿವಿಂಗ್ ಪಿಜಿ ಲಕ್ಷ್ಮಿನಾರಾಯಣಪುರ, ನಾಗಪ್ಪ ರೆಡ್ಡಿ ಲೇಔಟ್
- ರಾಯಲ್ ಹೋಮ್ ಸ್ಟೇಸ್ ಪಿಜಿ ,ಮೈತ್ರಿ ಲೇಔಟ್, 3ನೇ ಅಡ್ಡರಸ್ತೆ, ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್
- ಡ್ರೀಮ್ ಲ್ಯಾಂಡ್ ಪಿಜಿ ವೆಂಟಕಾಮೃತ ನಿಲಯಂ, ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್
- ಝೋಲೋ ಅಸ್ಮಿ ಜೆಂಟ್ಸ್ ಪಿಜಿ,1ನೇ ಅಡ್ಡರಸ್ತೆ, ಯಶೋಮತಿ ಆಸ್ಪತ್ರೆಯ ಹಿಂದೆ, ರಾಘವೇಂದ್ರ
- ಲೇಔಟ್, ಮಾರತ್ ಹಳ್ಳಿ
- ಕೆ.ಆರ್.ಜೆಂಟ್ಸ್ ಪಿ.ಜಿ., 5ನೇ ಕ್ರಾಸ್, ರಾಮಾಂಜನೇಯಲೇಔಟ್ ಮಾರತ್ ಹಳ್ಳಿ
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ.. 13 ನಿಮಿಷಗಳ ರೋಚಕ ಕಾರ್ಯಾಚರಣೆ
ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ
- ಶ್ರೀ ಎಸ್.ಜಿ. ಜೆಂಟ್ಸ್ ಅಂಡ್ ಲೇಡೀಸ್ ಪಿ.ಜಿ, ನಂ.39 & 40, 8ನೇ ಕ್ರಾಸ್, ಮುನಿಯಪ್ಪ ಲೇಔಟ್ ಹೊರಮಾವು
- ಸೆಂಟ್ ಮರಿಯಾ, ಲೇಡೀಸ್ ಪಿಜಿ, ನಂ.109, ನಾಗಪ್ಪ ರೆಡ್ಡಿ ಲೇಔಟ್, ದೂರವಾಣಿನಗರ,
- ಎಸ್.ಎಲ್.ವಿ ಕಂಫರ್ಟ್ಸ್ ಜೆಂಟ್ಸ್ ಪಿ.ಜಿ., ಶರಾವತಿ ಲೇಔಟ್, ಕೆ.ಆರ್.ಪುರಂ
- ಶ್ರೀ. ಗಣೇಶ ಜೆಂಟ್ಸ್ ಪಿ.ಜಿ., ಕೃಷ್ಣ ಥಿಯೇಟರ್ ರಸ್ತೆ, ಬಸವನಪುರ
- ಎಸ್.ಎಸ್.ವಿ ಟವರ್ ಪಿಜಿ ಲಕ್ಷ್ಮೀ ಸಾಗರ ಲೇಔಟ್ ಮಹದೇವಪುರ
- ಬ್ಲಿಸ್ ಕೋ-ಲಿವಿಂಗ್ ಪಿ.ಜಿ. 20, 2ನೇ ಕ್ರಾಸ್ ಶ್ರೀ. ಕೃಷ್ಣ ಗಾರ್ಡನ್ ಲೇಔಟ್ ಬಿ ನಾರಾಯಣಪುರ.
- ವಿ.ಡಿ.ಎಸ್ ಲಕ್ಸುರಿ ಪಿಜಿ ಫಾರ್ ಲೇಡೀಸ್ ,ಸತ್ಯ ಬಡಾವಣೆ
ಉದ್ದಿಮೆ ಪರವಾನಗಿ ಅಭಿಯಾನ
ನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ 10.11.2025 ರಿಂದ 15.11.2025 ರವರೆಗೆ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಗರ ಪಾಲಿಕೆ ವ್ಯಾಪ್ತಿಯ 17 ವಾರ್ಡ್ ಕಚೇರಿಗಳಲ್ಲಿ ನಡೆಸಲಾಗಿರುತ್ತದೆ. ಈ ಅವಧಿಯಲ್ಲಿ ನಗರ ಪಾಲಿಕೆಯ 17 ವಾರ್ಡ್ ಗಳ ವ್ಯಾಪ್ತಿಯಲ್ಲಿ 466 ಉದ್ದಿಮೆದಾರರು ‘ಏಕ ಗವಾಕ್ಷಿ’ ಅಡಿಯಲ್ಲಿ ಒಟ್ಟು ₹25,52,800 ಶುಲ್ಕ ಪಾವತಿಸಿ, ಎಲ್ಲ ಅಗತ್ಯ ದಾಖಲೆಗಳನ್ನು ಮಧ್ಯವರ್ತಿಗಳ ಯಾವುದೇ ಹಸ್ತಕ್ಷೇಪವಿಲ್ಲದೇ ಅರ್ಜಿ ಸಲ್ಲಿಸಿದ ದಿನದಂದೇ ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡರು ಎಂದು ಆಯುಕ್ತರು ತಿಳಿಸಿದರು.
ಅರ್ಜಿ ಸಲ್ಲಿಸಿದ ದಿನವೇ ಉದ್ದಿಮೆದಾರರಿಗೆ ಪರವಾನಗಿ
ಅಗತ್ಯ ದಾಖಲೆಗಳಾದ ವಾಣಿಜ್ಯ ಮಳಿಗೆ ಕರಾರು ಪತ್ರ ಹಾಗೂ ವಿದ್ಯುತ್ ಬಿಲ್ ಸಲ್ಲಿಸಿದ ದಿನವೇ ಉದ್ದಿಮೆದಾರರಿಗೆ ಉದ್ದಿಮೆ ಪರವಾನಗಿ ನೀಡಲು ಪೂರ್ವ ನಗರ ಪಾಲಿಕೆಯು ವ್ಯವಸ್ಥೆಯನ್ನು ಕಲ್ಪಿಸಿದ್ದು, 17 ವಾರ್ಡ್​​​ಗಳೊಂದಿಗೆ ವಾಣಿಜ್ಯ ಪ್ರದೇಶಗಳಲ್ಲೂ ವಿಶೇಷ ಶಿಬಿರ ಏರ್ಪಡಿಸುವ ಮೂಲಕ ಪಾರದರ್ಶಕವಾಗಿ, ವೇಗವಾಗಿ ಮತ್ತು ನಾಗರಿಕ–ಸ್ನೇಹಿ ಉದ್ದಿಮೆ ಪರವಾಗಿ ಸೇವೆಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.
ಮಹದೇವಪುರ ಹಾಗೂ ಕೃಷ್ಣರಾಜಪುರ ವಿಭಾಗಗಳ ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಮೇಲ್ವಿಚಾರಕರು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳು ತಂಡಗಳು ಅನಧಿಕೃತ ಪಿಜಿ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ಕಾರ್ಯದಲ್ಲಿ ಪ್ರವೃತ್ತರಾಗಿರುತ್ತಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us