/newsfirstlive-kannada/media/media_files/2025/11/19/vijayalakshmi-2025-11-19-09-16-21.jpg)
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಡಿಯೋ ವೈರಲ್ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ವಿಚಾರಣೆ ವೇಳೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಸರು ಥಳಕು ಹಾಕಿಕೊಂಡಿದೆ ಎನ್ನಲಾಗಿದೆ.
ಅಧಿಕಾರಿಗಳು ಮೊನ್ನೆಯಷ್ಟೇ 2ನೇ ನೋಟಿಸ್ ಕೊಟ್ಟು ನಟ ಧನ್ವೀರ್ ಅವರ ವಿಚಾರಣೆ ಮಾಡಿದ್ದರು. ಈ ವೇಳೆ ವಿಜಯಲಕ್ಷ್ಮಿ ಹೆಸರನ್ನು ಧನ್ವೀರ್ ಹೇಳಿದ್ದಾರೆ ಎನ್ನಲಾಗುತ್ತಿದೆ.
ಧನ್ವೀರ್​ಗೆ ವೈರಲ್ ಕಾಟ!
ಮಾಹಿತಿಗಳ ಪ್ರಕಾರ, ಧನ್ವೀರ್ ವಿಚಾರಣೆ ವೇಳೆ ವಿಜಯಲಕ್ಷ್ಮಿಯ ಹೆಸರು ಪ್ರಸ್ತಾಪ ಮಾಡಿದ್ದಾರಂತೆ. ವಿಡಿಯೋ ಬಗ್ಗೆ ಸತ್ಯವನ್ನ ಹೇಳಿರುವ ಧನ್ವೀರ್, ನನಗೆ ಲಾಯರ್​ನಿಂದ ವಿಡಿಯೋ ಬಂದಿದೆ. ಅದನ್ನ ನಾನು ವಿಜಯಲಕ್ಷ್ಮಿಗೆ ಕಳಿಸಿದ್ದೆ. ಆದ್ರೆ ವಿಡಿಯೋ ವೈರಲ್ ಮಾಡಿದ್ದು ನಾನಲ್ಲ, ಹೇಗಾಯ್ತೋ ಗೊತ್ತಿಲ್ಲ ಎಂದು ವಿಚಾರಣೆ ವೇಳೆ ಧನ್ವೀರ್ ಹೇಳಿದ್ದಾರೆ ಎನ್ನಲಾಗಿದೆ.
ಹೀಗಾಗಿ ಈಗ ವಿಜಯಲಕ್ಷ್ಮಿಯವ್ರನ್ನ ವಿಚಾರಣೆ ಕರೆಸೋ ಸಾಧ್ಯತೆಯಿದೆ. ವಿಡಿಯೋ ವೈರಲ್ ಬಗ್ಗೆ ಧನ್ವೀರ್ ಹೇಳಿಲ್ಲ ಅಂದ್ರೆ ಅವರನ್ನೂ ಕರೆಸಿ. ವಿಜಯಲಕ್ಷ್ಮಿಯನ್ನ ಕರೆಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಧೋನಿ ಅಭಿಮಾನಿಗಳಿಗೆ ಗುಡ್​ನ್ಯೂಸ್​.. IPL ಹೊತ್ತಲ್ಲಿ ಓದಲೇಬೇಕಾದ ಸುದ್ದಿ..!
ಮತ್ತೊಂದು ಕಡೆ ವಿಡಿಯೋ ಅಪ್​ಲೋಡ್ ಆಗಿದ್ದ ಖಾತೆಗಳ ಪತ್ತೆಗೂ ಮುಂದಾಗಿದ್ದಾರೆ. ಈಗಾಗಲೇ ಮೆಟಾಗೆ ತನಿಖಾಧಿಕಾರಿಗಳು ಪತ್ರವನ್ನೂ ಬರೆದಿದ್ದಾರೆ. ರಾಜಾತಿಥ್ಯದ ವಿಡಿಯೋವನ್ನ ಮಾಡಿದ್ದ ಕೈದಿಗಳ ವಿಚಾರಣೆ ಆಗಿದೆ. 2023ರಲ್ಲಿ ಜೈಲಿನ ಮೇಲೆ ಪೊಲೀಸರು ದಾಳಿ ಮಾಡಿ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದರು. ಆಗ ಸೀಜ್ ಆಗಿದ್ರೂ, ಈಗ ವಿಡಿಯೋ ವೈರಲ್ ಹೇಗಾಯ್ತೋ ಗೊತ್ತಿಲ್ಲ. ವಿಡಿಯೋ ಮಾಡಿದ್ದ ಕೈದಿ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us