/newsfirstlive-kannada/media/media_files/2025/08/20/bhima-movie-2025-08-20-18-10-47.jpg)
ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ್ದ ಭೀಮ ಸಿನಿಮಾದಲ್ಲಿ ಅಭಿನಯಿಸಿದ್ದ ವಿದೇಶಿ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಜೋಯಲ್ (28) ಬಂಧಿತ ಆರೋಪಿ.
ಇದನ್ನೂ ಓದಿ:ದರ್ಶನ್ ಸೆಲೆಬ್ರಿಟಿಗಳಿಗೆ ಗುಡ್ನ್ಯೂಸ್.. ಡೆವಿಲ್ ಸಿನಿಮಾ ಫಸ್ಟ್ ಸಾಂಗ್ ರಿಲೀಸ್ಗೆ ಮುಹೂರ್ತ ಫಿಕ್ಸ್
ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಜಾಲದ ಮೇಲೆ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದರು. ಈ ವೇಳೆ ದುನಿಯಾ ವಿಜಯ್ ಭೀಮ ಸಿನಿಮಾದಲ್ಲಿ ಪೆಡ್ಲರ್ ಪಾತ್ರಧಾರಿಯಾಗಿದ್ದ ಜೋಯಲ್, ಸಿನಿಮಾದಂತೆ ನಿಜಜೀವನದಲ್ಲೂ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದಿದ್ದು, ತಿಳಿದು ಬಂದಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಜೋಯಲ್ ಕಬೋಂಗ್ ಹಾಗೂ ಜೋಯ್ ಸಂಡೇಯನ್ನ ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ ಪೊಲೀಸರು 5.30 ಕೋಟಿ ರೂ ಮೌಲ್ಯದ 255 ಕೆಜಿ ಎಂಡಿಎಂಎ ಕ್ರಿಸ್ಟಲ್ ಜಪ್ತಿ ಮಾಡಿದ್ದಾರೆ.
ಇನ್ನೂ, ಬಂಧಿತ ಆರೋಪಿ ಭೀಮಾ ಸಿನಿಮಾದಲ್ಲಿ ಡ್ರಗ್ ಪೆಡ್ಲರ್ ಪಾತ್ರದಲ್ಲಿ ನಟಿಸಿದ್ದ. ಡ್ರಗ್ ವಿರುದ್ಧ ಹೋರಾಡುವ ಕಥೆಯಲ್ಲಿ ಈತ ಯುವಕರಿಗೆ ಡ್ರಗ್ ಮಾರುವ ಅಂದರೆ ಡ್ರಗ್ ಪೆಡ್ಲರ್ ಪಾತ್ರದಲ್ಲಿ ಜೋಯಲ್ ಕಾಣಿಸಿಕೊಂಡಿದ್ದ. ಆದ್ರೆ ರಿಯಲ್ ಲೈಫ್ನಲ್ಲೂ ಆರೋಪಿ ಜೋಯಲ್ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ. ಹೀಗಾಗಿ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ