/newsfirstlive-kannada/media/media_files/2025/11/21/7-crore-robbery-1-2025-11-21-11-26-45.jpg)
7 ಕೋಟಿ ಹಣ ರಾಬರಿ ಪ್ರಕರಣ ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಬಹುತೇಕ ಸಕ್ಸಸ್ ಆಗಿದ್ದಾರೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, 7 ಕೋಟಿ ಹಣದಲ್ಲಿ 5.30 ಕೋಟಿ ರೂಪಾಯಿ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಚೆನ್ನೈನಲ್ಲಿ ಓರ್ವ ಆರೋಪಿ ಹಣದ ಸಮೇತ ಪತ್ತೆ
ಚೆನ್ನೈನಲ್ಲಿ ಓರ್ವ ಆರೋಪಿ ಹಣದ ಸಮೇತ ಪತ್ತೆಯಾಗಿದ್ದು, ಆತನನ್ನು ಬಂಧಿಸಿ ಹಣವನ್ನು ಜಪ್ತಿ ಮಾಡಲಾಗಿದೆ. ಚಿತ್ತೂರಿನಿಂದ ಚೆನ್ನೈಗೆ ಬೇರೊಂದು ಕಾರಿನಲ್ಲಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ. ಈ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಲಾಕ್ ಮಾಡಿದ್ದಾರೆ.
ಹೇಗೆ ಸಿಕ್ಕಿಬಿದ್ದ..?
ಈಗಾಗಲೇ ಚಿತ್ತೂರಿನಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸರು ಹುಡುಕಾಟ ನಡೆಸಿದ್ದರು. ಗುಡಿಪಾಲದಲ್ಲಿ ಮತ್ತೊಂದು ಕಾರಿಗೆ ಹಣವನ್ನ ತುಂಬಿಕೊಂಡು ಪರಾರಿ ಆಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ಅರೆಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us