/newsfirstlive-kannada/media/media_files/2025/11/21/manikant-rathod-2025-11-21-10-41-33.jpg)
ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ (Manikanta Rathod) ಅರೆಸ್ಟ್ ಆಗಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸರು ರಾಠೋಡ್​ ಅವರನ್ನು ತಡರಾತ್ರಿ ಬಂಧಿಸಿದ್ದಾರೆ.
ಯಾಕೆ ಬಂಧನ..?
ಕೊಲೆಯತ್ನ ಆರೋಪದಡಿ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಬಳಿ ಬಿಜೆಪಿ ಮುಖಂಡನ ಬಂಧನವಾಗಿದೆ. ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಇರುವ ನಾಟಿ ಔಷಧಿ ವೈದ್ಯ ರಶೀದ್ ಮುತ್ಯಾ ಬಂಧನಕ್ಕೆ ಮಣಿಕಂಠ ರಾಠೋಡ್ ಆಗ್ರಹಿಸಿದ್ದರು.
ಇದನ್ನೂ ಓದಿ: 7 ಕೋಟಿ ದರೋಡೆ ಕೇಸ್​ಗೆ ಟ್ವಿಸ್ಟ್​.. ಗೋವಿಂದಪುರ ಠಾಣೆ ಕಾನ್ಸ್‌ಟೇಬಲ್ ವಶಕ್ಕೆ..!
ಅಂತೆಯೇ ಮಣಿಕಂಠ ರಾಠೋಡ್, ಬೆಂಬಲಿಗರೊಂದಿಗೆ ಗ್ರಾಮಕ್ಕೆ ತೆರಳಿ ದೊಡ್ಡ ಹೈಡ್ರಾಮಾ ಕ್ರಿಯೇಟ್ ಮಾಡಿದ್ದರು. ಈ ವೇಳೆ ರಶೀದ್ ಮತ್ಯಾ ಕಾರು ಚಾಲಕನ ತಲೆಗೆ ಕಲ್ಲೇಟು ಬಿದ್ದಿತ್ತು. ರಶೀದ್ ಮುತ್ಯಾ ಚಾಲಕನ ದೂರಿನ ಮೇರೆಗೆ ಬಂಧನವಾಗಿದೆ. ಮಣಿಕಂಠ್ ರಾಠೋಡ್ ವಿರುದ್ಧ ಕೊಲೆಯತ್ನ ಆರೋಪದಡಿ ದೂರು ದಾಖಲಾಗಿದೆ. ನೆಲೋಗಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us