/newsfirstlive-kannada/media/media_files/2025/11/21/7-crore-darode-1-2025-11-21-10-24-58.jpg)
ಬೆಂಗಳೂರು: 7 ಕೋಟಿ ರೂಪಾಯಿ ರಾಬರಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೇಸ್​ ಸಂಬಂಧ ಬೆಂಗಳೂರಿನ ಗೋವಿಂದಪುರ ಠಾಣೆ ಕಾನ್ಸ್‌ಟೇಬಲ್ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆಯಲಾಗಿರುವ ಕಾನ್ಸ್‌ಟೇಬಲ್, ಹುಡುಗರನ್ನ ರಾಬರಿಗೆ ರೆಡಿ ಮಾಡಿದ್ದರು. ರಾಬರಿ ಹೇಗೆ ಮಾಡಬೇಕು? ಹೇಗೆ ಎಸ್ಕೇಪ್ ಆಗಬೇಕು? ಪೊಲೀಸರು ಹೇಗೆ ತನಿಖೆ ಮಾಡುತ್ತಾರೆ ಎಂದೆಲ್ಲ ಟ್ರೈನಿಂಗ್ ನೀಡಿದ್ದರು ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಪುತ್ರನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಚಲುವರಾಯಸ್ವಾಮಿ ಮಾಸ್ಟರ್ ಪ್ಲಾನ್.. ಏನದು..?
/filters:format(webp)/newsfirstlive-kannada/media/media_files/2025/11/21/7-crore-darode-2025-11-21-10-23-44.jpg)
ಮತ್ತೊಂದು ಕಡೆ ಮೂವರು ಡಿಸಿಪಿಗಳು ಹಾಗೂ 200 ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ದೊಡ್ಡ ಟೀಮ್ ಕಾರ್ಯಾಚರಣೆ ನಡೆಸ್ತಿದೆ. ಐವರು ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಐದು ವಿಶೇಷ ತಂಡಗಳು ಆರೋಪಿಗಳನ್ನ ಹಿಡಿಯಲು ಆಂಧ್ರ ಮತ್ತು ತಮಿಳುನಾಡಿನಲ್ಲಿ ಶೋಧ ನಡೆಸ್ತಿವೆ. ಈವರೆಗೆ ಸುಮಾರು 1500 ಕ್ಕಿಂತ ಹೆಚ್ಚು ಸಿಸಿಟಿವಿ ಹಾಗೂ 2 ಸಾವಿರಕ್ಕೂ ಅಧಿಕ ಫೋನ್ ಕರೆಗಳನ್ನ, ಟವರ್​ ಡಂಪ್​ಗಳನ್ನ ಪರಿಶೀಲಿಸಿದ್ದಾರೆ.
ಮಾಸ್ಟರ್​ ಪ್ಲಾನ್​ ರಿವೀಲ್
ಗ್ಯಾಂಗ್​ನ ಮಾಸ್ಟರ್​ ಪ್ಲಾನ್​ ರಿವೀಲ್​ ಆಗಿದೆ. ಮೊದಲು ಸಿಸಿಟಿವಿ ಇಲ್ಲದ ಜಾಗದಲ್ಲಿ ರಾಬರ್ಸ್​ ದರೋಡೆ ಮಾಡಿದ್ದಾರೆ. ಬಳಿಕ ಇನೋವಾ ಕಾರಿನಲ್ಲಿ ಹಣದ ಸಮೇತ ಎಸ್ಕೇಪ್ ಆಗಿದ್ದ ಗ್ಯಾಂಗ್, ಸಿಸಿಟಿವಿ ಇಲ್ಲದ ಜಾಗದಲ್ಲಿ ಹಣ ಡಿಸ್ಟ್ರಿಬ್ಯೂಟ್ ಮಾಡಿದೆ. ಬಳಿಕ ಹಣವನ್ನ ಬೇರೆ ವಾಹನಕ್ಕೆ ಶಿಫ್ಟ್ ಮಾಡಿ ರಾಬರ್ಸ್ ಗ್ಯಾಂಗ್ ರೌಂಡ್ಸ್ ಹೊಡೆದಿದೆ.
ದೊಮ್ಮಲೂರು, ಭಟ್ಟರಹಳ್ಳಿ, ಹೂಸೂರು ರಸ್ತೆ, ಅತ್ತಿಬೆಲೆ ಸೇರಿ ಹಲವು ಕಡೆ ಸುತ್ತಾಡಿ ನಂತರ ಚಿತ್ತೂರು ತಲುಪಿದೆ. ಈ ವೇಳೆ ಇನ್ನೋವಾ ಕಾರಿನ ಹಿಂದೆ ಬಿದ್ದಿದ್ದ ಪೊಲೀಸರಿಗೆ ಸಿಕ್ಕಿದ್ದು ಕಾರು ಮಾತ್ರ. ಇಬ್ಬರು ಆರೋಪಿಗಳು ಕಾರಿನ ಸಮೇತ ಪತ್ತೆಯದ್ರೂ ಹಣ ಮಾತ್ರ ಪತ್ತೆಯಾಗಿಲ್ಲ. ಪೊಲೀಸರಿಗೆ ಈಗ ಹಣ ರಿಕವರಿ ಕೆಲಸ ದೊಡ್ಡ ಚಾಲೆಂಜ್​ ಆಗಿದೆ.
ಇದನ್ನೂ ಓದಿ: ಗಿಚ್ಚಿ-ಗಿಲಿಗಿಲಿ ಶಿವು-ಮಾನಸ ಮಧ್ಯೆ ಪ್ರೀತಿ, ಪ್ರೇಮ.. ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us