Advertisment

ಗುಂಡಿ ಗಂಡಾಂತರ.. ಕೆಸರುಮಯ ರಸ್ತೆಯಲ್ಲಿ ಸ್ಥಳೀಯರಿಂದ ಮೂನ್ ವಾಕ್.. ಆಕ್ರೋಶ!

ಗುಂಡಿ ಗಂಡಾಂತರದಿಂದ ಸಿಲಿಕಾನ್ ಸಿಟಿ ಜನರು ಬೇಸತ್ತು ಹೋಗಿದ್ದಾರೆ. ಮಳೆ ಬಂದ್ರೆ ಸಾಕು ಬೃಹತ್​ ಗುಂಡಿಗಳು ಬಾಯ್ತೆರೆದು ನಿಲ್ಲುತ್ತವೆ. ಹೀಗಾಗಿ ಬೇಸತ್ತ ಸ್ಥಳೀಯರು ಕೆಸರುಮಯ ರಸ್ತೆಯಲ್ಲಿ ಮೂನ್ ವಾಕ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

author-image
Ganesh Kerekuli
POTHOLE PROTEST 1
Advertisment

ಬೆಂಗಳೂರು: ಗುಂಡಿಮಯ, ಕೆಸರುಮಯ ರಸ್ತೆಯಿಂದ ಸಿಲಿಕಾನ್​ ಸಿಟಿ ಜನ ಬೇಸತ್ತು ಹೋಗಿದ್ದಾರೆ. ಬೆಳೆಗರೆ, ವರ್ತೂರು, ಪಣತ್ತೂರು, ಮಾರತಹಳ್ಳಿ ಸುತ್ತಮುತ್ತ ಮಳೆ ಬಂದರೆ ಸಾಕು ಅವಾಂತರಗಳೇ ಸೃಷ್ಟಿ ಆಗುತ್ತಿವೆ. ಹೀಗಾಗಿ ಮಾರತಹಳ್ಳಿ ಸಮೀಪದ ಮುನೆಕೊಲ್ಲಾಲ ಸ್ಕೂಲ್ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ಮಾಡಲಾಯಿತು.

Advertisment

ಒಂದ್ಕಡೆ ಮಳೆಗೆ ಬೃಹತ್​ ಗುಂಡಿಗಳು ಬಾಯ್ತೆರೆದು ನಿಂತರೆ, ಮತ್ತೊಂದ್ಕಡೆ ಕೆಸರುಮಯ ರಸ್ತೆಯಲ್ಲಿ ಓಡಾಡೋದೇ ಕಷ್ಟವಾಗಿ ಬಿಟ್ಟಿದೆ. ಹೀಗಾಗಿ ಗುಂಡಿಮಯ, ಕೆಸರುಮಯ ರಸ್ತೆಯಲ್ಲಿ ಪೋಷಕರು ಮಕ್ಕಳನ್ನ ಮೂನ್​ವಾಕ್​ ಮಾಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗುಂಡಿಮಯ ರಸ್ತೆಯಲ್ಲಿ ಹೋದ್ರೆ ಹೆಣ್ಮಕ್ಕಳಿಗೆ ಫ್ರೀ ಡೆಲಿವರಿಯಾಗುತ್ತೆ. ನಮ್ಮ ಮಕ್ಕಳು ಸ್ಕೂಲ್​ಗೆ ಹೋದ್ರೆ ಸೇಫ್ ಆಗಿ ವಾಪಸ್ ಮನೆಗೆ ಬರ್ತಾರೆ ಅನ್ನೋ ನಂಬಿಕೆನೇ ಇಲ್ಲ.

ಈ ಜಾಗದಲ್ಲಿ ಮೂನ್ ವೀವ್ ಇದೆ. ಈ ಕೆಸರುಮಯ ರಸ್ತೆಯನ್ನ ಟೂರಿಸ್ಟ್ ಪ್ಲೇಸ್ ಮಾಡಲಿ ಅಂತ ಸರ್ಕಾರದ ವಿರುದ್ಧ ಸ್ಥಳೀಯರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಸ್ತೆ ಸರಿ ಮಾಡೋ ತನಕ ತೆರಿಗೆ ಕಟ್ಟಲ್ಲ ಅಂತ ಸ್ಥಳೀಯರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

POTHOLE PROTEST 2

ನಮ್ಮ ಸ್ಕೂಲ್ ಬಸ್ ಸ್ಟಕ್ ಆಗಿತ್ತು :

ಇನ್ನು ಕೆಸರುಮಯ ರಸ್ತೆಯಿಂದ ಸ್ಥಳೀಯರು ಮಾತ್ರವಲ್ಲದೇ ಮಕ್ಕಳು ಕೂಡ ರೋಸಿ ಹೋಗಿದ್ದಾರೆ. ಇತ್ತ ಗುಂಡಿಮಯ ರಸ್ತೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಪುಟಾಣಿ ಮಕ್ಕಳು ಮಾತನಾಡಿದ್ದಾರೆ. ನಮ್ಮ ಸ್ಕೂಲ್​ ಬಸ್​​ ಕೂಡ ಕೆಸರುಮಯ ರಸ್ತೆಯಲ್ಲಿ ಸ್ಟಕ್​ ಆಗಿತ್ತು. ಒಮ್ಮೆ ಸ್ಕೂಲ್​ ಬಸ್​​ನ ವಿಂಡೋ ಡ್ಯಾಮೇಜ್ ಆಗಿ ಗಾಬರಿ ಬಿದ್ವಿ. ಮನೆಯಿಂದ 5 ಕಿಲೋ ಮೀಟರ್​ ದೂರದಲ್ಲಿ ಶಾಲೆಯಿದೆ. ಆದ್ರೆ ಈ ಕೆಸರುಮಯ ರಸ್ತೆಯಲ್ಲಿ ಸ್ಕೂಲ್​ಗೆ ಹೋಗಲು 1 ಗಂಟೆಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಇದ್ರಿಂದಾಗಿ ಸರಿಯಾದ ಸಮಯಕ್ಕೆ ಸ್ಕೂಲ್​ಗೆ ಹೋಗಲು ಆಗ್ತಿಲ್ಲ ಅಂತ ಪುಟಾಣಿ ಮಕ್ಕಳು ಅಳಲು ತೋಡಿಕೊಂಡಿದ್ದಾರೆ.

Advertisment

ಕೃತಿಕಾರೆಡ್ಡಿ ಪ್ರಕರಣ; ಆರೋಪಿ ಮಹೇಂದ್ರಗೆ ಜೀವಾವಧಿ ಶಿಕ್ಷೆ ನೀಡುವಂತೆ ವಕೀಲರ ಸಂಘ ಆಗ್ರಹ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru News potholes bengaluru
Advertisment
Advertisment
Advertisment