/newsfirstlive-kannada/media/media_files/2025/10/18/kruthika_reddy-1-2025-10-18-09-28-31.jpg)
ಬೆಂಗಳೂರು: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ವಕೀಲರ ಸಂಘ ತೀವ್ರ ಖಂಡನೆ ವ್ಯಕ್ತ ಪಡಿಸಿದೆ. ಮೃತ ಕೃತಿಕಾ ರೆಡ್ಡಿ ವಕೀಲೆ ಸೌಜನ್ಯರವರ ಪುತ್ರಿಯಾಗಿದ್ದಾರೆ. ವೈದ್ಯೋ ನಾರಾಯಣೋ ಹರಿ ಅಂತಾರೇ ಅಂತಹ ವೈದ್ಯನೇ ಪ್ರಾಣ ತೆಗೆದಿದ್ದಾನೆ. ಹೀಗಾಗಿ ಆರೋಪಿ ಮಹೇಂದ್ರಗೆ ಜೀವಾವಧಿ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ವಕೀಲರ ಸಂಘದ ಆಗ್ರಹವೇನು?
ಕೃತಿಕಾ ರೆಡ್ಡಿ ಮರಣೋತ್ತರ ಪರೀಕ್ಷೆ ವೇಳೆ ಗಂಡನೇ ಅನಸ್ತೇಶಿಯಾ ಇಂಜೆಕ್ಟ್ ಮಾಡಿರೋದು ಗೊತ್ತಾಗಿದೆ. ಡಾಕ್ಟರ್ ಮಹೇಂದ್ರ ರೆಡ್ಡಿ ಮನಸ್ಥಿತಿ ಆಘಾತವನ್ನ ತರುವಂತದ್ದು. ಈ ಕೇಸ್​ ಅನ್ನ ಸರ್ಕಾರ ಸೂಕ್ತ ರೀತಿಯಲ್ಲಿ ತನಿಖೆ ಮಾಡಬೇಕು. ಸರ್ಕಾರ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಬೇಕು. ಮೆಡಿಕಲ್ ಇಂಜೆಕ್ಟ್ ಮಾಡಿ ಸಾಯಿಸುವ ಇಂತಹವರನ್ನ ಸುಮ್ಮನೆ ಬಿಡಬಾರದು. ಮಹೇಂದ್ರ ರೆಡ್ಡಿ ಮಾಡಿರುವ ಕೃತ್ಯ ಅಕ್ಷಮ್ಯ ಅಪರಾಧವಾಗಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೇಳಿದ್ದಾರೆ.
ಆರೋಪಿ ಮಹೇಂದ್ರ ರೆಡ್ಡಿ ಜೀವ ಉಳಿಸುವ ಔಷಧವನ್ನ ಬಳಸಿ ಪತ್ನಿಯ ಜೀವ ತೆಗೆದಿದ್ದಾನೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಅನ್ನೋದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಪೊಲೀಸರು ಪ್ರಕರಣವನ್ನ ತುಂಬಾ ಗಂಭೀರವಾಗಿ ಪರಿಗಣಿಸಬೇಕು. ಕೃತಿಕಾ ರೆಡ್ಡಿಯವರದ್ದು ಅಮಾನುಷವಾದ ಕೊಲೆ. ವಕೀಲರಾದ ಸೌಜನ್ಯಾರ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಆರೋಪಿ ವೈದ್ಯ ಮಹೇಂದ್ರ ರೆಡ್ಡಿಗೆ ಜೀವಾವಧಿ ಶಿಕ್ಷೆ ಆಗಬೇಕೆಂದು ವಕೀಲರ ಸಂಘ ಆಗ್ರಹಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
BBK 12 : 100 ಕೋಟಿ ಮೌಲ್ಯದ ಡಾಗ್ ! ಸತೀಶ್ ಕಡಬಮ್ ಹೇಳೋದೆಲ್ಲ ನಿಜಾನಾ ? ಸುಳ್ಳಾ? VIDEO