/newsfirstlive-kannada/media/media_files/2025/08/29/puncture-mafia-in-bangalore-2025-08-29-18-36-45.jpg)
ಕೆಲವ್ರಿಗೆ ಶಾರ್ಟ್ ಕಟ್ನಲ್ಲಿ ಹಣ ಎಣಿಸೋ ಆಸೆ.. ಇರ್ಲಿ, ಆದ್ರೆ ಈ ಮಟ್ಟಕ್ಕೆ ಇಳಿದು ಮೋಸ ಮಾಡ್ಬಾರ್ದು.. ಇದೀಗ ಬೆಂಗಳೂರಲ್ಲಿ ಪಂಚರ್ ಮಾಫಿಯಾ ಭಾರೀ ದೊಡ್ಡಮೊಟ್ಟದಲ್ಲಿ ಸದ್ದು ಮಾಡ್ತಿದೆ.
ಗೊರಗುಂಟೆ ಪಾಳ್ಯದ ಮುಖ್ಯ ಸಿಗ್ನಲ್ನಲ್ಲಿರುವ ರಸ್ತೆ ಕಡೆಗೆ ನೀವೇನಾದ್ರು ಹೋಗೋ ಪ್ಲಾನ್ ಇದ್ರೆ ಸ್ವಲ್ಪ ಎಚ್ಚರಿಕೆಯಿಂದ ಹೋಗಬೇಕು. ಸಡನ್ ಆಗಿ ನಿಮ್ ಗಾಡಿ ಪಂಚರ್ ಆಗೋ ಚಾನ್ಸ್ ಇರುತ್ತೆ. ಯಾಕಂದ್ರೆ, ಕಾಣದ ಖತರ್ನಾಕ್ಗಳು ಸಿಕ್ಕ ಸಿಕ್ಕಲ್ಲಿ ಮಳೆಗಳನ್ನ ಹಾಕಿ ಪಂಚರ್ ಮಾಡ್ತಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಸುಳ್ಳು ಹೇಳಿಕೆ ನೀಡಲು ಚಿನ್ನಯ್ಯಗೆ ಮೂರೂವರೆಯಿಂದ ನಾಲ್ಕು ಲಕ್ಷ ರೂ. ಹಣ ನೀಡಿಕೆ, ಬಳಿಕ ಬೆದರಿಕೆ! ಸ್ಪೋಟಕ ಅಂಶ ಬಹಿರಂಗ
ಮತ್ತೊಂದು ವಿಚಾರ ಏನಂದ್ರೆ ಎಲ್ಲಿ ಮಳೆಗಳು ಬಿದ್ದಿರ್ತಾವೋ? ಅಲ್ಲಿಂದ ಕರೆಕ್ಟಾಗಿ ನೂರು ಮೀಟರ್ ಅಂತರದಲ್ಲೇ ಪಂಚರ್ ಶಾಪ್ ಇದೆ. ಸೋ ಅಲ್ಲಿಗೆ ವಿಷ್ಯ ಕ್ಲಿಯರ್.. ಪಂಚರ್ ಆಗೋ ಗಾಡಿಗಳು ಸೀದಾ ಬರೋದೇ ಪಂಚರ್ ಅಂಗಡಿಗೆ. ಅಲ್ಲಿಗೆ ಒಳ್ಳೆ ವ್ಯಾಪಾರ!
ಪಾಪ ಅರ್ಜೆಂಟಾಗಿ ಕೆಲಸಕ್ಕೋ? ಮತ್ತೊಂದಕ್ಕೋ ಹೋಗೋರ ಗಾಡಿಗಳನ್ನ ಹೀಗೆ ಪಂಚರ್ ಮಾಡಿಬಿಟ್ರೆ ಏನ್ ಕಥೆ ಅಲ್ವಾ? ಇದು ಸ್ಥಳೀಯರಿಗೆ ಬೇಸರ ತಂದಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಗಮನ ಹರಿಸಿ ಕ್ರಮಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ: ರಮ್ಯಾ ಬಳಿಕ ವಿಜಯಲಕ್ಷ್ಮೀಗೆ ಕೆಟ್ಟದಾಗಿ ನಿಂದನೆ.. ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ