/newsfirstlive-kannada/media/media_files/2025/11/23/7-crore-robbery-4-2025-11-23-17-56-47.jpg)
ಸಿದ್ದಾಪುರ ರಾಬರಿ ಪ್ರಕರಣ.. ಒನ್ ಟೈಮ್ ದರೋಡೆ ಮಾಡಿದ್ರೆ ಸಾಕು ಲೈಫ್ ಫುಲ್ ಜಾಲಿ ಆಗಿ ಇರಬಹುದು ಅನ್ಕೊಂಡಿದ್ದ ಗ್ಯಾಂಗ್ ಐಡಿಯಾವನ್ನೇ ಪೊಲೀಸರು ತಲೆಕೆಳಗೆ ಮಾಡ್ಬಿಟ್ಟಿದ್ದಾರೆ. ಜೀವನ ಪೂರ್ತಿ ಲೈಫ್‌ನ ಎಂಜಾಯ್ ಮಾಡೋದು ಇರ್ಲಿ. ಕೃಷ್ಣನ ಜನ್ಮ ಸ್ಥಳದಲ್ಲೇ ಮುದ್ದೆ ಮುರೀರಿ ಅಂತಾ ದರೋಡೆ ಗ್ಯಾಂಗ್ ಕೈಗೆ ಪೊಲೀಸರು ಕೋಳ ತೋಡಿಸಿದ್ದಾರೆ.
ಕಷ್ಟಪಟ್ಟು ದುಡಿದ ಹಣನಾ ಆಚೆ-ಇಚೆ ಇಟ್ವಿ ಅಂದ್ರೆನೇ ಟೆನ್ಷನ್ ಆಗ್ತೀವಿ. ಅಂತದ್ರಲ್ಲಿ ಈ ಖರ್ತನಾಕ್ ಖದೀಮರು ದೋಚಿದ್ದ 7.11 ಕೋಟಿ ದುಡ್ಡಲ್ಲಿ 5.45 ಕೋಟಿ ಹಣವನ್ನ ಹೊಸಕೋಟೆ ಬಳಿಯ ಪಾಳು ಮನೆಯಲ್ಲಿ ಇಟ್ಟಿದ್ರು. ಅನುಮಾನದ ಮೇಲೆ ಮನೆ ಬಾಗಿಲನ್ನ ಒಡೆದು ಒಳ ಹೋಗಿದ್ದ ಪೊಲೀಸರು ಕಂತೆ ಕಂತೆ ಹಣ ಕಂಡು ಶಾಕ್ ಆಗಿದ್ರು..
₹7 ಕೋಟಿ ರಾಬರಿಗಾಗಿ ಆಪರೇಷನ್ ‘ಬುಧವಾರ’..!
ಒಳ್ಳೆ ಕೆಲಸ ಮಾಡೋಕೆ ದಿನ ನೋಡ್ಬೇಕು ಅಂತಾ ಹೇಳೋ ರೀತಿ.. ಈ ದರೋಡೆಕೋರರು ಕೆಟ್ಟ ಕೆಲ್ಸ ಮಾಡೋಕು ದಿನನಾ ಆಯ್ಕೆ ಮಾಡಿಕೊಂಡಿದ್ರು.. ಬೇರೆ ದಿನಕ್ಕಿಂತ ಬುಧವಾರವೇ ಬ್ಯಾಂಕ್‌ನಿಂದ ಹೆಚ್ಚು ಹಣ ವರ್ಗಾವಣೆ ಆಗೋದ್ರಿಂದ.. ಪ್ಲಾನ್ ಪ್ರಕಾರವೇ ಬುಧವಾರ ರಾಬರಿ ಮಾಡಿ ಎಸ್ಕೇಪ್ ಆಗಿದ್ರು.
ಇದನ್ನೂ ಓದಿ: ಮತ್ತೊಂದು ದೊಡ್ಡ ದರೋಡೆ.. 80 ವರ್ಷ ವೃದ್ಧೆಯ 1.08 ಕೋಟಿ ಹಣ ‘ಡಿಜಿಟಲ್ ರಾಬರಿ’..!
/filters:format(webp)/newsfirstlive-kannada/media/media_files/2025/11/23/7-crore-robbery-5-2025-11-23-17-59-05.jpg)
ಆಪರೇಷನ್ ‘ಬುಧವಾರ’!
- ಬುಧವಾರ ಹೆಚ್ಚಿನ ಹಣ ರವಾನೆ ಬಗ್ಗೆ ತಿಳಿದಿದ್ದ ರಾಬರ್ಸ್​
- ಈ ಬಗ್ಗೆ ತಿಳಿದುಕೊಂಡಿದ್ದ ಆರೋಪಿ ಕ್ಸೇವಿಯರ್, ಗೋಪಿ
- ಅದರಂತೆ ನ.19ರಂದು ರಾಬರಿಗಾಗಿ ತಂಡ ರೆಡಿ ಮಾಡಿದ್ರು
- ಹಣ ತುಂಬಿಕೊಂಡು ವಾಹನ ಹೊರಡ್ತಿದ್ದಂತೆ ಗೋಪಿ ಮೆಸೇಜ್
- ಮೆಸೇಜ್ ಬರ್ತಿದ್ದಂತೆ ಅಶೋಕ ಪಿಲ್ಲರ್ ಬಳಿ ವಾಹನ ಫಾಲೋ
ಇದನ್ನೂ ಓದಿ: ಮತ್ತೊಂದು ದೊಡ್ಡ ದರೋಡೆ.. 80 ವರ್ಷ ವೃದ್ಧೆಯ 1.08 ಕೋಟಿ ಹಣ ‘ಡಿಜಿಟಲ್ ರಾಬರಿ’..!
/filters:format(webp)/newsfirstlive-kannada/media/media_files/2025/11/23/robbery-2025-11-23-11-14-49.jpg)
ರಾಬರಿ ಕಿಂಗ್ ಪಿನ್ ಅರೆಸ್ಟ್
ಈ ಇಡೀ ರಾಬರಿ ಪ್ರಕರಣದ ಕಿಂಗ್‌ಪಿನ್ ರವಿ.. ಕೋಟಿ ಕೋಟಿ ಲೂಟಿ ಮಾಡ್ದ ಗ್ಯಾಂಗ್‌ನ ಒಬ್ನ ಬಿಟ್ಟು ಉಳಿದೆಲ್ಲರೂ ಲಾಕ್ ಆಗ್ಬಿಟ್ಟಿದ್ದಾರೆ. ಹೈದರಾಬಾದ್‌ನ ಲಾಡ್ಜ್ ಒಂದರಲ್ಲಿ ಅಡಗಿ ಕುಳಿತಿದ್ದ ರಾಬರಿಯ ರೂವಾರಿ ರವಿನಾ ಪೊಲೀಸರು ಬಂಧಿಸಿದ್ದಾರೆ.
ರಾಬರಿ ಪ್ರಕರಣದಲ್ಲಿ ಹಣ ಕದ್ದಿದ್ದ ಸಹೋದರರಾದ ರಾಕೇಶ್ ಮತ್ತು ರವಿ ಚಿತ್ತೂರಿನ ತಮ್ಮ ಮನೆಗೆ ಹಣ ಹೊತ್ತೊಯ್ಯಲು ಪ್ಲಾನ್ ಮಾಡಿದ್ರು. ಬೆಂಗಳೂರು ಪೊಲೀಸರು ಅಲರ್ಟ್ ಆಗ್ತಿದ್ದಂತೆ, ಹೈದ್ರಾಬಾದ್ ಮತ್ತು ಬೇರೆ ಬೇರೆ ಭಾಗಕ್ಕೆ ಕಾಲ್ಕಿತ್ತಿದ್ರು. ರಾಬರಿಯ ಕಿಂಗ್‌ಪಿನ್ ರವಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಿನ್ನೆ ರಾತ್ರಿ ಹೈದರಾಬಾದ್‌ನಲ್ಲಿ ಲಾಡ್ಜ್‌ನಲ್ಲಿ ತಂಗಿದ್ದ. ಬ್ಯಾಗ್‌ನಲ್ಲಿ 10 ಲಕ್ಷ ಹಣ ಹಿಡಿದು ರಾತ್ರಿಯಿಡಿ ನಿದ್ದೆ ಮಾಡದೇ ಕುಳಿತಿದ್ದ. ಆಂಧ್ರ ಪೊಲೀಸರ ಸಹಾಯದಿಂದ ಕಿಂಗ್‌ಪಿನ್ ರವಿನಾ ಪೊಲೀಸರು ಬಂಧಿಸಿಸಿದ್ದಾರೆ. ಈಗಾಗ್ಲೇ ರವಿಯ ಸಹೋದರ ರಾಕೇಶ್ ಸರೆಂಡರ್ ಆಗಿದ್ದಾನೆ. ಇನ್ನು ಅರೆಸ್ಟ್ ಮಾಡಲು ಒಬ್ಬನೇ ಆರೋಪಿ ಉಳಿದಿದ್ದು, ಗೋವಾ ಬಾರ್ಡರ್‌ನಲ್ಲಿ ಅಡಗಿರೋ ಜೋಯನ್‌ಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.
ರಾಬರಿ ಪ್ರಕರಣದಲ್ಲಿ ಮತ್ತೊಂದು ಶಾಕಿಂಗ್ ವಿಷ್ಯ ಬಯಲಾಗಿದೆ.. ದರೋಡೆಕೋರರ ಟಾರ್ಗೆಟ್ ಇದ್ದಿದ್ದು 7 ಕೋಟಿ ಅಲ್ಲ.. 25 ಕೋಟಿಗೂ ಅಧಿಕ ಹಣವನ್ನ ದೋಚುವ ಪ್ಲಾನ್ ಮಾಡಿದ್ರು ಅನ್ನೋದು ತನಿಖೆ ವೇಳೆ ಬಯಲಾಗಿದೆ. ಒಂದ್ವೇಳೆ.. ಸಿಎಂಎಸ್ ವಾಹನದಲ್ಲಿ ನಿರೀಕ್ಷೆಯ ಹಣ ಇದ್ದಿದ್ರೆ ಭಾರತದಲ್ಲೇ ಇದು ಅತಿದೊಡ್ಡ ರಾಬರಿ ಕೇಸ್ ಆಗ್ತಿತ್ತು.
ಇನ್ನಷ್ಟು ಸುದ್ದಿಗಾಗಿಇಲ್ಲಿ ಕ್ಲಿಕ್ ಮಾಡಿ
/filters:format(webp)/newsfirstlive-kannada/media/media_files/2025/11/20/bengaluru-robbery-2025-11-20-11-21-58.jpg)
₹25 ಕೋಟಿ ಟಾರ್ಗೆಟ್!
- ಇಡೀ ಭಾರತದಲ್ಲೇ ದೊಡ್ಡ ಏಜೆನ್ಸಿಯಾಗಿರುವ ಸಿಎಮ್​ಎಸ್​
- ಬಹುತೇಕ ಶೇ.80ರಷ್ಟು ಹಣ ಸಾಗಾಟ ಮಾಡುವ ಏಕೈಕ ಕಂಪನಿ
- ಜೆ.ಪಿ.ನಗರದಿಂದ ಆಗಾಗ ಹಣ ತೆಗೆದುಕೊಂಡು ಹೋಗ್ತಿದ್ದ ವಾಹನ
- ₹50 ಕೋಟಿ ಹಣವನ್ನ ಹಲವು ಬಾರಿ ಸಾಗಾಟ ಮಾಡಿರೋ ಏಜೆನ್ಸಿ
- ಲಿಂಗರಾಜಪುರ ಕಚೇರಿಗೆ ಹಣ ತೆಗೆದುಕೊಂಡು ಹೋಗ್ತಿದ್ದ ಸಿಬ್ಬಂದಿ
- ಲಿಂಗರಾಜಪುರದ ಕಚೇರಿಯಲ್ಲಿ ಪ್ರತಿನಿತ್ಯವೂ ಹಣ ಡಿಸ್ಟ್ರಿಬ್ಯೂಟ್
- ಯಾವ ATMಗೆ ಎಷ್ಟು ಹಣ ಹಾಕಬೇಕು ಅಂತ ಅಲ್ಲಿಂದಲೇ ನಿರ್ಧಾರ
- ರಾಬರಿ ದಿನ ₹25 ಕೋಟಿಗೂ ಅಧಿಕ ಹಣ ಇರಬಹುದು ಎಂಬ ನಿರೀಕ್ಷೆ
ದಿ ಗ್ರೇಟ್ ಸಿದ್ದಾಪುರ ರಾಬರಿ ಪ್ರಕರಣವನ್ನ ಬೆಂಗಳೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.. ಕೇಸ್‌ನ ಕಿಂಗ್‌ಪಿನ್ ಸೇರಿದಂತೆ ಎಲ್ಲ ಆರೋಪಿಗಳು ಪೊಲೀಸರು ಗಾಳಕ್ಕೆ ಬಿದ್ದಿದ್ದಾರೆ. ಕಣ್ಣಮುಚ್ಚಾಲೆ ಆಡ್ತಿರೋ ಮತ್ತೊಬ್ಬ ಆರೋಪಿ ಸದ್ಯರಲ್ಲೇ ಸಿಕ್ಕಿಬಿಳೋದಂತು ಖಚಿತ..
ವಿಶೇಷ ವರದಿ: ಶಿವಕುಮಾರ್, ಕ್ರೈಂಬ್ಯುರೋ.. ನ್ಯೂಸ್‌ಫಸ್ಟ್..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us