ಹೆಂಡತಿಯ ಒಡವೆ ಅಡ ಇಟ್ಟಿದ್ದೆ, ಕಾರು ಖರೀದಿಸಿ ವಾರವೂ ಆಗಿರಲಿಲ್ಲ -ಮಯೂರ್ ಪಾಟೀಲ್ ಅಪಘಾತದಲ್ಲಿ ಸಂತ್ರಸ್ತ ಕಣ್ಣೀರು..!

ಈ ಅಪಘಾತದಲ್ಲಿ ಅತ್ಯಂತ ನೋವಿನ ಸಂಗತಿಯೆಂದರೆ ಸ್ವಿಫ್ಟ್ ಡಿಜೈರ್ ಕಾರಿನ ಮಾಲೀಕ ಶ್ರೀನಿವಾಸ್ ಅವರ ಪರಿಸ್ಥಿತಿ. ಮಯೂರ್ ಪಟೇಲ್ ಮಾಡಿದ ತಪ್ಪಿಗೆ ಶ್ರೀನಿವಾಸ್ ಬೀದಿಗೆ ಬೀಳುವಂತಾಗಿದೆ. ಪೊಲೀಸ್ ಠಾಣೆಯ ಮುಂದೆ ನಿಂತು ಶ್ರೀನಿವಾಸ್ ಆಡಿದ ಮಾತುಗಳು ಪ್ರತಿಯೊಬ್ಬರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿವೆ.

author-image
Ganesh Kerekuli
Mayur Patel (1)
Advertisment

ಬೆಂಗಳೂರು: ನಟ ಮಯೂರ್ ಪಾಟೀಲ್ ಕಾರು ಅಪಘಾತ ಪ್ರಕರಣದಲ್ಲಿ ಹೊಸ ಖರೀದಿಸಿದ್ದ ಶ್ರೀನಿವಾಸ ಅನ್ನೋರು ಕಣ್ಣೀರು ಇಟ್ಟಿದ್ದಾರೆ. ಹೌದು,  ಕಳೆದ ರಾತ್ರಿ ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಸರಣಿ ಅಪಘಾತವೊಂದು ಬಡ ಕುಟುಂಬವೊಂದರ ಆಸರೆಯಾಗಿದ್ದ ಹೊಸ ಕಾರನ್ನು ನುಚ್ಚುನೂರು ಮಾಡಿದೆ. ಹಾಗೆಯೇ ಅಪಘಾತ ಮಾಡಿರುವ ನಟನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಏನು?

ಬುಧವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಹಲಸೂರಿನಲ್ಲಿ ಈ ಘಟನೆ ನಡೆದಿದೆ. ನಟ ಮಯೂರ್ ಪಟೇಲ್ ತನ್ನ ಫಾರ್ಚೂನರ್ ಕಾರನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಆತ ರಸ್ತೆಯಲ್ಲಿದ್ದ ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದಿದ್ದಾರೆ ಎಂಬ ಆರೋಪ ಇದೆ. 

ಇದನ್ನೂ ಓದಿ:ಅಜಿತ್‌ ಪವಾರ್‌ ವಿಮಾನ ದುರಂತದ ಬಗ್ಗೆ ಕಾಡ್ತಿರುವ ಐದು ಪ್ರಶ್ನೆಗಳು..!

Mayur Patel

ಈ ಭೀಕರ ಅಪಘಾತದಲ್ಲಿ ಎರಡು ಸ್ವಿಫ್ಟ್ ಡಿಜೈರ್ ಕಾರುಗಳು ಹಾಗೂ ಒಂದು ಸರ್ಕಾರಿ ಕಾರು ಸೇರಿದಂತೆ ಒಟ್ಟು ನಾಲ್ಕು ವಾಹನಗಳು ಜಖಂಗೊಂಡಿವೆ. ಮಯೂರ್ ಪಟೇಲ್ ತಾನೇ ಸ್ವತಃ ಕಾರು ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.

ಡ್ರಿಂಕ್ ಆಂಡ್ ಡ್ರೈವ್ ದೃಢ, ಇನ್ಸೂರೆನ್ಸ್ ಕೂಡ ಇಲ್ಲ!

ಅಪಘಾತದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಹಲಸೂರು ಸಂಚಾರ ಪೊಲೀಸರು ಮಯೂರ್ ಪಟೇಲ್‌ನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ನಡೆಸಿದ 'ಡ್ರಿಂಕ್ ಆಂಡ್ ಡ್ರೈವ್' (DD) ಟೆಸ್ಟ್‌ನಲ್ಲಿ ಮಯೂರ್ ಮದ್ಯಪಾನ ಮಾಡಿರುವುದು ಪಾಸಿಟಿವ್ ಬಂದಿದೆ. ಆಘಾತಕಾರಿ ವಿಷಯವೆಂದರೆ, ಮಯೂರ್ ಚಲಾಯಿಸುತ್ತಿದ್ದ ಫಾರ್ಚೂನರ್ ಕಾರಿನ ಇನ್ಸೂರೆನ್ಸ್ (ವಿಮೆ) ಕೂಡ ಲ್ಯಾಪ್ಸ್ ಆಗಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಸದ್ಯ ಪೊಲೀಸರು ಮಯೂರ್ ಪಟೇಲ್‌ನ ಕಾರನ್ನು ಸೀಜ್ ಮಾಡಿದ್ದಾರೆ.

ಸ್ಟೇಷನ್ ಮುಂದೆಯೇ ಕಣ್ಣೀರಿಟ್ಟ ಕಾರು ಮಾಲೀಕ ಶ್ರೀನಿವಾಸ್

ಈ ಅಪಘಾತದಲ್ಲಿ ಅತ್ಯಂತ ನೋವಿನ ಸಂಗತಿಯೆಂದರೆ ಸ್ವಿಫ್ಟ್ ಡಿಜೈರ್ ಕಾರಿನ ಮಾಲೀಕ ಶ್ರೀನಿವಾಸ್ ಅವರ ಪರಿಸ್ಥಿತಿ. ಮಯೂರ್ ಪಟೇಲ್ ಮಾಡಿದ ತಪ್ಪಿಗೆ ಶ್ರೀನಿವಾಸ್ ಬೀದಿಗೆ ಬೀಳುವಂತಾಗಿದೆ. ಪೊಲೀಸ್ ಠಾಣೆಯ ಮುಂದೆ ನಿಂತು ಶ್ರೀನಿವಾಸ್ ಆಡಿದ ಮಾತುಗಳು ಪ್ರತಿಯೊಬ್ಬರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿವೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು ಸಂಚಾರಿ ಪೊಲೀಸರ ಮಾಸ್ಟರ್ ಪ್ಲಾನ್: ಪಾಲಿಕೆಗೆ ಸಲ್ಲಿಕೆಯಾಯ್ತು ಬೃಹತ್ ಪಟ್ಟಿ!

ಶ್ರೀನಿವಾಸ್ ಹೇಳಿದ್ದೇನು?

"ಸರ್, ಈ ಹೊಸ ಕಾರು ಖರೀದಿಸಿ ಕೇವಲ ಒಂದು ವಾರವಾಗಿತ್ತು. ನನ್ನ ಹೆಂಡತಿಯ ಮೈ ಮೇಲಿದ್ದ ಒಡವೆಗಳನ್ನು ಅಡವಿಟ್ಟು ನಾನು ಈ ಕಾರ್ ತಂದಿದ್ದೆ. ಕಂಪನಿಯೊಂದಕ್ಕೆ ಬಾಡಿಗೆಗೆ ಬಿಟ್ಟು, ಎಂಪ್ಲಾಯ್ ಪಿಕಪ್ ಮತ್ತು ಡ್ರಾಪ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದೆ. ಇದೇ ತಿಂಗಳು 5ನೇ ತಾರೀಕು ಮೊದಲ ಇಎಂಐ (EMI) ಕಟ್ಟಬೇಕಿದೆ. ಈಗ ಕಾರ್ ಹೀಗೆ ಪುಡಿಯಾದರೆ ನಾನು ಇಎಂಐ ಕಟ್ಟೋದು ಹೇಗೆ? ಜೀವನ ಮಾಡೋದು ಹೇಗೆ?" ಎಂದು ಶ್ರೀನಿವಾಸ್ ಕಣ್ಣೀರು ಹಾಕಿದ್ದಾರೆ.

ಪೊಲೀಸ್ ತನಿಖೆ ಚುರುಕು

ಅಪಘಾತದ ಬಗ್ಗೆ ಜಖಂಗೊಂಡ ಕಾರುಗಳ ಮಾಲೀಕರಿಂದ ಪೊಲೀಸರು ದೂರು ಪಡೆದಿದ್ದಾರೆ. ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶ್ರೀಮಂತಿಕೆಯ ಮದ ಹಾಗೂ ಮದ್ಯದ ಅಮಲಿನಲ್ಲಿ ಮಯೂರ್ ಪಟೇಲ್ ಮಾಡಿದ ಈ ಎಡವಟ್ಟು, ದುಡಿದು ತಿನ್ನುವ ಸಂಸಾರವೊಂದನ್ನು ಬೀದಿಗೆ ತಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್ ನಟನಿಂದ ಡ್ರಿಂಕ್ & ಡ್ರೈವ್ ಅಪಘಾತ.. ಇನ್ಸೂರೆನ್ಸ್ ಕೂಡ ಲ್ಯಾಪ್ಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Car Accident Mayur Patel drunk driving
Advertisment