ಇತ್ತೀಚಿಗೆ ಸೋಶಿಯಲ್ ಮೀಡಿಯಾ ಒಳ್ಳೆಯದ್ದಕ್ಕಿಂತ ಹೆಚ್ಚಾಗಿ ಕೆಟ್ಟ ವಿಚಾರಗಳಿಗೆ ಬಳಕೆ ಆಗ್ತಿದೆ. ಕೆಟ್ಟ ಕೆಟ್ಟ ಮೆಸೇಜ್​, ಫೋಟೋ ವಿಡಿಯೋಗಳಿಂದ ನಟಿಯರಿಗೆ ಲೈಂಗಿಕ ಕಿರುಕುಳ ಹೆಚ್ಚಾಗ್ತಿದೆ. ಈ ಹಿಂದೆ ನಟಿ ರಮ್ಯಾ ಇಂತಹ ವಿಕೃತಿ ಮನಸ್ಥಿತಿಗಳ ವಿರುದ್ಧ ದಿಟ್ಟ ಹೆಜ್ಜೆಯನ್ನಿಟ್ಟಿದ್ರು. ಇದೀಗ ಕಿರುತೆರೆ ನಟಿಯೊಬ್ಬರು ಕೂಡ ಅಶ್ಲೀಲ ಫೋಟೋ ಕಳುಹಿಸ್ತಿದ್ದ ಕಾಮುಕನ ವಿರುದ್ಧ ಬ್ರೇವ್​ ಸ್ಟೆಪ್​​​ನ್ನಿಟ್ಟು ಜೈಲಿಗೆ ಕಳುಹಿಸಿದ್ದಾರೆ..
ಪದೇ ನಟಿಯರಿಗೆ ಅಶ್ಲೀಲ ಕಾಮೆಂಟ್ ಮೂಲಕ ಕಿರುಕುಳ ಅನ್ನೋ ಸುದ್ದಿ ಬ್ರೇಕಿಂಗ್​​ ನ್ಯೂಸ್​ ಆಗ್ತಿದೆ.. ಕಂಪ್ಲೈಟ್​ ಕೊಡೋರ ಸಂಖ್ಯೆ ಹೆಚ್ಚಾಗ್ತಿದೆ.. ಇದೀಗ ಆ ಲಿಸ್ಟ್​ಗೆ ರಜನಿಯೂ ಸೇರ್ಕೊಂಡಿದ್ದಾರೆ.. ಖುಷಿ ವಿಚಾರ ಏನಾಪ್ಪ ಅಂದ್ರೆ ದೂರ ಕೊಟ್ಟ ಬೆನ್ನಲ್ಲೇ ಆರೋಪಿಯೂ ಲಾಕ್​​ ಆಗ್ಬಟ್ಟಿದ್ದಾನೆ.
ಚೆಲ್ಲಾಟ ಆಡ್ತಿದ್ದ ಕಾಮುಕ ಬಂಧನ
ಅರೆಸ್ಟ್​​ ಆಗಿರೋ ಕಾಮಿ ಹೆಸ್ರು ನವೀನ.. ಬರೀ ನವೀನ ಅಲ್ಲ ‘ನವರಂಗಿ’ ನವೀನ.. ಮೂಲತಃ ಕೇರಳದ ನಿವಾಸಿಯಾಗಿದ್ದು, ಬೆಂಗಳೂರಿನ ವೈಟ್​​ಫೀಲ್ಡ್​​ನಲ್ಲಿ ವಾಸವಿದ್ದ.. ಖಾಸಗಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಆರೋಪಿ ನಟಿಗೆ ಸತತ 3 ತಿಂಗಳಿಂದ್ಲೂ ಅಶ್ಲೀಲ ವಿಡಿಯೋಗಳನ್ನ ಕಳುಹಿಸಿ ಕಿರುಕುಳ ಕೊಡ್ತಿದ್ದು, ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದಾರೆ..
ನವೀನನ ‘ನವರಂಗಿ’ ಆಟ
ಆರೋಪಿ ನವರಂಗಿ ನವೀನ ಕಳೆದ 3 ತಿಂಗಳ ಹಿಂದೆ ​​​NAVEENZ ಎಂಬ ಫೇಸ್ ಬುಕ್ ಐಡಿಯಿಂದ ನಟಿಗೆ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ನಂತೆ.. ರಿಕ್ವೆಸ್ಟ್​ ಬಂದಿದ್ದನ್ನ ಗಮನಿಸಿದ್ದ ನಟಿ ರಜನಿ, ಆ್ಯಕ್ಸೆಪ್ಟ್​​ ಮಾಡಿಕೊಂಡಿರ್ಲಿಲ್ಲ.. ಆದರೆ ಕಾಮುಕ ನವೀನ ಫೇಸ್​​ಬುಕ್​ ಮೆಸೆಂಜರ್​​ನಲ್ಲಿ ಅಶ್ಲೀಲ ಮೆಸೆಜ್ ಮಾಡಿ ಕಿರುಕುಳ ಕೊಡೋಕೆ ಶುರು ಮಾಡಿದ್ನಂತೆ.. ಹೀಗಾಗಿ ಮೊದಲಿಗೆ ನಟಿ ಮೆಸೆಜ್ ಮಾಡದಂತೆ ಎಚ್ಚರಿಕೆ ಕೊಟ್ಟಿದ್ರಂತೆ.. ಇಷ್ಟಾದ್ರೂ ನವರಂಗಿ ನವೀನ ತನ್ನ ಆಟ ನಿಲ್ಲಿಸಿರ್ಲಿಲ್ಲ.. ಪದೇ ಪದೇ ಅಶ್ಲೀಲ ಮೆಸೇಜ್​ ಹೆಚ್ಚಾದಾಗ ನಟಿ ಆ ಐಡಿಯನ್ನ ಬ್ಲಾಕ್​ ಮಾಡಿದ್ರೂ... ಇಷ್ಟಾದ್ರೂ ಬೇರೆ ಬೇರೆ ಐಡಿಯಿಂದ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿ ವಿಕೃತಿ ಮರೆದಿದ್ನಂತೆ.. ಇದ್ರಿಂದ ಮಾನಸಿಕವಾಗಿ ಕುಗ್ಗಿದ್ದ ನಟಿ ನವಂಬರ್ 1 ರಂದು ನಾಗರಭಾವಿ ಬಳಿ ಆರೋಪಿಯನ್ನ ಕರೆಸಿಕೊಂಡಿದ್ರು.. ಅಲ್ಲಿನ ನಂದನ್ ಪ್ಯಾಲೆಸ್ ಬಳಿ ಬಂದಿದ್ದ ಕಾಮುಕನ ಜೊತೆ ಮಾತನಾಡಿದ ನಟಿ, ಈ ರೀತಿ ಮೆಸೆಜ್ ಮಾಡ್ಬೇಡ ಅಂತ ಕೊನೆಯದಾಗಿ ಬುದ್ಧಿವಾದ ಹೇಳಿದ್ರಂತೆ..
ಇದನ್ನೂ ಓದಿ: ‘ಬೆಂಗಳೂರು ಕೌಶಲ್ಯ ಶೃಂಗಸಭೆ’ಗೆ ಚಾಲನೆ ನೀಡಿದ ಸಿದ್ದರಾಮಯ್ಯ.. ವಿಶೇಷತೆ ಏನು..?
ಇಷ್ಟೆಲ್ಲಾ ಆದ್ರೂ ನವೀನ ನವರಂಗಿ ಆಟಕ್ಕೆ ಫುಲಿಸ್ಟಾಪ್​ ಬಿದ್ದಿರ್ಲಿಲ್ಲ.. ಹೀಗಾಗಿ ನೊಂದ ಸಂತ್ರಸ್ಥೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನ ಬಂಧಿಸಲಾಗಿದೆ..
ಈ ಬಗ್ಗೆ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ನಟಿ, ತುಂಬಾ ಜನ ಹೆಣ್ಮಕ್ಕಳು ಇಂತಹ ಸಮಸ್ಯೆಯನ್ನ ಫೇಸ್​ ಮಾಡ್ತಾ ಇರ್ತಾರೆ.. ಆಗ ಬ್ರೇವ್​ ಆಗಿ ಸ್ಟೆಪ್ಸ್​​ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಸದ್ಯ ಕಾಮುಕ ನವೀನ ಪೊಲೀಸರ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೀತಿದೆ.. ಒಟ್ಟಾರೆ, ಸೋಶಿಯಲ್ ಮೀಡಿಯಾದಿಂದ ಪದೇ ಪದೇ ನಟಿಯರಿಗೆ ಇಂತಹ ಕಿರುಕುಳ ಹೆಚ್ಚಾಗ್ತಿದೆ.. ಈ ಹಿಂದೆ ನಟಿ ರಮ್ಯಾ ಕೆಟ್ಟ ಮೆಸೇಜ್ ಕಳುಹಿಸಿ ವಿಕೃತಿ ಮೆರೆದಿದ್ದವರ ವಿರುದ್ಧ ಕಾನೂನು ಸಮರಕ್ಕಿಳಿದಿದ್ರು.. ಇದೀಗ ಕಿರುತೆರೆ ನಟಿಯೂ ಧೈರ್ಯ ಮಾಡಿ ಮುಂದೆ ಬಂದು ಅಶ್ಲೀಲ ಫೋಟೋ ಕಳುಹಿಸಿ ಟಾರ್ಚರ್​​ ಕೊಡ್ತಿದ್ದವನಿಗೆ ಜೈಲು ದಾರಿ ತೋರಿಸಿದ್ದು, ನಿಜಕ್ಕೂ ಮೆಚ್ಚುವಂತದ್ದು.
ವಿಶೇಷ ವರದಿ: ಅಂಕಿತಾ ರೈ, ನ್ಯೂಸ್​​ ಫಸ್ಟ್​ ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us