/newsfirstlive-kannada/media/media_files/2025/09/02/bng_tyagaraj_nagar-2025-09-02-12-22-02.jpg)
ಬೆಂಗಳೂರು: ಶ್ರೀ ವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ 15ನೇ ವರ್ಷದ ಗಣೇಶೋತ್ಸವವು ಭವ್ಯವಾಗಿ, ಅದ್ಧೂರಿಯಾಗಿ ಜರುಗಿತು. ಈ ಬಾರಿ ವಿಶೇಷ ಎಂದರೆ 7 ದಿನಗಳ ಸಪ್ತಾಹ ಕಾರ್ಯಕ್ರಮ ಎಲ್ಲರನ್ನು ಸೆಳೆಯಿತು.
ಗಣೇಶೋತ್ಸವದಲ್ಲಿ ಉಡುಪಿಯ ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶ್ರೀ ವಜ್ರಕ್ಷೇತ್ರ ವ್ಯವಸ್ಥಾಪಕರು ವಾದಿರಾಜ ಆಚಾರ್ಯರು ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ ಅವರು ಗಣೇಶೋತ್ಸವದಲ್ಲಿ ಉಪಸ್ಥಿತಿ ಇದ್ದರು.
ಇದನ್ನೂ ಓದಿ:ನಿರಂತರ ಮಳೆ, ಕುಸಿದ ಬೃಹತ್ ಬೆಟ್ಟ.. 1000ಕ್ಕೂ ಹೆಚ್ಚು ಜನ ಭೂ ಸಮಾಧಿ, ಒಬ್ಬನು ಮಾತ್ರ..
/filters:format(webp)/newsfirstlive-kannada/media/media_files/2025/09/02/pejawar_mutt_vishwa_prasanna-2025-09-02-12-28-20.jpg)
ಉತ್ಸವದಲ್ಲಿ ಪ್ರತಿದಿನ ವಿವಿಧ ಪೂಜೆಗಳು, ಮೂರು ದಿನಗಳಲ್ಲಿ ಮೂರೂ ಬಾರಿ ಅನ್ನಸಂತರ್ಪಣೆ, ಹಾಗೂ ಸ್ವಚ್ಛತೆ ಪರಿಸರ ಶುದ್ಧೀಕರಣ ಕಾರ್ಯಕ್ರಮ ನಡೆಯಿತು. ಜೊತೆಗೆ ಭಜನೆ, ಸಂಗೀತ, ನೃತ್ಯ, ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಗೆದ್ದವು. ಸುಂದರ ಅಲಂಕಾರದ ಗಣಪತಿ ವಿಗ್ರಹ ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದು, ಕೊನೆಯ ದಿನ ಭವ್ಯ ವಿಸರ್ಜನೆ ಮೆರವಣಿಗೆ ಉತ್ಸಾಹಭರಿತವಾಗಿ ನೆರವೇರಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us