/newsfirstlive-kannada/media/media_files/2026/01/12/techie-sharmila-1-2026-01-12-11-00-57.jpg)
ಬೆಂಗಳೂರು: ರಾಮಮೂರ್ತಿ ನಗರದಲ್ಲಿ ನಡೆದ ಟೆಕ್ಕಿ ಶರ್ಮಿಳಾ ಡಿಕೆ (Sharmila DK) ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಸತ್ಯ ಗೊತ್ತಾಗಿದ್ದು, ಮನೆಯಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಶರ್ಮಿಳಾ ಮೃತಪಟ್ಟಿಲ್ಲ. ಬದಲಾಗಿ ಆಕೆಯನ್ನ ಬರ್ಬರವಾಗಿ ಮುಗಿಸಲಾಗಿದೆ ಎಂಬ ವಿಷಯ ಗೊತ್ತಾಗಿದೆ. ಪ್ರಕರಣ ಸಂಬಂಧ ಕರ್ನಲ್ ಕುರೈ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಸಾಮಿ ಸತ್ಯ ಕಕ್ಕಿದ್ದಾನೆ.
ಯಾರು ಕರ್ನಲ್ ಕುರೈ..?
ಮೃತ ಶರ್ಮಿಳಾ ವಾಸವಿದ್ದ ಫ್ಲಾಟ್​ನ ಮುಂದಿನ ನಿವಾಸದಲ್ಲಿ ಕರ್ನಲ್ ಕುರೈ (Karnal Kurai) ವಾಸವಿದ್ದ. ಕೇರಳದ ಮೂಲದ ಈತ ಪಿಯುಸಿ ವಿದ್ಯಾರ್ಥಿಯಾಗಿದ್ದ. ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ. ಕಳೆದ ಎರಡು ವರ್ಷದಿಂದ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್​ನಲ್ಲಿ ಶರ್ಮಿಳಾ ವಾಸವಾಗಿದ್ದರು. ನಗರದ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡ್ತಿದ್ದ ಶರ್ಮಿಳಾಗೆ, ಆರೋಪಿ ಕರ್ನಲ್ ಕುರೈ ಪಕ್ಕದ ಮನೆ ವಾಸಿಯಾಗಿದ್ದರಿಂದ ಮುಖ ಪರಿಚಯವಿತ್ತು. ಆದರೆ ಯುವಕ ಕರ್ನಲ್ ಕುರೈ, ಶರ್ಮಿಳನ್ನು ಪ್ರೀತಿ ಮಾಡ್ತಿದ್ದ.
/filters:format(webp)/newsfirstlive-kannada/media/media_files/2026/01/12/techie-sharmila-2026-01-12-11-00-48.jpg)
ವಯಸ್ಸಲ್ಲಿ ಭಾರೀ ಪರಾಕು..!
ಕರ್ನಲ್ ವಯಸ್ಸಿನಲ್ಲಿ ಶರ್ಮಿಳಾಗಿಂತ 16 ವರ್ಷ ಚಿಕ್ಕವನು. ಕರ್ನಲ್​ಗೆ 18 ವರ್ಷ, ಶರ್ಮಿಳಾಗೆ 34 ವರ್ಷವಾಗಿತ್ತು. ಹಾಗಿದ್ದೂ ಶರ್ಮಿಳಾ ಹಿಂದೆ ಬಿದ್ದಿದ್ದ. ಆದರೆ ಈ ವಿಚಾರ ಆಕೆಗೆ ಗೊತ್ತೇ ಇರಲಿಲ್ಲ. ಆತನದ್ದು ಒನ್​ ಸೈಡ್​ ಲವ್ ಸ್ಟೋರಿ ಆಗಿತ್ತು..
ಇದನ್ನೂ ಓದಿ:ಟೆಕ್ಕಿ ಶರ್ಮಿಳಾ ದುರಂತ ಅಂತ್ಯದ ಸತ್ಯ ಬಯಲು.. ಅಂದು ಮನೆಗೆ ಎಂಟ್ರಿ ಕೊಟ್ಟಿದ್ದು PUC ಹುಡುಗ..!
/filters:format(webp)/newsfirstlive-kannada/media/media_files/2026/01/12/sharmila-2026-01-12-09-38-58.jpg)
ಅವತ್ತು ಏನಾಯ್ತು..?
ಶರ್ಮಿಳಾನ ಇಷ್ಟಪಟ್ಟಿದ್ದ ಈತ, ಜನವರಿ 3 ರಂದು ಆಕೆಯ ಮನೆಗೆ ಹಠಾತ್ ಎಂಟ್ರಿಕೊಟ್ಟಿದ್ದ. ಮನೆಯ ಟೆರಸ್​​ ಮೂಲಕ ಮನೆಯೊಳಗೆ ಪ್ರವೇಶ ಮಾಡಿದ್ದ. ಮನೆಯೊಳಗೆ ಬರುವ ಮುನ್ನ ಶರ್ಮಿಳಾರ ಒಪ್ಪಿಗೆ ಕೂಡ ಪಡೆಯಲಿಲ್ಲ. ಮನೆಯೊಳಗೆ ಬರುತ್ತಿದ್ದಂತೆಯೇ ಆಕೆಯೊಂದಿಗೆ ಅನುಚಿತ ವರ್ತನೆ ಮಾಡಿದ್ದಾನೆ. ಇದಕ್ಕೆ ಶರ್ಮಿಳಾ ವಿರೋಧ ವ್ಯಕ್ತಪಡಿಸಿದ್ದಾಳೆ. ಅಲ್ಲದೇ ಜೋರಾಗಿ ಕೂಗಿದ್ದಾರೆ. ಆಗ ಕುಪಿತಗೊಂಡ ಕುರೈ, ಶರ್ಮಿಳಾನನ್ನು ಉಸಿರುಗಟ್ಟಿಸಿ ಜೀವ ತೆಗೆದಿದ್ದಾನೆ.
ಬಳಿಕ ಸಾಕ್ಷ್ಯನಾಶ ಪಡಿಸುವ ಸಲುವಾಗಿ ಮನೆಯಲ್ಲಿ ಬಿಡ್​ಶೀಟ್​ಗೆ ಬೆಂಕಿ ಹಚ್ಚಿದ್ದಾನೆ. ಬೆಡ್ ರೂಂಗೆ ಬೆಂಕಿ ಹಾಕಿ ಸಾಕ್ಷ್ಯನಾಶಕ್ಕೆ ಯತ್ನಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಮನೆಗೆ ಬೆಂಕಿ ಹತ್ತಿರೋದನ್ನು ನೋಡಿದ್ದ ಮನೆಯ ಓನರ್​ ಪೊಲೀಸರಿಗೆ ಕರೆ ಮಾಡಿದ್ದರು. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬೆಂಕಿ ನಂದಿಸಿ ಮನೆಯೊಳಗೆ ಪ್ರವೇಶ ಮಾಡಿದಾಗ ಶರ್ಮಿಳಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತಪಟ್ಟಿರೋದಾಗಿ ತಿಳಿಸಿದ್ದರು.
ಇದನ್ನೂ ಓದಿ: ಭಾರತಕ್ಕೆ EOS-N1 ಅನ್ವೇಷಾ ಶಕ್ತಿ; ನಭಕ್ಕೆ ನೆಗೆದ ಈ ಉಪಗ್ರಹದ ತಾಖತ್ತು ಎಂಥದ್ದು..?
/filters:format(webp)/newsfirstlive-kannada/media/media_files/2026/01/05/software-engineer-sharmila-1-2026-01-05-14-17-07.jpg)
ಕೇಸ್ ಟ್ರೇಸ್ ಆಗಿದ್ದೇಗೆ?
ಇನ್ನು ಕೇಸ್​ನ​​​​​​​ ಟ್ರೇಸ್​ ಆಗಿದ್ದು ತುಂಬಾನೇ ರೋಚಕವಾಗಿದೆ. ಅಲ್ಲಿಂದ ಪರಾರಿಯಾದ ಬಳಿಕ ತನಗೇನೂ ಗೊತ್ತೇ ಇಲ್ಲ ಅನ್ನೋ ರೀತಿಯಲ್ಲಿದ್ದ. ಒಂದು ವಾರ ಪಕ್ಕದ ತಾನು ವಾಸವಿದ್ದ ಮನೆಯಲ್ಲೇ ಉಳಿದುಕೊಂಡಿದ್ದ. ನಾನು ಆಕೆಯ ಮನೆಗೆ ಎಂಟ್ರಿ ಕೊಟ್ಟಿರೋದಕ್ಕೆ ಸಿಸಿಟಿವಿ ಇಲ್ಲ. ಆಕೆಯೊಂದಿಗೆ ಫೋನಿನಲ್ಲೂ ಮಾತನ್ನಾಡಿಲ್ಲ. ನಾನು ಅಲ್ಲಿಗೆ ಹೋಗಿದ್ದನ್ನೂ ಯಾರೂ ನೋಡಿಲ್ಲ. ಸಾಕ್ಷಿಗಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿದೆ. ಹೀಗಾಗಿ ನಾನು ಸಿಕ್ಕಿ ಹಾಕಿಕೊಳ್ಳಲು ಸಾಧ್ಯನೇ ಇಲ್ಲ ಅಂದುಕೊಂಡಿದ್ದ. ಜೊತೆಗೆ ವಿಜ್ಞಾನದ ವಿದ್ಯಾರ್ಥಿ ಆಗಿದ್ದರಿಂದ ಬೆಂಕಿಯಲ್ಲಿ ಸುಟ್ಟರೆ ಯಾವುದೇ ಸಾಕ್ಷ್ಯಗಳು ಸಿಗಲ್ಲ ಅನ್ನೋದನ್ನು ಅರಿತುಕೊಂಡಿದ್ದ.
ಸಿಕ್ಕಿಬಿದ್ದಿದ್ದು ಹೇಗೆ..?
ಎಲ್ಲವನ್ನು ಸುಟ್ಟುಹಾಕಿದ ಆರೋಪಿ ಶರ್ಮಿಳಾರ ಮೊಬೈಲ್ ಕೊಂಡೊಯ್ದಿದ್ದ. ಶರ್ಮಿಳಾ ಮೊಬೈಲ್​ ಅನ್ನು ತನ್ನ ಬಳಿಯೇ ಇಟ್ಕೊಂಡಿದ್ದ. ಶರ್ಮಿಳಾ ಕೊಲೆಯಾದ ಮೂರು ದಿನಗಳ ನಂತರ ಶರ್ಮಿಳಾ ಫೋನ್​​ಗೆ ತನ್ನ ಸಿಮ್ ಹಾಕಿ ಆನ್ ಮಾಡಿದ್ದ. ಇತ್ತ, ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಶರ್ಮಿಳಾ ಫೋನ್​​ ಟ್ರ್ಯಾಕ್​ಗೆ ಇಟ್ಟಿದ್ದರು.
/filters:format(webp)/newsfirstlive-kannada/media/media_files/2026/01/05/software-engineer-sharmila-2026-01-05-14-16-21.jpg)
ಆರೋಪಿ ಯಾವಾಗ ಆಕೆಯ ಫೋನ್​ಗೆ ತನ್ನ ಸಿಮ್ ಇನ್​ಸ್ಟಾಲ್ ಮಾಡಿ ಆನ್​ ಮಾಡಿದಾಗ, ಪೊಲೀಸರು ಕರ್ನಲ್​ ಬೆನ್ನ ಹಿಂದೆ ಬಿದ್ದಿದ್ದಾರೆ. ಶರ್ಮಿಳಾ ಮೊಬೈಲ್ ಟವರ್ ಡಂಪ್ ಕೊಲೆಯಾದ ಪಕ್ಕದ ಮನೆ ತೋರಿಸ್ತಿತ್ತು. ಶರ್ಮಿಳಾ ಮೊಬೈಲ್​ಗೆ ಹಾಕಿದ್ದ ಸಿಮ್ ಕರ್ನಲ್ ಕುರೈಯದ್ದು ಎಂದು ಕನ್ಫರ್ಮ್ ಆಗಿದೆ. ಅಲ್ಲಿಗೆ ಧಾವಿಸಿದ್ದ ಪೊಲೀಸರು ಕರ್ನಲ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ರಹಸ್ಯ ಬೇಧಿಸಿದ್ದಾರೆ.
ಇದನ್ನೂ ಓದಿ:ಈ ನಗರದಲ್ಲಿ ಜನವರಿ 15ರವರೆಗೆ ಶಾಲೆಗಳಿಗೆ ರಜೆ ಘೋಷಣೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us