ಟೆಕ್ಕಿ ಶರ್ಮಿಳಾ ದುರಂತ ಅಂತ್ಯದ ಸತ್ಯ ಬಯಲು.. ಅಂದು ಮನೆಗೆ ಎಂಟ್ರಿ ಕೊಟ್ಟಿದ್ದು PUC ಹುಡುಗ..!

ಪೊಲೀಸರ ತನಿಖೆ ವೇಳೆ ಸತ್ಯ ಗೊತ್ತಾಗಿದ್ದು, ಮನೆಯಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಶರ್ಮಿಳಾ ಮೃತಪಟ್ಟಿಲ್ಲ. ಬದಲಾಗಿ ಆಕೆಯನ್ನ ಬರ್ಬರವಾಗಿ ಮುಗಿಸಲಾಗಿದೆ ಎಂಬ ವಿಷಯ ಗೊತ್ತಾಗಿದೆ. 34ರ ಮೇಲೆ 18ಕ್ಕೆ ಲವ್. ಆಮೇಲೆ ನಡೆದಿದ್ದು ಘೋರ ದುರಂತ.

author-image
Ganesh Kerekuli
Sharmila
Advertisment

ಬೆಂಗಳೂರು: ರಾಮಮೂರ್ತಿ ನಗರದಲ್ಲಿ ನಡೆದ ಟೆಕ್ಕಿ ಶರ್ಮಿಳಾ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. 

ಪೊಲೀಸರ ತನಿಖೆ ವೇಳೆ ಸತ್ಯ ಗೊತ್ತಾಗಿದ್ದು, ಮನೆಯಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಶರ್ಮಿಳಾ ಮೃತಪಟ್ಟಿಲ್ಲ. ಬದಲಾಗಿ ಆಕೆಯನ್ನ ಬರ್ಬರವಾಗಿ ಮುಗಿಸಲಾಗಿದೆ ಎಂಬ ವಿಷಯ ಗೊತ್ತಾಗಿದೆ. ಪ್ರಕರಣ ಸಂಬಂಧ ಕರ್ನಲ್ ಕುರೈ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಸಾಮಿ ಸತ್ಯ ಕಕ್ಕಿದ್ದಾನೆ. 

ಇದನ್ನೂ ಓದಿ:93 ರನ್​ಗಳಿಸಿ ಔಟಾದ ಕೊಹ್ಲಿ.. ಟೀಂ ಇಂಡಿಯಾಗೆ 4 ವಿಕೆಟ್​​ಗಳ ಗೆಲುವು

software engineer Sharmila (2)

ಯಾರು ಕರ್ನಲ್ ಕುರೈ..?

ಮೃತ ಶರ್ಮಿಳಾ ವಾಸವಿದ್ದ ಫ್ಲಾಟ್​ನ ಮುಂದಿನ ನಿವಾಸದಲ್ಲಿ ಕರ್ನಲ್ ಕುರೈ ವಾಸವಿದ್ದ. ಕೇರಳದ ಮೂಲದ ಈತ ಪಿಯುಸಿ ವಿದ್ಯಾರ್ಥಿಯಾಗಿದ್ದ. ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ. ಕಳೆದ ಎರಡು ವರ್ಷದಿಂದ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್​ನಲ್ಲಿ ಶರ್ಮಿಳಾ  ವಾಸವಾಗಿದ್ದರು. ನಗರದ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡ್ತಿದ್ದ ಶರ್ಮಿಳಾಗೆ, ಆರೋಪಿ ಕರ್ನಲ್ ಕುರೈ ಪಕ್ಕದ ಮನೆ ವಾಸಿಯಾಗಿದ್ದರಿಂದ ಮುಖ ಪರಿಚಯವಿತ್ತು. ಆದರೆ ಯುವಕ ಕರ್ನಲ್ ಕುರೈ, ಶರ್ಮಿಳನ್ನು ಪ್ರೀತಿ ಮಾಡ್ತಿದ್ದ. 

software engineer Sharmila

ವಯಸ್ಸಲ್ಲಿ ಭಾರೀ ಪರಾಕು..!

ಕರ್ನಲ್ ವಯಸ್ಸಿನಲ್ಲಿ ಶರ್ಮಿಳಾಗಿಂತ 16 ವರ್ಷ ಚಿಕ್ಕವನು. ಕರ್ನಲ್​ಗೆ 18 ವರ್ಷ, ಶರ್ಮಿಳಾಗೆ 34 ವರ್ಷವಾಗಿತ್ತು. ಹಾಗಿದ್ದೂ ಶರ್ಮಿಳಾ ಹಿಂದೆ ಬಿದ್ದಿದ್ದ. ಆದರೆ ಈ ವಿಚಾರ ಆಕೆಗೆ ಗೊತ್ತೇ ಇರಲಿಲ್ಲ. ಆತನದ್ದು ಒನ್​ ಸೈಡ್​ ಲವ್ ಸ್ಟೋರಿ ಆಗಿತ್ತು.. 

ಅವತ್ತು ಏನಾಯ್ತು..? 

ಶರ್ಮಿಳಾನ ಇಷ್ಟಪಟ್ಟಿದ್ದ ಈತ, ಜನವರಿ 3 ರಂದು ಆಕೆಯ ಮನೆಗೆ ಹಠಾತ್ ಎಂಟ್ರಿಕೊಟ್ಟಿದ್ದ. ಮನೆಯ ಟೆರಸ್​​ ಮೂಲಕ ಮನೆಯೊಳಗೆ ಪ್ರವೇಶ ಮಾಡಿದ್ದ. ಮನೆಯೊಳಗೆ ಬರುವ ಮುನ್ನ ಶರ್ಮಿಳಾರ ಒಪ್ಪಿಗೆ ಕೂಡ ಪಡೆಯಲಿಲ್ಲ. ಮನೆಯೊಳಗೆ ಬರುತ್ತಿದ್ದಂತೆಯೇ ಆಕೆಯೊಂದಿಗೆ ಅನುಚಿತ ವರ್ತನೆ ಮಾಡಿದ್ದಾನೆ. ಇದಕ್ಕೆ ಶರ್ಮಿಳಾ ವಿರೋಧ ವ್ಯಕ್ತಪಡಿಸಿದ್ದಾಳೆ. ಅಲ್ಲದೇ ಜೋರಾಗಿ ಕೂಗಿದ್ದಾರೆ. ಆಗ ಕುಪಿತಗೊಂಡ ಕುರೈ, ಶರ್ಮಿಳಾನನ್ನು ಉಸಿರುಗಟ್ಟಿಸಿ ಜೀವ ತೆಗೆದಿದ್ದಾನೆ.

ಇದನ್ನೂ ಓದಿ: ಗಿಲ್ ಪಡೆಗೆ ಒತ್ತಡ ಹೆಚ್ಚಿಸಿದ ನ್ಯೂಜಿಲೆಂಡ್​.. ಹೇಗಿತ್ತು ಬ್ಯಾಟಿಂಗ್..? 

software engineer Sharmila

ಬಳಿಕ ಸಾಕ್ಷ್ಯನಾಶ ಪಡಿಸುವ ಸಲುವಾಗಿ ಮನೆಯಲ್ಲಿ ಬಿಡ್​ಶೀಟ್​ಗೆ ಬೆಂಕಿ ಹಚ್ಚಿದ್ದಾನೆ. ಬೆಡ್ ರೂಂಗೆ ಬೆಂಕಿ ಹಾಕಿ ಸಾಕ್ಷ್ಯನಾಶಕ್ಕೆ ಯತ್ನಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಮನೆಗೆ ಬೆಂಕಿ ಹತ್ತಿರೋದನ್ನು ನೋಡಿದ್ದ ಮನೆಯ ಓನರ್​ ಪೊಲೀಸರಿಗೆ ಕರೆ ಮಾಡಿದ್ದರು. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬೆಂಕಿ ನಂದಿಸಿ ಮನೆಯೊಳಗೆ ಪ್ರವೇಶ ಮಾಡಿದಾಗ ಶರ್ಮಿಳಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತಪಟ್ಟಿರೋದಾಗಿ ತಿಳಿಸಿದ್ದರು. 

ಶರ್ಮಿಳಾ ಯಾರು..?

ಮೃತ ಶರ್ಮಿಳಾ ಮೂಲತಃ ಮಂಗಳೂರಿನವರು. ಅಕ್ಸೆಂಚರ್​ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ಶರ್ಮಿಳಾ ಬೆಂಗಳೂರಿನ ಸುಬ್ರಮಣ್ಯ ಲೇಔಟ್​ನಲ್ಲಿ ವಾಸವಿದ್ದರು. ಮಂಗಳೂರನಿಂದ ಎರಡು ವರ್ಷದ ಹಿಂದೆ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದರು. ಕುಶಾಲಪ್ಪ ಅನ್ನೋರ ಮಗಳಾಗಿದ್ದಳು.

ಇದನ್ನೂ ಓದಿ: ಈ ನಗರದಲ್ಲಿ ಜನವರಿ 15ರವರೆಗೆ ಶಾಲೆಗಳಿಗೆ ರಜೆ ಘೋಷಣೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Software engineer Sharmila
Advertisment