/newsfirstlive-kannada/media/media_files/2025/09/13/bengalore-accident-2025-09-13-12-08-40.jpg)
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಪ್ಯಾಸೆಂಜರ್​ ಆಟೋಗೆ ಗೂಡ್ಸ್​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತ ಕಾಮಾಕ್ಷಿಪಾಳ್ಯ ರಸ್ತೆಯಲ್ಲಿ ನಡೆದಿದೆ.
ಮೃತರು ಯೇಸು ಡಿ ಹಾಗೂ ಜೆನಿಫರ್ ಮೃತ ದುರ್ದೈವಿಗಳು. ಅಪಘಾತದಲ್ಲಿ ಆಟೋ ಚಾಲಕ, ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಆಟೋದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಅಪಘಾತ ಸಂಭವಿಸಿದ ಪರಿಣಾಮ ಕಾಮಾಕ್ಷಿಪಾಳ್ಯ ಟು ಸುಮನಹಳ್ಳಿವರೆಗೆ 5 ಕಿಲೋ ಮೀಟರ್​ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ:ಹಾಸನ ದುರಂತ.. ಜೀವ ಕಳೆದುಕೊಂಡವ್ರೆಲ್ಲ 25 ವರ್ಷದೊಳಗಿನ ಯುವಕರು..
ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಎರಡು ತುಂಡಾಗಿದೆ. ಲಾರಿ ಬ್ರೇಕ್ ಫೇಲ್ಯೂರ್ ಆಗಿ ದುರ್ಘಟನೆ ನಡೆದಿರುವ ಶಂಕೆ ಇದೆ. ಲಾರಿ ಡ್ರೈವರ್ ಓಡಿ ಹೋಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us