Advertisment

ವೈದ್ಯೆ ಕೃತಿಕಾ ರೆಡ್ಡಿ ಪತಿಗೆ ಇತ್ತಾ ಅನೈತಿಕ ಸಂಬಂಧ..? ಬಿಗ್ ಅಪ್ಡೇಟ್ಸ್​..!

ರಾಜ್ಯಾದ್ಯಂತ ಬೆಚ್ಚಿ ಬೀಳಿಸಿದ್ದ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಪತಿ ಮಹೇಂದ್ರಗೆ ಅಕ್ರಮ ಸಂಬಂಧ ಇತ್ತಾ ಎಂಬ ಶಂಕೆ ಪೊಲೀಸ್ ತನಿಖೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ಆರೋಪಿ ಡಾ.ಮಹೆಂದ್ರನ ಎರಡೂ ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ.

author-image
Ganesh Kerekuli
doctor photo3
Advertisment

ರಾಜ್ಯಾದ್ಯಂತ ಬೆಚ್ಚಿ ಬೀಳಿಸಿದ್ದ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಪತಿ ಮಹೇಂದ್ರಗೆ ಅಕ್ರಮ ಸಂಬಂಧ ಇತ್ತಾ ಎಂಬ ಶಂಕೆ ಪೊಲೀಸ್ ತನಿಖೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ಆರೋಪಿ ಡಾ.ಮಹೆಂದ್ರನ ಎರಡೂ ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ. 

Advertisment

ಆರೋಪಿ ಮಹೇಂದ್ರ ಮೊಬೈಲ್​ಗಳು ವಶಕ್ಕೆ

ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಕೊಲೆ ಆರೋಪಿ ಡಾ.ಮಹೇಂದ್ರ ಅವರ ಎರಡೂ ಮೊಬೈಲ್​ಗಳನ್ನು ವಶಪಡಿಸಿಕೊಂಡಿದ್ದಾರೆ. ರಿಲೇಶನ್​​ಶಿಪ್​ನಲ್ಲಿದ್ದವಳ ಜೊತೆ ಮಾತನಾಡಲು ಆರೋಪಿ ಬೇರೆ ಮೊಬೈಲ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆ ಆರೋಪಿಯ ಎರಡೂ ಮೊಬೈಲ್​ಗಳನ್ನು ಪೊಲೀಸರು ವಶಕ್ಕೆ ಪಡೆದು.. ಕೊಲೆ ಪ್ಲ್ಯಾನ್​ನಲ್ಲಿ ಆಕೆಯ ಕೈವಾಡ ಇದ್ಯಾ? ಆಕೆ ಮತ್ತು ಮಹೇಂದ್ರ ಇಬ್ಬರು ಸೇರಿ ಕೊಲೆ ಸ್ಕೆಚ್ ಹಾಕಿದ್ರಾ? ಎಂಬುವುದರ ಕುರಿತು ತನಿಖೆ ನಡೆಯಲಿದೆ. ಆರೋಪಿ ಮೊಬೈಲ್​ನನ್ನು FSLಗೆ ಕಳುಹಿಸಲು ಪೊಲೀಸರು ಸಜ್ಜಾಗಿದ್ದಾರೆ. ಒಂದು ವೇಳೆ ಆಕೆಯ ಕೈವಾಡವಿದ್ದರೆ..ಅವಳಿಗೂ ಬಂಧನದ ಬಿಸಿ ತಟ್ಟಲಿದೆ. 

ವಿವಿಧ ಆಯಾಮಗಳಲ್ಲಿ ತನಿಖೆ..ಏನಿದು..?

ಮಾರತ್​ಹಳ್ಳಿ ಪೊಲೀಸರು ಪ್ರಕರಣವನ್ನು ಮೂರು ಆಯಾಮಗಳಲ್ಲಿ ತನಿಖೆ ಮಾಡಲು ನಿರ್ಧರಿಸಿದ್ದಾರೆ. ಮೊದಲನೇಯದಾಗಿ ಆರೋಪಿಗೆ ಅಕ್ರಮ ಸಂಬಂಧವಿರೋ ಬಗ್ಗೆ ಸಂಶಯದ ಆಧಾರಿತ ತನಿಖೆ? ಎರಡನೇಯದಾಗಿ  ಹಣಕಾಸಿನ ವಿಚಾರದ ಆಯಾಮದಲ್ಲಿ ತನಿಖೆ? ಹಾಗು ಮೂರನೆಯದಾಗಿ ಅನಸ್ತೇಷಿಯಾ ಬಳಕೆಗೆ ಡ್ರಗ್ಸ್​ ಎಲ್ಲಿಂದ ತಂದಿದ್ದರು ಅನ್ನೋ ಆಯಾಮಾದಲ್ಲಿ ತನಿಖೆ ನಡೆಸಲಿದ್ದಾರೆ. ಜೊತೆಗೆ ಆರೋಪಿಯ ಆರು ತಿಂಗಳ ಪೋನ್ ಕಾಲ್​ಗಳನ್ನು ಸಿಡಿಆರ್​ಗೆ ಹಾಕಿದ್ದಾರೆ. 

ಇದನ್ನೂ ಓದಿ:ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಕೇಸ್: ಇವತ್ತಿನ ಅಪ್ಡೇಟ್​ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Victoria Hospital DOCTOR HUSBAND MURDERS HIS WIFE Dr Kruthika M Reddy
Advertisment
Advertisment
Advertisment