/newsfirstlive-kannada/media/media_files/2025/10/16/doctor-photo-2025-10-16-08-59-51.jpg)
ರಾಜ್ಯಾದ್ಯಂತ ಬೆಚ್ಚಿಬೀಳಿಸಿದ್ದ ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಸಿಕ್ಕಿದೆ.. ನಿನ್ನೆ ಪ್ರಕರಣದ ಎಫ್​ಎಸ್​ಎಲ್ ವರದಿ ಬಹಿರಂಗವಾಗಿತ್ತು. ಆದ್ರೀಗ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆ ಮತ್ತೆ ಕೃತಿಕಾ ತಂದೆ ಮುನಿಯನ್ನು ಪೊಲೀಸರು ಮಾರತ್​ಹಳ್ಳಿ ಪೊಲೀಸ್ ಠಾಣೆಗೆ ಕರೆಸಿ, ಕೃತಿಕಾ ಬಳಸುತ್ತಿದ್ದ ಲ್ಯಾಪ್ ಟಾಪ್, ಮೊಬೈಲ್​​ಗಳನ್ನು ನೀಡಲು ಸೂಚನೆ ನೀಡಿದ್ದಾರೆ.
ಪ್ರಕರಣದ ಹಿನ್ನಲೆ..
ಬೆಂಗಳೂರು ನಗರದ ಮಾರತಹಳ್ಳಿಯಲ್ಲಿ ವೈದ್ಯೆ ಕೃತಿಕಾ ರೆಡ್ಡಿಯನ್ನ ಅವರ ಪತಿಯೋ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತ ಕೃತಿಕಾಗೆ ಅಜೀರ್ಣತೆ, ಗ್ಯಾಸ್ಟ್ರಿಕ್ ಹಾಗೂ ಲೋ ಶುಗರ್ ಸಮಸ್ಯೆ ಇತ್ತು. ಆದ್ರೆ ಇದನ್ನು ಅವರ ಮನೆಯವರು ಮುಚ್ಚಿಟ್ಟು ಮದುವೆ ಮಾಡಿದ್ದಾರೆ ಎಂಬ ಕಾರಣಕ್ಕೆ ಪತಿ ಡಾ. ಮಹೇಂದ್ರ ರೆಡ್ಡಿ ಆಕೆಯನ್ನು ಕೊಲೆ ಮಾಡಿದ್ದಾನೆ ಅನ್ನೋದು ತನಿಖೆಯಿಂದ ಗೊತ್ತಾಗಿದೆ.
ಇಂದಿನ ಅಪ್ಡೇಟ್ ಏನು..?
ನಿನ್ನೆ ವೈದ್ಯೆ ಕೃತಿಕಾ ರೆಡ್ಡಿಯ ತಂದೆ ಮುನಿಯನ್ನು ಮಾರತ್​ಹಳ್ಳಿ ಪೊಲೀಸರು ಠಾಣೆಗೆ ಕರೆಸಿದ್ದಾರೆ. ಕೃತಿಕಾ ಬಳಸುತ್ತಿದ್ದ ಲ್ಯಾಪ್​ಟಾಪ್, ಮೊಬೈಲ್​ಗಳನ್ನು ತಮ್ಮ ವಶಕ್ಕೆ ನೀಡಲು ಸೂಚನೆ ನೀಡಿದ್ದಾರೆ. ಇಬ್ಬರ ಮಧ್ಯೆ ವೈಮನಸ್ಸು ಏನಾದರು ಇತ್ತಾ? ಇಬ್ಬರು ಆಗಾಗ ಏನಾದ್ರು ಜಗಳವಾಡಿದ್ದಾರಾ? ಮೊಬೈಲ್‌ನಲ್ಲಿ ಏನಾದ್ರು ರೆಕಾರ್ಡಿಂಗ್ಸ್ ಇದೆಯಾ? ಎಂಬುವುದರ ಕುರಿತು ತನಿಖೆ ನಡೆಸಲಿದ್ದಾರೆ.
ಇದನ್ನೂ ಓದಿ:ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಕೇಸ್; ಇಸ್ಕಾನ್‌ಗೆ ಮನೆ ದಾನ ಮಾಡಿದ ಮೃತ ಡಾ ಕೃತಿಕಾ ತಂದೆ
ಹೆಚ್ಚುವರಿ ತನಿಖೆಗೆ ಪೊಲೀಸರು ಸಜ್ಜು..!
ಕೃತಿಕ ದಂಪತಿ ವಾಸವಿದ್ದ ಮನೆಯಲ್ಲಿನ ಸಿಸಿಟಿವಿಗಳನ್ನೂ ಸಹ ಪರಿಶೀಲನೆ ಮಾಡಲು ಪೊಲೀಸರು ತಯಾರಿ ನಡೆಸಿದ್ದು, ಡಿವಿಆರ್ ವಶಕ್ಕೆ ಪಡೆಯಲಿದ್ದಾರೆ. ಸಿಸಿಟಿವಿ ಫೂಟೆಜ್​ನಿಂದ ಇಬ್ಬರ ಚಲನವಲನಗಳ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ. ಮುನಿರೆಡ್ಡಿ ಹೇಳಿಕೆಯನ್ನು ಸಹ ಪಡೆಯಲಿರುವ ಪೊಲೀಸರು ಪಡೆಯಲಿದ್ದಾರೆ. ಕೃತಿಕಾ ರೆಡ್ಡಿ ಸ್ನೇಹಿತರನ್ನು ಸಹ ಕರೆಸಿ.. ಕೃತಿಕಾ ಯಾರ ಜೊತೆ ತುಂಬಾ ಕ್ಲೋಸ್ ಆಗಿದ್ದರು? ಏನಾದರು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರಾ? ಎಂಬುವುದರ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ.