Advertisment

ರಾಷ್ಟ್ರೀಯ ಉತ್ತಮ ಶಿಕ್ಷಕ ಪುರಸ್ಕೃತ ಪಿ.ಜಿ ದ್ವಾರಕನಾಥ್ ನಿಧನ

ರಾಜಾಜಿನಗರ 1st ಬ್ಲಾಕ್​ನಲ್ಲಿರುವ ವಿದ್ಯಾವರ್ಧಕ ಸಂಘ ಶಾಲೆಯ ಚೇರ್ಮನ್ ಪಿ.ಜಿ ದ್ವಾರಕನಾಥ್ ನಿಧನರಾಗಿದ್ದಾರೆ. ಇವರು ರಾಷ್ಟ್ರೀಯ ಉತ್ತಮ ಶಿಕ್ಷಕ ಪುರಸ್ಕೃತರಾಗಿದ್ದರು.

author-image
Ganesh Kerekuli
P G Dwarkanath (1)
Advertisment

ಬೆಂಗಳೂರು: ರಾಜಾಜಿನಗರ 1st ಬ್ಲಾಕ್​ನಲ್ಲಿರುವ ವಿದ್ಯಾವರ್ಧಕ ಸಂಘ ಶಾಲೆಯ ಚೇರ್ಮನ್ ಪಿ.ಜಿ ದ್ವಾರಕನಾಥ್ ನಿಧನರಾಗಿದ್ದಾರೆ. ಇವರು ರಾಷ್ಟ್ರೀಯ ಉತ್ತಮ ಶಿಕ್ಷಕ ಪುರಸ್ಕೃತರಾಗಿದ್ದರು. 

Advertisment

ದ್ವಾರಕನಾಥ್ ಅವರು ಶುಕ್ರವಾರ ರಾತ್ರಿ 9 ಗಂಟೆಗೆ ಆರ್‌ಆರ್ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶಿಕ್ಷಕರಾಗಿ ವೃತ್ತಿಯಿಂದ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿ ಶಾಲೆಯ ಚೇರ್ಮನ್ ಆಗಿದ್ದರು. 25 ವರ್ಷಗಳ ಕಾಲ ಹೈಸ್ಕೂಲ್ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಇವರು ಶಾಲೆಯ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದರು. 

ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅವರ ವ್ಯಾಪಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವಕ್ಕಾಗಿ ಸಂಘದ ಕಾರ್ಯದರ್ಶಿಗಳಾಗಿ‌ ನೇಮಕ ಮಾಡಲಾಗಿತ್ತು. ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದರು. ವಿವಿಎಸ್ ಸಂಸ್ಥೆಗಳಿಗೆ ಮಾರ್ಗದರ್ಶಿ ಶಕ್ತಿ ಮತ್ತು ಬೆಂಬಲದ ಆಧಾರ ಸ್ತಂಭವಾಗಿದ್ದರು. ಅವರ ದೃಷ್ಟಿ ಮತ್ತು ನಾಯಕತ್ವವು ವಿವಿಎಸ್‌ನ ಬೆಳವಣಿಗೆಗೆ ಕಾರಣವಾಗಿತ್ತು. 

ಅಷ್ಟೇ ಅಲ್ಲ, ಇವರ ಮಾರ್ಗದರ್ಶನದಲ್ಲಿ ಶಾಲೆಯು ಪ್ರತಿವರ್ಷ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಂಡಿದ್ದರು. ಅದೆಷ್ಟೊ ವಿದ್ಯಾರ್ಥಿಗಳಿಗೆ ಪಾಠಮಾಡಿದ್ದ ನೆಚ್ಚಿನ ಮೇಷ್ಟ್ರು ಆಗಿದ್ದರು. ಶಾಲೆಯ ಬಗ್ಗೆ ಸದಾ ಯೋಚಿಸುತ್ತಿದ್ದ ಶಿಸ್ತಿನ ಸಿಪಾಯಿಯ ಅಗಲಿಕೆಯಿಂದ ಶಾಲಾ ಸಿಬ್ಬಂದಿ ದುಃಖತಪ್ತರಾಗಿದ್ದಾರೆ. 

Advertisment

ಇದನ್ನೂ ಓದಿ:ಈ ವಾರ ಮನೆಯಿಂದ ಆಚೆ ಹೋಗೋರು ಯಾರು? ಕಿಚ್ಚನ ಪಂಚಾಯ್ತಿಗಾಗಿ ವೀಕ್ಷಕರು ಎಕ್ಸೈಟ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

P.G. Dwarakanath
Advertisment
Advertisment
Advertisment