/newsfirstlive-kannada/media/media_files/2025/08/25/vijay-jadhav-banjara-2025-08-25-20-43-35.jpg)
ಬೆಂಗಳೂರು: ಆಲ್ ಇಂಡಿಯಾ ಬಂಜಾರ ಸೇವಾ ಸಂಘ (AIBSS) ಕರ್ನಾಟಕ ಘಟಕಕ್ಕೆ ವಿಜಯ ಜಾಧವ ಅವರನ್ನು ನೇಮಕ ಮಾಡಲಾಗಿದೆ.
ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕರ್ನಾಟಕ ಉಸ್ತುವಾರಿ ಹಾಗೂ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ.ರಾಮಾ ನಾಯ್ಕ್ ಶಿಫಾರಸ್ಸಿನ ಮೇರೆಗೆ ಅನುಮೋದನೆ ನೀಡಲಾಗಿದೆ. ಆಗಸ್ಟ್ 13 ರಂದು ಗುಜರಾತ್ನ ಅಹಮದಾಬಾದ್ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಿತು.
ಈ ಸಭೆಯಲ್ಲಿ ಸರ್ವಾನುಮತದಿಂದ ವಿಜಯ ಜಾಧವ ಹೆಸರನ್ನು ಅನುಮೋದನೆ ನೀಡಲಾಗಿದೆ. ಕರ್ನಾಟಕ ಘಟಕಕ್ಕೆ ಯುವ ನಾಯಕತ್ವ ಕೊಡಲು ವಿಜಯ ಜಾಧವ ಆಯ್ಕೆ ಆಗಿದೆ. ಅವರ ಸೇವಾವಧಿಯೂ ತಕ್ಷಣದಿಂದ ಜಾರಿಗೆ ಬರುವಂತೆ ಎಐಬಿಎಸ್ಎಸ್ ಸೂಚಿಸಿದೆ. ಇನ್ನು, ಅಧಿಕಾರ ಅವಧಿಯು ಮುಂದಿನ 5 ವರ್ಷಗಳ ಕಾಲ ಇರಲಿದೆ.
ಇದೇ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷರಾದ ಪಾಂಡುರಂಗ ಅವರ ಸೇವಾವಧಿಯನ್ನು ಅಭಿನಂದಿಸಲಾಯಿತು ಎಂದು ರಾಷ್ಟ್ರೀಯ ಅಧ್ಯಕ್ಷರಾದ ಡಾ.ಟಿ.ಸಿ.ರಾಠೋಡ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ದಸರಾ ಉದ್ಘಾಟನೆಗೆ ತಕರಾರು; ಬಾನು ಮುಷ್ತಾಕ್ ಹೇಳಿದ್ದೇನು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ