Advertisment

ಪತಿಯಿಂದಲೇ ಜೀವ ಕಳೆದುಕೊಂಡ ಕೃತಿಕಾ ರೆಡ್ಡಿ ಯಾರು? ಆರೋಪಿಯ ಹಿನ್ನಲೆ ಏನು?

ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ವೈದ್ಯೆ ಕೃತಿಕಾ ರೆಡ್ಡಿ ಪ್ರಕರಣವು ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸ್ತಿದ್ದಾರೆ.

author-image
Ganesh Kerekuli
pr
Advertisment

ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ವೈದ್ಯೆ ಕೃತಿಕಾ ರೆಡ್ಡಿ ಪ್ರಕರಣವು ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತೀವ್ರ ವಿಚಾರಣೆ ನಡೆಸ್ತಿದ್ದಾರೆ. 

Advertisment

ಕೃತಿಕಾ ರೆಡ್ಡಿ ಯಾರು? 

29 ವರ್ಷದ ವೈದ್ಯೆ ಕೃತಿಕಾ ರೆಡ್ಡಿ ಬೆಂಗಳೂರಿನ ವರ್ತೂರು ಬಳಿಯ ಮುನೇನಕೊಳಲು ನಿವಾಸಿ ಮುನಿ ದಂಪತಿಗೆ ಜನಿಸಿದ್ದರು. ವೈದ್ಯೆ ಕೃತಿಕಾಗೆ ಒಬ್ಬ ಸಹೋದರಿ ಕೂಡ ಇದ್ದಾರೆ. ಅವರು ಸಹ ಡೆಂಟಿಸ್ಟ್​ ಆಗಿದ್ದಾರೆ. ಬೆಂಗಳೂರಿನ ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ  MBBS ಪದವಿ ಪಡೆದ ಕೃತಿಕಾ, ನಂತರ ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಡರ್ಮಟಾಲಜಿ ವಿಷಯದಲ್ಲಿ ಎಂ.ಡಿ ಪದವಿಯನ್ನು ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಕಲ್ಯಾಣನಗರದಲ್ಲಿರುವ ರೂಟ್ಸ್ ಇನ್ಸಿಟಿಟ್ಯೂಟ್ ಡರ್ಮಟಾಲಜಿಯಲ್ಲಿ ಫೆಲೋಶಿಫ್ ಸಹ ಮುಗಿಸಿದ್ದಾರೆ. ಮದುವೆಗೂ ಮುನ್ನಾ ಸ್ಕಿನ್ ಸ್ಪೆಷಲಿಸ್ಟ್​ ಸಹ ಆಗಿದ್ದರು.

ಕೊಲೆ ಆರೋಪಿ ಮಹೇಂದ್ರ ಡೀಟೆಲ್ಸ್​..!

ಬೆಂಗಳೂರಿನ ಗುಂಜೂರಿನ ನಿವಾಸಿಗಳಾದ ಬಿಲ್ಡರ್ ಶ್ರೀನಿವಾಸ್ ರೆಡ್ಡಿ ದಂಪತಿಗೆ ಆರೋಪಿ ಡಾ. ಮಹೇಂದ್ರ ಜನಿಸಿದ್ದಾರೆ. ಮೂವರು ಮಕ್ಕಳ ಪೈಕಿ ಮಹೇಂದ್ರ ಎರಡನೇಯವರಾಗಿದ್ದಾರೆ. ಇನ್ನೂ ಇವರ ತಮ್ಮ ಕೂಡ ವೃತ್ತಿಯಲ್ಲಿ ವೈದ್ಯರಾಗಿದ್ದು, ಅಣ್ಣ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ಆರೋಪಿ ಡಾಕ್ಟರ್ ಮಹೇಂದ್ರ ಜನರಲ್ ಫಿಸಿಷಿಯನ್​​ನಲ್ಲಿ MBBS ಪದವಿ ಪಡೆದಿದ್ದು, ಗ್ಯಾಸ್ಟ್ರೋ ಸರ್ಜರಿಯಲ್ಲಿ ಎಂ.ಎಸ್ ಪದವಿ ಪಡೆದಿದ್ದಾರೆ. 2024 ಮೇ 06 ರಂದು ಗುಂಜೂರಿನ ಮಂತ್ರ ಕಲ್ಯಾಣಮಂಟಪದಲ್ಲಿ  ಕೃತಿಕಾ  ಹಾಗೂ ಮಹೇಂದ್ರ ಅವರ ವಿವಾಹವಾಗಿತ್ತು. 2025 ಏಪ್ರಿಲ್ 24 ರಂದು ವೈದ್ಯೆ ಸಾವನ್ನಪ್ಪಿದ್ದರು. ಪತ್ನಿ ಸಾವಿನ ನಂತರ ಉಡುಪಿಯ ಮಣಿಪಾಲದಲ್ಲಿ ಗ್ಯಾಸ್ಟ್ರೋ ಸರ್ಜರಿ ಸರ್ಜನ್ ಆಗಿ ಕೊಲೆ ಆರೋಪಿ ಮಹೇಂದ್ರ ಸೇವೆ ಸಲ್ಲಿಸುತ್ತಿದ್ದಾನೆ.

ಇದನ್ನೂ ಓದಿ:ವೈದ್ಯೆ ಕೃತಿಕಾ ರೆಡ್ಡಿ ಪತಿಗೆ ಇತ್ತಾ ಅನೈತಿಕ ಸಂಬಂಧ..? ಬಿಗ್ ಅಪ್ಡೇಟ್ಸ್​..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru couple Bengaluru News Bengaluru case DOCTOR HUSBAND MURDERS HIS WIFE Dr Kruthika M Reddy
Advertisment
Advertisment
Advertisment