/newsfirstlive-kannada/media/media_files/2025/09/23/bengaluru-2025-09-23-12-38-15.jpg)
ರಾಜ್ಯದಲ್ಲಿ ‘ಪ್ರಜ್ವಲ್ ರೇವಣ್ಣ ಮಾದರಿ’ಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕನ ಮೇಲೆ ಸಂತ್ರಸ್ತೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ನನ್ನನ್ನ ದೈಹಿಕವಾಗಿ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಅಲ್ಲದೇ ಕೆಲವು ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣವನ್ನು ಸೆರೆ ಹಿಡಿದುಕೊಂಡಿದ್ದಾನೆ. ಆತನ ಬಳಿ ಸುಮಾರು 2500 ವಿಡಿಯೋಗಳಿವೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.
ಹಿಂದೂ ಹುಡುಗಿಯರೇ ಟಾರ್ಗೆಟ್​..?
ಸಂತ್ರಸ್ತ ಮಹಿಳೆ ಮಾಡಿರುವ ಆರೋಪದ ಪ್ರಕಾರ, ಈತ ಹಿಂದೂ ಹೆಣ್ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದನಂತೆ. ‘ನೀ ಹಿಂದೂ, ನಾನ್ ಕ್ರಿಶ್ಚಿಯನ್. ನಾನು ನಿನ್ನೆ ಹೇಗೆ ಮದುವೆ ಆಗಲಿ ಎಂದು ಆಕೆಗೆ ಹೇಳಿದ್ದಾನೆ. ನಿನ್ನ ಮದ್ವೆಯಾಗೋಕೆ ಆಗಲ್ಲ ಎಂದಿದ್ದಾನೆ. ನಾನೀಗ ಒಂದು ತಿಂಗಳ ಗರ್ಭಿಣಿ. ನಾನೇನು ಮಾಡಲಿ. ನಾನೀಗ ಗರ್ಭಿಣಿಯಾಗಿದ್ದು ಆತ ಎಲ್ಲಿದ್ದರೂ ಬರಬೇಕು. ಬಂದು ನನಗೆ ಉತ್ತರ ನೀಡಬೇಕು ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ.
ಇದನ್ನೂ ಓದಿ: ಮ್ಯಾಥಿವ್ ಬಳಿ 2500 ಅಶ್ಲೀಲ ವಿಡಿಯೋ ಆರೋಪ.. ಸಂತ್ರಸ್ತೆಗೆ ಮೋಸ ಮಾಡಿದ್ದು ಹೇಗೆ..?
ಹೊಟ್ಟೆಯಲ್ಲಿ ಒಂದು ಮಗು ಕೊಟ್ಟು ಹೋಗಿದ್ದಾನೆ. ಅದಕ್ಕೆ ಆತನ ಅಪ್ಪನ ಸಪೋರ್ಟ್​ ಆಗಿದೆ. ಒಂದು ತಿಂಗಳ ಹಿಂದೆ ಇಬ್ಬರ ನಡೆಗಳ ಮೇಲೆ ನನಗೆ ಅನುಮಾನ ಬಂದಿತ್ತು. ಆತನ ಮೊಬೈಲ್​​ನಲ್ಲಿ ಸುಮಾರು 2500ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಇದ್ದವು. ಆತನ ಸರಿ ದಾರಿಗೆ ತರಬೇಕು ಅಂದುಕೊಂಡು ನಾನು ಪ್ರಯತ್ನ ಮಾಡುತ್ತಿದ್ದೆ. ಈಗ ನೋಡಿದ್ರೆ ಆತನೇ ಇಲ್ಲ. ನನಗೆ ಅಪ್ಪ, ಅಮ್ಮ ಯಾರೂ ಇಲ್ಲ. ಅದನ್ನೇ ಆತ ಮಿಸ್ ​ಯೂಸ್ ಮಾಡಿಕೊಂಡ. ದಯವಿಟ್ಟು ನನಗೆ ಸಹಾಯ ಮಾಡಿ ಅಂತಾ ಕಣ್ಣೀರು ಇಟ್ಟಿದ್ದಾಳೆ.
ಇನ್ನು ಕೋಣನಕುಂಟೆ ಪೊಲೀಸ್ ಠಾಣೆಗೆ ಹೋದಾಗ ಕೇಸ್ ತೆಗೆದುಕೊಳ್ಳಲು ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಸಂತ್ರಸ್ತೆ ಮಹಿಳಾ ಆಯೋಗದ ಮೊರೆ ಹೋಗಿದ್ದಾಳೆ. ಮಹಿಳಾ ಆಯೋಗದಿಂದ ಕೋಣನಕುಂಟೆ ಪೊಲೀಸರಿಗೆ ಮೌಖಿಕ ಸೂಚನೆ ಸಿಕ್ಕಿದೆ. ಆದರೂ ಕೂಡ ಪೊಲೀಸರು ಸರಿಯಾಗಿ ರೆಸ್ಪಾನ್ಸ್ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:2500 ವಿಡಿಯೋಗಳು! ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ